ಐಪಿಎಲ್ | ರೋಚಕ ಪಂದ್ಯದಲ್ಲಿ SRH ವಿರುದ್ಧ KKRಗೆ 4 ರನ್‌ಗಳ ಜಯ
Update: 2024-03-23 23:37 IST

Photo: X/@IPL
ಕೋಲ್ಕತಾ : ಇಲ್ಲಿನ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಬಾದ್ ವಿರುದ್ಧ ಕೋಲ್ಕತಾ ನೈಟ್ ರೈಡರ್ಸ್ ತಂಡವು 4 ರನ್ ಗಳ ವಿರೋಚಿತ ಗೆಲುವು ಸಾಧಿಸಿದೆ.
KKR ನೀಡಿದ್ದ 208 ರನ್ ಗಳ ಬೃಹತ್ ಮೊತ್ತ ಬೆನ್ನಟ್ಟಿದ SRH ತಂಡ ನಿಗಧಿತ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು ಸೋಲಿಗೆ ಶರಣಾಯಿತು.
ಹೈದರಬಾದ್ ಪರ ಸ್ಪೋಟಕ ಬ್ಯಾಟಿಂಗ್ ಮಾಡಿದ್ದ ಕ್ಲಾಸನ್ ಮತ್ತು ಶಹಬಾಝ್ ತಂಡವನ್ನು ಗೆಲುವಿನ ಹತ್ತಿರ ತೆಗೆದುಕೊಂಡು ಹೋದರು. ಆದರೆ ಕಡೇ ಓವರ್ ನಲ್ಲಿ ಅದ್ಬುತವಾಗಿ ಬೌಲಿಂಗ್ ಮಾಡಿದ ಹರ್ಷಿತ್ ರಾಣಾ ಹೈದರಬಾದ್ ತಂಡದ ಕೈಯಿಂದ ಗೆಲುವನ್ನು ಕಸಿದುಕೊಂಡರು.