ಸ್ಟಾರ್ಕ್ ಬೌಲಿಂಗ್‌ ದಾಳಿಗೆ ತತ್ತರಿಸಿದ ಭಾರತ; 180 ರನ್​ ಗೆ ಆಲೌಟ್

Update: 2024-12-06 09:27 GMT

Photo: PTI

ಅಡಿಲೇಡ್:‌ ಇಲ್ಲಿನ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ-ಆಸ್ಟ್ರೇಲಿಯ ತಂಡಗಳ ನಡುವಿನ ಎರಡನೆ ಟೆಸ್ಟ್ ಪಂದ್ಯದಲ್ಲಿ ಮಿಚೆಲ್ ಸ್ಟಾರ್ಕ್ ಬೌಲಿಂಗ್‌ ದಾಳಿಗೆ ತತ್ತರಿಸಿದ ಭಾರತ 180 ರನ್​ಗಳಿಗೆ ಆಲೌಟ್‌ ಆಗಿದೆ.

ಪಂದ್ಯದ ಮೊದಲ ಎಸೆತದಲ್ಲೇ ಬ್ಯಾಟರ್ ಯಶಸ್ವಿ ಜೈಸ್ವಾಲ್ ಮಿಚೆಲ್ ಸ್ಟಾರ್ಕ್ ಗೆ ವಿಕೆಟ್‌ ಒಪ್ಪಿಸಿ ನಿರ್ಗಮಿಸಿದರು. ನಂತರ ಕೆಎಲ್ ರಾಹುಲ್ (37) ಮತ್ತು ಶುಭ್​ಮನ್ ಗಿಲ್ (31) ಅರ್ಧ ಶತಕದ ಜೊತೆಯಾಟ ನಡೆಸಿದರು. ಕೊನೆಯಲ್ಲಿ ಯುವ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ 42 ರನ್​ ಗಳಿಸಿ ತಂಡ 150 ರನ್‌ ಗಡಿದಾಟುವಲ್ಲಿ ಸಹಕಾರಿಯಾದರು. 

ಮಿಚೆಲ್ ಸ್ಟಾರ್ಕ್ 6 ವಿಕೆಟ್‌ ಪಡೆದು ಮಿಂಚಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News