ಡ್ರಾದಲ್ಲಿ ಅಂತ್ಯಗೊಂಡ ಭಾರತ-ಆಸ್ಟ್ರೇಲಿಯ ನಡುವಿನ ಮೂರನೆ ಟೆಸ್ಟ್ ಪಂದ್ಯ
Update: 2024-12-18 05:57 GMT
ಬ್ರಿಸ್ಬೇನ್: ಭಾರತ-ಆಸ್ಟ್ರೇಲಿಯ ನಡುವಿನ ಮೂರನೆಯ ಟೆಸ್ಟ್ ಪಂದ್ಯ ಮಳೆ ಅಡಚಣೆಯಿಂದಾಗಿ ಡ್ರಾನಲ್ಲಿ ಅಂತ್ಯಗೊಂಡಿದೆ.
ಪಂದ್ಯ ಪ್ರಾರಂಭವಾದ ಮೊದಲ ದಿನದಿಂದಲೂ ಬಿಟ್ಟೂ ಬಿಡದೆ ಕಾಡಿದ ಮಳೆ, ಕುತೂಹಲಕರ ಘಟ್ಟ ತಲುಪಿದ್ದ ಐದನೆಯ ದಿನವೂ ಬಿಡುವು ನೀಡಿಲ್ಲ. ಹೀಗಾಗಿ, ಪಂದ್ಯ ಮುಗಿಯಲು ಇನ್ನೂ 51.5 ಓವರ್ ಗಳು ಬಾಕಿ ಇದ್ದರೂ, ಪ್ರತಿಕೂಲ ವಾತಾವರಣದ ಹಿನ್ನೆಲೆಯಲ್ಲಿ ಪಂದ್ಯ ರದ್ದುಗೊಳಿಸಲಾಯಿತು.
ಆಸ್ಟ್ರೇಲಿಯ
ಪ್ರಥಮ ಇನಿಂಗ್ಸ್: 445
ಎರಡನೆ ಇನಿಂಗ್ಸ್: 7/89
ಭಾರತ
ಪ್ರಥಮ ಇನಿಂಗ್ಸ್: 260
ಎರಡನೆ ಇನಿಂಗ್ಸ್: ವಿಕೆಟ್ ನಷ್ಟವಿಲ್ಲದೆ 8 ರನ್