ನ್ಯೂಝಿಲೆಂಡ್ ಗೆಲುವಿನ ಬಳಿಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಳೆದುಕೊಂಡ ಭಾರತ

Update: 2023-10-19 03:02 GMT

Photo: NDtv

ಹೊಸದಿಲ್ಲಿ: ವಿಶ್ವಕಪ್ ನಲ್ಲಿ ತನ್ನ ಅಜೇಯ ಅಭಿಯಾನವನ್ನು ಮುಂದುವರಿಸಿದ ನ್ಯೂಝಿಲೆಂಡ್ ತಂಡ ಬುಧವಾರ ಅಫ್ಘಾನಿಸ್ತಾನ ವಿರುದ್ಧ 149 ರನ್ ಗಳ ಭರ್ಜರಿ ವಿಜಯ ದಾಖಲಿಸಿದೆ. ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಅಚ್ಚರಿಯ ಜಯ ಸಾಧಿಸಿದ್ದ ಹಶ್ಮತುಲ್ಲಾ ಶಾಹಿದಿ ನೇತೃತ್ವದ ಅಫ್ಘಾನ್ ಪಡೆ, ನ್ಯೂಝಿಲೆಂಡ್ ವಿರುದ್ಧ ಅದೇ ಪ್ರದರ್ಶನ ಮುಂದುವರಿಸುವಲ್ಲಿ ವಿಫಲವಾಯಿತು. ಕೇವಲ 34.4 ಓವರ್ ಗಳಲ್ಲಿ 139 ರನ್ ಗಳಿಗೆ ಕುಸಿಯಿತು. ಈ ಫಲಿತಾಂಶದೊಂದಿಗೆ ಭಾರತ ಕೂಡಾ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಕುಸಿಯಿತು.

ವಿಶ್ವಕಪ್ ಟೂರ್ನಿಯ ತಮ್ಮ ಐದನೇ ಪಂದ್ಯವನ್ನು ಭಾರತದ ವಿರುದ್ಧ ಸೆಣೆಸಲಿರುವ ನ್ಯೂಝಿಲೆಂಡ್ ತಂಡ ಅತ್ಯಂತ ಸಮತೋಲನದ ತಂಡವಾಗಿ ಸರ್ವಾಂಗೀಣ ಪ್ರದರ್ಶನ ನೀಡಿತು. ಇದೀಗ ಆಡಿದ ಎಲ್ಲ ನಾಲ್ಕು ಪಂದ್ಯಗಳನ್ನು ಗೆದ್ದ ನ್ಯೂಝಿಲೆಂಡ್, ಎಂಟು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಅಲಂಕರಿಸಿದೆ. ಇದರ ನಿವ್ವಳ ರನ್ ರೇಟ್ +1.923 ಆಗಿದೆ. ಆಡಿದ ಎಲ್ಲ ಮೂರು ಪಂದ್ಯಗಳನ್ನು ಗೆದ್ದು ಆರು ಅಂಕ ಸಂಪಾದಿಸಿರುವ ಭಾರತ +1.821 ರನ್ ರೇಟ್ ನೊಂದಿಗೆ ಎರಡನೇ ಸ್ಥಾನದಲ್ಲಿದೆ.

ದಕ್ಷಿಣ ಆಫ್ರಿಕಾ ಮೂರು ಪಂದ್ಯಗಳಲ್ಲಿ ನಾಲ್ಕು ಅಂಕ ಸಂಪಾದಿಸಿ 1.385 ನಿವ್ವಳ ರನ್ ರೇಟ್ ನೊಂದಿಗೆ ತೃತೀಯ ಸ್ಥಾನಿಯಾಗಿದ್ದರೆ, ಪಾಕಿಸ್ತಾನ ಮೂರು ಪಂದ್ಯಗಳಿಂದ ನಾಲ್ಕು ಅಂಕ ಸಂಪಾದಿಸಿ ಅಗ್ರ ನಾಲ್ಕರಲ್ಲಿ ಸ್ಥಾನ ಗಳಿಸಿಕೊಂಡಿದೆ. ಈ ತಂಡದ ನಿವ್ವಳ ರನ್ ರೇಟ್ (-0.137). ಅಫ್ಘಾನಿಸ್ತಾನ ನಾಲ್ಕು ಪಂದ್ಯಗಳಲ್ಲಿ ಎರಡು ಅಂಕ ಸಂಪಾದಿಸಿದ್ದು -1.250 ನಿವ್ವಳ ರನ್ ರೇಟ್ ನೊಂದಿಗೆ ಒಂಬತ್ತನೇ ಸ್ಥಾನದಲ್ಲಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News