ರೋಹಿತ್- ಜೈಸ್ವಾಲ್ ಜುಗಲ್ ಬಂಧಿ: ಭಾರತಕ್ಕೆ ಮಹತ್ತರ ಮುನ್ನಡೆ

Update: 2023-07-14 03:17 GMT

Photo: Twitter

ಹೊಸದಿಲ್ಲಿ: ನಾಯಕ ರೋಹಿತ್ ಶರ್ಮಾ ಹಾಗೂ ಚೊಚ್ಚಲ ಟೆಸ್ಟ್ ಆಡುತ್ತಿರುವ ಯಶಸ್ವಿ ಜೈಸ್ವಾಲ್ ಅವರ ಅಮೋಘ ಶತಕಗಳ ನೆರವಿನೊಂದಿಗೆ ಅತಿಥೇಯ ವೆಸ್ಟ್ಇಂಡೀಸ್ ವಿರುದ್ಧ ಡೊಮಿನಿಕಾದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಮಹತ್ತರ ಮುನ್ನಡೆ ಸಾಧಿಸಿದೆ. ಭಾರತದ ಆರಂಭಿಕ ಜೋಡಿ 229 ರನ್ಗಳನ್ನು ಕಲೆ ಹಾಕಿದ್ದು, ದಿನದ ಆಟ ಮುಕ್ತಾಯದ ವೇಳೆಗೆ ಭಾರತ 2 ವಿಕೆಟ್ ನಷ್ಟಕ್ಕೆ 312 ರನ್ ಗಳಿಸಿದೆ.

ಜೈಸ್ವಾಲ್ 350 ಎಸೆತಗಳಲ್ಲಿ ಅಜೇಯ 143 ರನ್ ಗಳಿಸಿ, ವಿರಾಟ್ ಕೊಹ್ಲಿ (ನಾಟೌಟ್ 36) ಜತೆಗೆ ಕ್ರೀಸ್ನಲ್ಲಿ ಉಳಿದಿದ್ದಾರೆ. ಮೊದಲ ಇನಿಂಗ್ಸ್ ನಲ್ಲಿ ವೆಸ್ಟ್ಇಂಡೀಸ್ 150 ರನ್ ಗಳಿಗೆ ಆಲೌಟ್ ಆಗಿದ್ದು, ಭಾರತ 162 ರನ್ ಗಳ ಮುನ್ನಡೆಯಲ್ಲಿದೆ.

ಇದಕ್ಕೂ ಮುನ್ನ ವಿಚಿತ್ರವಾಗಿ ವರ್ತಿಸುತ್ತಿದ್ದ ಮತ್ತು ಸ್ಪಿನ್ನರ್ ಗಳಿಗೆ ಅಲ್ಪ ನೆರವು ನೀಡುತ್ತಿದ್ದ ಪಿಚ್ ನಲ್ಲಿ 221 ಎಸೆತಗಳಲ್ಲಿ 103 ರನ್ ಗಳಿಸಿದ ರೋಹಿತ್ ಶರ್ಮಾ ಭಾರತೀಯ ಇನಿಂಗ್ಸ್ ಗೆ ಭದ್ರ ಬುನಾದಿ ಹಾಕಿಕೊಟ್ಟರು. ಇವರಿಗೆ ಉತ್ತಮ ಸಾಥ್ ನೀಡಿದ ಯುವ ಆಟಗಾರ ಜೈಸ್ವಾಲ್ ನಿಧಾನವಾಗಿ ಇನಿಂಗ್ಸ್ ಕಟ್ಟಿದರು. ಇಡೀ ದಿನ 90 ಓವರ್ ಗಳಲ್ಲಿ ಭಾರತ 232 ರನ್ ಮಾತ್ರ ಗಳಿಸಿತು.

ಎರಡನೇ ದಿನವಿಡೀ ಬ್ಯಾಟ್ ಮಾಡಿದ ಜೈಸ್ವಾಲ್, ಮುರಿಯದ ಮೂರನೇ ವಿಕೆಟ್ಗೆ ಕೊಹ್ಲಿ ಜತೆ 72 ರನ್ ಸೇರಿಸಿದ್ದಾರೆ. ಜೈಸ್ವಾಲ್ 100 ರನ್ಗಳಿಗೆ 215 ಎಸೆತ ಬಳಸಿಕೊಂಡರೆ, ರೋಹಿತ್ ಶರ್ಮಾ 220 ಎಸೆತದಲ್ಲಿ ಈ ಸಾಧನೆ ಮಾಡಿದರು.

41 ವರ್ಷಗಳ ಹಿಂದೆ ಭಾರತ ತಂಡ 1982ರಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡಾಗ ಸುರು ನಾಯಕ್ ಮತ್ತು ಸುನೀಲ್ ಗಾವಸ್ಕರ್ ಜೋಡಿ ಮೊದಲ ವಿಕೆಟ್ಗೆ 229 ರನ್ ಕಲೆ ಹಾಕಿದ್ದು, ಈ ಇಬ್ಬರು ಕೂಡಾ ಮುಂಬೈನವರು ಎನ್ನುವುದು ಗಮನಾರ್ಹ. 2001ರಲ್ಲಿ ಸಂಜಯ್ ಬಂಗರ್ ಮತ್ತು ವೀರೇಂದ್ರ ಸೆಹ್ವಾಗ್ ಜೋಡಿ 201 ರನ್ ಗಳ ಆರಂಭಿಕ ಜತೆಯಾಟ ನೀಡಿತ್ತು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News