ಆಸ್ಟ್ರೇಲಿಯನ್ ಓಪನ್ ಗಿಂತ ಮೊದಲು ರಫೆಲ್ ನಡಾಲ್ ಗೆ ಗಾಯದ ಭೀತಿ

Update: 2024-01-06 17:20 GMT

ರಫೆಲ್ ನಡಾಲ್ | Photo: PTI 

ಪ್ಯಾರಿಸ್: ಆಸ್ಟ್ರೇಲಿಯನ್ ಓಪನ್ ಮೆಲ್ಬರ್ನ್ನಲ್ಲಿ ಜನವರಿ 14ರಂದು ಆರಂಭವಾಗಲಿದ್ದು, ಅದಕ್ಕೂ ಗಾಯದ ಸಮಸ್ಯೆಗೆ ಒಳಗಾಗಿರುವ ಸ್ಪೇನ್ ಸೂಪರ್ಸ್ಟಾರ್ ರಫೆಲ್ ನಡಾಲ್, ನನಗೆ ಸಾಮಾನ್ಯಕ್ಕಿಂತ ಹೆಚ್ಚು ಭಯಭೀತನಾಗಿದ್ದೇನೆ ಎಂದು ಒಪ್ಪಿಕೊಂಡಿದ್ದಾರೆ.

22 ಗ್ರ್ಯಾನ್ಸ್ಲಾಮ್ ಒಡೆಯನಾಗಿರುವ ನಡಾಲ್ ಬ್ರಿಸ್ಬೇನ್ ಇಂಟರ್ನ್ಯಾಶನಲ್ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋತ ನಂತರ ಮೆಡಿಕಲ್ ಟೈಮ್-ಔಟ್ ಗೆ ಒಳಗಾದರು. ನಡಾಲ್ ಸುಮಾರು ಒಂದು ವರ್ಷದ ನಂತರ ಆಡಿರುವ ಮೊದಲ ಅಂತರ್ರಾಷ್ಟ್ರೀಯ ಟೂರ್ನಿ ಇದಾಗಿತ್ತು. ಆಸ್ಟ್ರೇಲಿಯದ ಜೋರ್ಡನ್ ಥಾಮ್ಸನ್ ವಿರುದ್ಧ ಮೂರನೇ ಸೆಟ್ನಲ್ಲಿ 1-4 ಹಿನ್ನಡೆಯಲ್ಲಿದ್ದಾಗ ಎಡ ತೊಡೆಯಲ್ಲಿ ನೋವು ಕಾಣಿಸಿಕೊಂಡಾಗ ನಡಾಲ್ ವೈದ್ಯಕೀಯ ಆರೈಕೆಗೆ ಒಳಗಾದರು.

ಮೂರು ಗಂಟೆ ಹಾಗೂ 25 ನಿಮಿಷಗಳ ಕಾಲ ನಡೆದ ಮ್ಯಾರಥಾನ್ ಪಂದ್ಯದಲ್ಲಿ ಥಾಮ್ಸನ್ 5-7, 7-6(8/6), 6-3 ಸೆಟ್ ಗಳ ಅಂತರದಿಂದ ಜಯ ಸಾಧಿಸಿದ್ದಾರೆ.

ಕಳೆದ ವರ್ಷ ಆಸ್ಟ್ರೇಲಿಯನ್ ಓಪನ್ ನಲ್ಲಿ ಗಾಯದ ಸಮಸ್ಯೆ ಕಾಣಿಸಿಕೊಂಡ ನಂತರ ನಡಾಲ್ 2023ರ ಋತುವಿನಲ್ಲಿ ಹೆಚ್ಚಿನ ಸಮಯ ಸಕ್ರಿಯ ಟೆನಿಸ್ನಿಂದ ದೂರ ಉಳಿದಿದ್ದರು. ಈ ಸಮಯದಲ್ಲಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾದರು.

ವಿಶ್ವದ ಮಾಜಿ ನಂ.1 ಆಟಗಾರ ನಡಾಲ್ ರ‍್ಯಾಂಕಿಂಗ್ ನಲ್ಲಿ 672ನೇ ಸ್ಥಾನಕ್ಕೆ ಕುಸಿದಿದ್ದರು. ನಡಾಲ್ ಪ್ರತಿಸ್ಪರ್ಧಿ ನೊವಾಕ್ ಜೊಕೊವಿಕ್ 24ನೇ ಗ್ರ್ಯಾನ್ಸ್ಲಾಮ್ ಪ್ರಶಸ್ತಿ ಜಯಿಸುವ ಮೂಲಕ ನಡಾಲ್ ರನ್ನು ರೇಸ್ನಲ್ಲಿ ಹಿಂದಿಕ್ಕಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News