ವಿಶ್ವಕಪ್ ಫೈನಲ್ ಪಂದ್ಯಕ್ಕೆ ಭಾರತ- ಆಸೀಸ್ ಸಜ್ಜು

Update: 2023-11-19 02:58 GMT

Photo: twitter.com/ICC

ಅಹ್ಮದಾಬಾದ್: ವಿಶ್ವಕಪ್ ಅಭಿಯಾನದಲ್ಲಿ ಅಜೇಯವಾಗಿ ಉಳಿದಿರುವ ಭಾರತಕ್ಕೆ ಫೈನಲ್ ನಲ್ಲಿ ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ಎದುರಾಳಿಯಾಗಿದ್ದು, ವೃತ್ತಿಪರ ಕ್ರಿಕೆಟಿಗರ ಪಾಲಿಗೆ ಜೀವಮಾನದ ಮಹತ್ವದ ಪಂದ್ಯ ಎನಿಸಿದ ಹೋರಾಟಕ್ಕೆ ಉಭಯ ತಂಡಗಳು ಸಜ್ಜಾಗಿವೆ.

ವಿಶ್ವಕಪ್ ಆರಂಭಕ್ಕೆ ಮುನ್ನ ಚೆನ್ನೈನಲ್ಲಿ ಪತ್ರಕರ್ತರು "ಅಪೂರ್ಣ ವ್ಯವಹಾರಗಳ" ಬಗ್ಗೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರನ್ನು ಪ್ರಶ್ನಿಸಿದಾಗ, "ವಿಶ್ವಕಪ್ ಗೆಲ್ಲುವುದು ಅತ್ಯಂತ ಸಂತಸದ ಕ್ಷಣ. ಇದು ನಿಮ್ಮ ವೃತ್ತಿಜೀವನದ ಅತಿದೊಡ್ಡ ಉಡುಗೊರೆ" ಎಂದು ಉತ್ತರಿಸಿದರು. "ಆದರೆ ಅದನ್ನು ಸಾಧಿಸಲು ಒಂದು ಮಾರ್ಗವಿದೆ. ಆ ವಿಧಿವಿಧಾನವನ್ನು ನೀವು ಅನುಸರಿಸಲೇಬೇಕು. ಅದನ್ನು ಸಾಧಿಸಲು ಪ್ರಕ್ರಿಯೆ ಇದೆ" ಎಂದು ಹೇಳಿದ್ದರು. ಶನಿವಾರ ಮತ್ತೆ ಪತ್ರಕರ್ತರು ನೆನಪಿಸಿದಾಗ ಶರ್ಮಾ ಮತ್ತದೇ ಉತ್ತರ ನೀಡಿದರು.

ಇನ್ನೊಂದೆಡೆ ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ತಂಡ ಭಾರತದ ಎದುರಾಳಿ. ರೋಹಿತ್ ಶರ್ಮಾ ಅವರ ಹಿಂದಿನ ಹೇಳಿಕೆಗೂ ಈ ಬಾರಿಯ ಹೇಳಿಕೆಗೂ ಇರುವ ವ್ಯತ್ಯಾಸವೆಂದರೆ ಈಗ ಭಾರತ ವಿಶ್ವಕಪ್ ಗೆಲ್ಲಲು ಒಂದು ಹೆಜ್ಜೆ ಮಾತ್ರ ಬಾಕಿ. 1983 ಮತ್ತು 2011ರ ಸಾಧನೆಯನ್ನು ಪುನರಾವರ್ತಿಸುವ ಹುಮ್ಮಸ್ಸಿನಲ್ಲಿದೆ.

ಆದರೆ ಆಸ್ಟ್ರೇಲಿಯಾ ಕೂಡಾ ಭಾರತಕ್ಕೆ ಸುಲಭದ ತುತ್ತಲ್ಲ. ಭಾರತದ ಪಾರಮ್ಯಕ್ಕೆ ತಡೆ ಒಡ್ಡುವ ಎಲ್ಲ ಕಾರ್ಯತಂತ್ರವನ್ನು ಎದುರಾಳಿ ತಂಡ ರೂಪಿಸಿದೆ. ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ಶನಿವಾರ ಹೇಳಿಕೆ ನೀಡಿ, ಆರಂಭಿಕ ಪಂದ್ಯದಲ್ಲಿ 200 ರನ್ ಬೆನ್ನಟ್ಟುವ ಹಾದಿಯಲ್ಲಿ ಭಾರತ 20 ರನ್ ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿದ್ದನ್ನು ಜ್ಞಾಪಿಸಿದರು.

ಭಾರತ ಅಂತಿಮ ತಡೆಯನ್ನು ನಿವಾರಿಸಿ ಗೆಲುವು ಸಾಧಿಸುವುದು ಸಾಧ್ಯವಾದಲ್ಲಿ, ಆಸ್ಟ್ರೇಲಿಯಾ 2003 ಹಾಗೂ 2007ರಲ್ಲಿ ಮಾಡಿದ ಸಾಧನೆಯನ್ನು ಮರುಕಳಿಸಬಹುದು. ಈ ಎರಡು ಟೂರ್ನಿಗಳಲ್ಲಿ ಯಾವುದೇ ಪಂದ್ಯಗಳನ್ನು ಸೋಲದೇ ಆಸ್ಟ್ರೇಲಿಯಾ ಕಪ್ ಗೆದ್ದಿತ್ತು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News