ಚೊಚ್ಚಲ ಪಂದ್ಯ ಆಡುವ ನಿರೀಕ್ಷೆಯಲ್ಲಿ ಮುಂಬೈ ಬ್ಯಾಟರ್

Update: 2024-02-01 17:52 GMT

 ಸರ್ಫರಾಝ್ | Photo: NDTV 

ಹೊಸದಿಲ್ಲಿ: ಸುಲಭವಾಗಿ ತೃಪ್ತನಾಗದೆ ಇರುವುದು ನನ್ನ ದೊಡ್ಡ ಶಕ್ತಿಯಾಗಿದೆ. ನಾನು ಪ್ರತಿದಿನ 500-600 ಎಸೆತಗಳನ್ನು ಆಡುತ್ತೇನೆ. ಒಂದು ಪಂದ್ಯದಲ್ಲಿ ನಾನು ಕನಿಷ್ಠ 200-300 ಎಸೆತಗಳನ್ನು ಆಡದಿದ್ದರೆ ನನ್ನ ಶ್ರಮ ಸಾಕಾಗಾಗಲಿಲ್ಲ ಎಂದು ನನಗೆ ಅನಿಸುತ್ತದೆ. ಬೆಳಗ್ಗೆ, ಮಧ್ಯಾಹ್ನ ಹಾಗೂ ಸಂಜೆ ಅಭ್ಯಾಸ ಮಾಡಿ ನನಗೆ ಹವ್ಯಾಸವಾಗಿದೆ. ಲೆಜೆಂಡರಿ ಬ್ಯಾಟರ್ ಗಳನ್ನು ಸೂಕ್ಷ್ಮವಾಗಿ ಗಮನಿಸುವೆ ಹಾಗೂ ಅವರ ಆಟವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ ಎಂದು ಇಂಗ್ಲೆಂಡ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಡುವ ನಿರೀಕ್ಷೆಯಲ್ಲಿರುವ ಸರ್ಫರಾಝ್ ಖಾನ್ ಗುರುವಾರ ಹೇಳಿದ್ದಾರೆ.

ದೇಶೀಯ ಕ್ರಿಕೆಟ್ ನಲ್ಲಿ ಪ್ರಚಂಡ ಯಶಸ್ಸು ಸಾಧಿಸಿದ ನಂತರ 26ರ ಹರೆಯದ ಸರ್ಫರಾಝ್ ಇದೀಗ ಅಂತರ್ರಾಷ್ಟ್ರೀಯ ಕ್ರಿಕೆಟ್ ನಲ್ಲೂ ಅದೇ ಪ್ರದರ್ಶನ ಪುನರಾವರ್ತಿಸುವತ್ತ ಚಿತ್ತಹರಿಸಿದ್ದಾರೆ.

ನಾನು ವಿರಾಟ್ ಕೊಹ್ಲಿ, ಎಬಿಡಿ ವಿಲಿಯರ್ಸ್, ಸರ್ ವಿವಿಯನ್ ರಿಚರ್ಡ್ಸ್, ಜೋ ರೂಟ್ ಹಾಗೂ ಜಾವೇದ್ ಮಿಯಾಂದಾದ್ ಬ್ಯಾಟಿಂಗನ್ನು ವೀಕ್ಷಿಸುವೆ. ನಾನು ಮಿಯಾಂದಾದ್ ರೀತಿ ಆಡುತ್ತೇನೆಂದು ನನ್ನ ತಂದೆ ಹೇಳುತ್ತಾರೆ. ಯಾರಾದರೂ ಯಶಸ್ವಿಯಾದರೆ, ಅವರು ಹೇಗೆ ಯಶಸ್ವಿಯಾದರೆಂಬುದನ್ನು ನೋಡುವೆ. ಇದರಿಂದ ನಾನು ಕಲಿಯಬಹುದು. ರಣಜಿ ಟ್ರೋಫಿಯಲ್ಲಾಗಲಿ ಅಥವಾ ಭವಿಷ್ಯದಲ್ಲಿ ಭಾರತಕ್ಕಾಗಿ ಆಡುತ್ತಿರಲಿ ನಾನು ಇದನ್ನು ಮುಂದುವರಿಸಲು ಬಯಸುತ್ತೇನೆ ಎಂದು ಸರ್ಫರಾಝ್ ಜಿಯೋ ಸಿನೆಮಾಗೆ ತಿಳಿಸಿದ್ದಾರೆ.

ಐದು ದಿನಗಳ ಟೆಸ್ಟ್ ಪಂದ್ಯವನ್ನಾಡಲು ತಾಳ್ಮೆಯಿಂದಿರಬೇಕು. ಪ್ರತಿದಿನ ಅಭ್ಯಾಸ ಮಾಡಬೇಕು. ಇದು ನಾನು ಇಡೀ ದಿನ ಆಟವನ್ನು ಆಡಲು ಕಾರಣವಾಗಿದೆ ಎಂದು ಸರ್ಫರಾಝ್ ಹೇಳಿದ್ದಾರೆ.

ಸರ್ಫರಾಝ್ ಹಿಂದಿನ ಮೂರು ದೇಶೀಯ ಕ್ರಿಕೆಟ್ ಋತುವಿನಲ್ಲಿ ಮುಂಬೈ ಪರ ರನ್ ಹೊಳೆ ಹರಿಸಿದ್ದರು. ಅಹ್ಮದಾಬಾದ್ ನಲ್ಲಿ ಇತ್ತೀಚೆಗೆ ಇಂಗ್ಲೆಂಡ್ ಲಯನ್ಸ್ ವಿರುದ್ಧದ ಪಂದ್ಯದಲ್ಲಿ ಸರ್ಫರಾಝ್ ಭಾರತ ಎ ತಂಡದ ಪರ 160 ಎಸೆತಗಳಲ್ಲಿ 161 ರನ್ ಗಳಿಸಿದ್ದರು. ಭಾರತ ಎ ತಂಡ ಇನಿಂಗ್ಸ್ ಹಾಗೂ 16 ರನ್ನಿಂದ ಪಂದ್ಯ ಜಯಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News