ವಿಶ್ವಕಪ್ 2023: ನ್ಯೂಝಿಲ್ಯಾಂಡ್ ಗೆ 389 ರನ್ ಗುರಿ ನೀಡಿದ ಆಸ್ಟ್ರೇಲಿಯ
ಧರ್ಮಶಾಲಾ: ನ್ಯೂಝಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಸಂಘಟಿತ ಬ್ಯಾಟಿಂಗ್ ಪ್ರದರ್ಶನ ನೀಡಿದ ಆಸ್ಟ್ರೇಲಿಯ ತಂಡವು 49.2 ಓವರ್ ಗಳಲ್ಲಿ ಎಲ್ಲ ವಿಕೆಟ್ ಗಳನ್ನು ಕಳೆದುಕೊಂಡು 388 ರನ್ ಗಳ ಬೃಹತ್ ಮೊತ್ತ ಪೇರಿಸಿದೆ.
ಟ್ರಾವಿಸ್ ಹೆಡ್ (109) ಆಕರ್ಷಕ ಶತಕ, ಡೇವಿಡ್ ವಾರ್ನರ್ (81) ಸ್ಫೋಟಕ ಅರ್ಧಶತಕ ಹಾಗೂ ಮಿಚೆಲ್ ಮಾರ್ಷ್ (36), ಗ್ಲೆನ್ ಮ್ಯಾಕ್ಸ್ ವೆಲ್ (41), ಜಾಶ್ ಇಂಗ್ಲಿಸ್ (38) ಹಾಗೂ ಪ್ಯಾಟ್ ಕಮಿನ್ಸ್ (37) ಸಂಘಟಿತ ಕೊಡುಗೆಯಿಂದ ಆಸ್ಟ್ರೇಲಿಯಾ 388 ರನ್ ಗಳ ಬೃಹತ್ ಮೊತ್ತ ಗಳಿಸಿದೆ.
ನ್ಯೂಝಿಲ್ಯಾಂಡ್ ಪರ ಟ್ರೆಂಟ್ ಬೌಲ್ಟ್ 10 ಓವರ್ ಗಳಲ್ಲಿ 77 ರನ್ ನೀಡಿ 3 ವಿಕೆಟ್ ಗಳಿಸಿದರೆ, ಆಸ್ಟ್ರೇಲಿಯ ತಂಡದ ಆರಂಭಿಕ ಬ್ಯಾಟರ್ ಗಳನ್ನು ಪೆವಿಲಿಯನ್ ಗಟ್ಟಿ, ಆಸ್ಟ್ರೇಲಿಯಾ ಮತ್ತಷ್ಟು ದೊಡ್ಡ ಮೊತ್ತ ಪೇರಿಸದಂತೆ ತಡೆಯುವಲ್ಲಿ ಮಹತ್ವದ ಪಾತ್ರ ವಹಿಸಿದ ಗ್ಲೆನ್ ಫಿಲಿಪ್ಸ್ 10 ಓವರ್ ಗಳಲ್ಲಿ ಕೇವಲ 37 ರನ್ ನೀಡಿ 3 ವಿಕೆಟ್ ಕಿತ್ತರು. ನ್ಯೂಝಿಲ್ಯಾಂಡ್ ತಂಡದ ತಾರಾ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ 10 ಓವರ್ ಗಳಲ್ಲಿ 80 ರನ್ ನೀಡಿ ಎರಡು ವಿಕೆಟ್ ಪಡೆದರೆ, ಮ್ಯಾಟ್ ಹೆನ್ರಿ ಹಾಗೂ ಜೇಮ್ಸ್ ನೀಶಮ್ ತಲಾ ಒಂದು ವಿಕೆಟ್ ಅನ್ನು ತಮ್ಮ ಖಾತೆಗೆ ಜಮಾ ಮಾಡಿಕೊಂಡರು.