ಕೊನೆಯ ಟಿ20, ಆಸ್ಟ್ರೇಲಿಯಕ್ಕೆ 161 ರನ್ ಗುರಿ ನೀಡಿದ ಭಾರತ
ಬೆಂಗಳೂರು : ಇಲ್ಲಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯ ವಿರುದ್ಧದ ಸರಣಿಯ ಕೊನೆಯ ಟಿ 20 ಪಂದ್ಯದಲ್ಲಿ ಭಾರತ ತಂಡ 8 ವಿಕೆಟ್ ಕಳೆದುಕೊಂಡು 160 ರನ್ ಗಳಿಸಿತು.
ಟಾಸ್ ಗೆದ್ದ ಆಸ್ಟ್ರೇಲಿಯ ಭಾರತವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿತು. ಭಾರತದ ಬ್ಯಾಟರ್ ಗಳು ಉತ್ತಮ ಆರಂಭ ಪಡೆದರಾದರೂ ಭಾರತ ತಂಡ 33 ರನ್ ಗಳಿಸಿದ್ದಾಗ ಯಶಸ್ವಿ ಜೈಸ್ವಾಲ್ 21 ರನ್ ಗಳಿಸಿ ವಿಕೆಟ್ ಒಪ್ಪಿಸಿದಾಗ, ತಂಡ ಆಘಾತಕ್ಕೊಳಗಾಯಿತು. 4.6 ನೇ ಓವರ್ ನಲ್ಲಿ ಋತುರಾಜ್ ಗಾಯಕ್ವಾಡ್ ಔಟ್ ಆದಾಗ ಭಾರತ ತಂಡ ಕುಸಿಯುವ ಭೀತಿಗೊಳಗಾಯಿತು.
ಸೂರ್ಯ ಕುಮಾರ್ ಯಾದವ್ ಈ ಬಾರಿಯೂ ವೈಫಲ್ಯ ಅನುಭವಿಸಿದರು. ಕೇವಲ 5 ರನ್ ಗಳಿಸಿ ಪೆವಿಲಿಯನ್ ಗೆ ಮರಳಿದರು. ಸ್ಪೋಟಕ ಬ್ಯಾಟರ್ ರಿಂಕು ಸಿಂಗ್, ತನ್ವೀರ್ ಸಂಗ ಅವರ ಎಸೆತದಲ್ಲಿ ಟಿಮ್ ಡೇವಿಡ್ ಗೆ ಕ್ಯಾಚಿತ್ತು 6 ರನ್ ಗೆ ವಿಕೆಟ್ ಒಪ್ಪಿಸಿದರು.
53 ರನ್ ಗಳೊಂದಿಗೆ ಏಕಾಂಗಿ ಹೋರಾಟ ನಡೆಸಿದ ಶ್ರೇಯಸ್ ಅಯ್ಯರ್ ಭಾರತ ತಂಡಕ್ಕೆ ಆಸರೆಯಾದರು. 37 ಎಸೆತಗಳಲ್ಲಿ 53 ರನ್ ಗಳಿಸಿದರು. ಜಿತೇಶ್ ಶರ್ಮಾ24, ಅಕ್ಸರ್ ಪಟೇಲ್ 31 ರನ್ ಗಳಿಸಿ ತಂಡದ ಮೊತ್ತ