ಅಮೆರಿಕ, ಐರ್‌ಲ್ಯಾಂಡ್ ಪಂದ್ಯ ಮಳೆಗಾಹುತಿಯಾದರೆ ಪಾಕಿಸ್ತಾನ ಔಟ್

Update: 2024-06-14 17:04 GMT

PC : X 

ಫ್ಲೋರಿಡಾ: ಆತಿಥೇಯ ಅಮೆರಿಕ ಹಾಗೂ ಐರ್‌ಲ್ಯಾಂಡ್ ನಡುವೆ ಶುಕ್ರವಾರ ನಿಗದಿಯಾಗಿರುವ ಟಿ-20 ವಿಶ್ವಕಪ್ ಟೂರ್ನಿಯ ಎ ಗುಂಪಿನ ಪಂದ್ಯದ ಅರಂಭಕ್ಕೆ ಮಳೆ ಅಡ್ಡಿಯಾಗಿದೆ. ಒಂದು ವೇಳೆ ಈ ಪಂದ್ಯವು ಮಳೆಗಾಹುತಿಯಾದರೆ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ಅಮೆರಿಕ ಕ್ರಿಕೆಟ್ ತಂಡ ಒಟ್ಟು 5 ಅಂಕದೊಂದಿಗೆ ಸೂಪರ್-8 ಹಂತಕ್ಕೆ ಪ್ರವೇಶಿಸಲಿದೆ. ಎ ಗುಂಪಿನಿಂದ ಭಾರತವು ಈಗಾಗಲೇ ಸೂಪರ್-8 ಹಂತಕ್ಕೆ ಲಗ್ಗೆ ಇಟ್ಟಿದೆ.

ಅಮೆರಿಕ ಮುಂದಿನ ಸುತ್ತಿಗೇರಿದರೆ ಫ್ಲೋರಿಡಾದಲ್ಲಿ ನಿಗದಿಯಾಗಿರುವ ಭಾರತ-ಕೆನಡಾ(ಜೂ.15)ಹಾಗೂ ಪಾಕಿಸ್ತಾನ-ಐರ್‌ಲ್ಯಾಂಡ್(ಜೂ.16)ನಡುವಿನ ಪಂದ್ಯವು ಮಹತ್ವ ಕಳೆದುಕೊಳ್ಳುತ್ತವೆ.

ಒಂದು ವೇಳೆ ಮಳೆರಾಯ ಶುಕ್ರವಾರ ಪಂದ್ಯ ನಡೆಯಲು ಬಿಟ್ಟರೆ ಐರ್‌ಲ್ಯಾಂಡ್ ತಂಡ ಅಮೆರಿಕವನ್ನು ಸೋಲಿಸಿದರೆ ಪಾಕಿಸ್ತಾನದ ವಿಶ್ವಕಪ್ ಅಭಿಯಾನಕ್ಕೆ ಜೀವ ಬರಲಿದೆ.

ಆ ನಂತರ ಬಾಬರ್ ಆಝಮ್ ನೇತೃತ್ವದ ಪಾಕ್ ತಂಡವು ರವಿವಾರದ ಪಂದ್ಯದಲ್ಲಿ ಐರ್‌ಲ್ಯಾಂಡ್ ತಂಡವನ್ನು ಮಣಿಸಿದರೆ ನೆಟ್ ರನ್‌ರೇಟ್ ಆಧಾರದಲ್ಲಿ ಅಮೆರಿಕವನ್ನು ಟೂರ್ನಿಯಿಂದ ಹೊರದಬ್ಬಿ ಸೂಪರ್-8ರ ಸುತ್ತಿಗೇರಬಹುದು.

ಸತತ 3 ದಿನಗಳಿಂದ ಪ್ಲೋರಿಡಾದಲ್ಲಿ ಮಳೆ ಸುರಿಯುತ್ತಿದೆ. ಗುರುವಾರ ನಿರ್ದಿಷ್ಟ ಪ್ರದೇಶಗಳಲ್ಲಿ ಪ್ರವಾಹ ಕಂಡುಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News