ಕೊಹ್ಲಿ-ಗಂಭೀರ್ ವೈಮನಸ್ಸಿನ ವದಂತಿ ಅಂತ್ಯ : ಚಿಟ್-ಚಾಟ್ ವಿಡಿಯೋ ಬಿಡುಗಡೆ ಮಾಡಿದ ಬಿಸಿಸಿಐ

Update: 2024-09-18 07:20 GMT

Screengrab:X/BCCI

ಹೊಸದಿಲ್ಲಿ: ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ಅವರ ಮುಖಾಮುಖಿ ಮಾತುಕತೆಯ ವಿಡಿಯೋ ಟ್ರೇಲರ್ ಅನ್ನು ಬಿಸಿಸಿಐ ಬಿಡುಗಡೆ ಮಾಡಿದ್ದು, ಈ ಇಬ್ಬರ ನಡುವಿನ ವೈಮನಸ್ಸಿನ ಕುರಿತು ಹರಿದಾಡಿದ ಊಹಾಪೋಹ ತಾರ್ಕಿಕವಾಗಿ ಅಂತ್ಯ ಕಂಡಿದೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ಅವರ ಮುಖಾಮುಖಿ ಸಂದರ್ಶನದ ಒಂದು ನಿಮಿಷ 40 ಸೆಕೆಂಡುಗಳ ಟ್ರೇಲರ್ ಅನ್ನು ಬಿಡುಗಡೆ ಮಾಡಿದೆ. ಇದರಲ್ಲಿ ವಿರಾಟ್ ಕೊಹ್ಲಿ ಮತ್ತು ಟೀಮ್ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ಮಾತುಕತೆ ನಡೆಸಿದ್ದಾರೆ.

ಲಕ್ನೋದಲ್ಲಿ 2023ರ ಐಪಿಎಲ್ ಆವೃತ್ತಿಯ ಸಮಯದಲ್ಲಿ ನಡೆದ ವಾಗ್ವಾದದ ಬಗ್ಗೆ ಮಾತನಾಡುತ್ತಾ ಕೊಹ್ಲಿ ಮತ್ತು ಗಂಭೀರ್ ಇಬ್ಬರೂ ಪರಸ್ಪರ ತಮಾಷೆ ಮಾಡುವುದನ್ನು ಕಾಣಬಹುದಾಗಿದೆ. ಸಂದರ್ಶನದಲ್ಲಿ ವಿರಾಟ್ ಕೊಹ್ಲಿಯ ಕಾಲೆಳೆದ ಗೌತಮ್ ಗಂಭೀರ್ ಪಂದ್ಯದ ವೇಳೆ ಎದುರಾಳಿಗಳ ವಿರುದ್ಧ ನನಗಿಂತ ನೀವೇ ಹೆಚ್ಚು ವಾದ ನಡೆಸಿದ್ದೀರಿ ಎಂದು ಹೇಳಿದ್ದಾರೆ.

ಗಂಭೀರ್- ಕೊಹ್ಲಿ ನಡುವಿನ ವೈಮನಸ್ಸಿನ ಕುರಿತ ವದಂತಿಗಳಿಗೆ ಬಿಸಿಸಿಐ ಸಂದರ್ಶನದ ಮೂಲಕ ಅಂತ್ಯವಾಡಲು ನಿರ್ಧರಿಸಿದೆ.

2023ರ ಐಪಿಎಲ್ ನಲ್ಲಿ ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಮಾತಿನ ಚಕಮಕಿಯಲ್ಲಿ ತೊಡಗಿಸಿಕೊಂಡಿದ್ದರು. ನಂತರ ಇಬ್ಬರ ನಡುವಿನ ಸಂಬಂಧವು ಅಷ್ಟಕ್ಕೆ ಅಷ್ಟೇ ಎಂಬ ಚರ್ಚೆ ಕ್ರಿಕೆಟ್ ಅಭಿಮಾನಿಗಳಲ್ಲಿ ಮೂಡಿತ್ತು.


Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News