ಟಿ20 ಕ್ರಿಕೆಟ್ ನಲ್ಲಿ 100 ಅರ್ಧಶತಕ ಗಳಿಸಿದ ಮೊದಲ ಆಟಗಾರ 'ಕಿಂಗ್ ಕೊಹ್ಲಿ'

ವಿರಾಟ್ ಕೊಹ್ಲಿ | PC : PTI
ಹೊಸದಿಲ್ಲಿ: ಟಿ20 ಕ್ರಿಕೆಟ್ ನಲ್ಲಿ 100 ಅರ್ಧಶತಕಗಳನ್ನು ಗಳಿಸಿದ ಭಾರತದ ಮೊದಲ ಬ್ಯಾಟರ್ ಎನಿಸಿಕೊಂಡಿರುವ ವಿರಾಟ್ ಕೊಹ್ಲಿ ಇತಿಹಾಸ ನಿರ್ಮಿಸಿದರು.
ರವಿವಾರ ರಾಜಸ್ಥಾನದ ವಿರುದ್ಧ ಐಪಿಎಲ್ ಪಂದ್ಯದಲ್ಲಿ 45 ಎಸೆತಗಳಲ್ಲಿ 62 ರನ್ ಗಳಿಸಿದ ಕೊಹ್ಲಿ ಈ ಮೈಲಿಗಲ್ಲು ಸಾಧಿಸಿದರು.
ಕೊಹ್ಲಿ ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ 3ನೇ ಅರ್ಧಶತಕ ಗಳಿಸಿದರು. 405 ಟಿ20 ಪಂದ್ಯಗಳಲ್ಲಿ ಒಟ್ಟು 100 ಶತಕ ಹಾಗೂ 9 ಶತಕಗಳನ್ನು ಗಳಿಸಿದ್ದಾರೆ. ಗರಿಷ್ಠ ಟಿ20 ಅರ್ಧಶತಕಗಳನ್ನು ಗಳಿಸಿರುವ ಸಾರ್ವಕಾಲಿಕ ಶ್ರೇಷ್ಠ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ ಇದೀಗ 2ನೇ ಸ್ಥಾನದಲ್ಲಿದ್ದಾರೆ.
ಆಸ್ಟ್ರೇಲಿಯದ ಡೇವಿಡ್ ವಾರ್ನರ್ ಮೊದಲ ಸ್ಥಾನದಲ್ಲಿದ್ದಾರೆ. ವಾರ್ನರ್ 400 ಪಂದ್ಯಗಳಲ್ಲಿ 108 ಅರ್ಧಶತಕ ಹಾಗೂ 8 ಶತಕಗಳನ್ನು ಸಿಡಿಸಿದ್ದಾರೆ.
ರನ್ ಚೇಸ್ ವೇಳೆ 15ನೇ ಓವರ್ ನಲ್ಲಿ ವನಿಂದು ಹಸರಂಗ ಬೌಲಿಂಗ್ ನಲ್ಲಿ ಬೌಂಡರಿ ಗಳಿಸಿದ ಕೊಹ್ಲಿ ತನ್ನದೇ ಶೈಲಿಯಲ್ಲಿ 50 ರನ್ ಪೂರೈಸಿದರು.
ಎಲೈಟ್ ಟಿ20 ಅರ್ಧಶತಕ ಗಳಿಸಿದವರ ಪಟ್ಟಿಯಲ್ಲಿ ಕೊಹ್ಲಿ ನಂತರ ಪಾಕಿಸ್ತಾನದ ಬಾಬರ್ ಆಝಮ್(90 ಅರ್ಧಶತಕ), ವಿಂಡೀಸ್ ನ ಕ್ರಿಸ್ ಗೇಲ್(88) ಹಾಗೂ ಇಂಗ್ಲೆಂಡ್ ನ ಜೋಸ್ ಬಟ್ಲರ್(86)ಅವರಿದ್ದಾರೆ.