ನಾಯಕನಾಗಿ ಶ್ರೇಷ್ಠ ಪ್ರದರ್ಶನ ನೀಡಲಿಲ್ಲ : ರೋಹಿತ್ ಶರ್ಮಾ
Update: 2024-11-03 16:38 GMT
ಹೊಸದಿಲ್ಲಿ : ನಾಯಕನಾಗಿ ನಾನು ಉತ್ತಮ ಪ್ರದರ್ಶನ ನೀಡಲಿಲ್ಲ. ತಂಡವನ್ನು ಮುನ್ನಡೆಸುವ ಹಾಗೂ ಬ್ಯಾಟಿಂಗ್ ವಿಚಾರದಲ್ಲೂ ನಾನು ವಿಫಲನಾಗಿದ್ದೇನೆ ಎಂದು ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.
ಸರಣಿ ಹಾಗೂ ಟೆಸ್ಟ್ ಪಂದ್ಯದ ಸೋಲನ್ನು ಜೀರ್ಣಿಸಿಕೊಳ್ಳುವುದು ಅಷ್ಟೊಂದು ಸುಲಭವಲ್ಲ. ನಾನು ನಮ್ಮ ಶ್ರೇಷ್ಠ ಕ್ರಿಕೆಟನ್ನು ಆಡಲಿಲ್ಲ, ನ್ಯೂಝಿಲ್ಯಾಂಡ್ ತಂಡವು ಸರಣಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದೆ. ನಾವು ಸಾಕಷ್ಟು ತಪ್ಪುಗಳನ್ನು ಎಸಗಿದೆವು. ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ಮೊದಲ ಇನಿಂಗ್ಸ್‌ನಲ್ಲಿ ನಾವು ಸಾಕಷ್ಟು ರನ್ ಗಳಿಸಲಿಲ್ಲ. ಈ ಪಂದ್ಯದಲ್ಲಿ ನಾವು 30 ರನ್ ಮುನ್ನಡೆ ಪಡೆದಿದ್ದವು. ಗುರಿ ಕೂಡ ಚೇಸ್ ಮಾಡಬಹುದಿತ್ತು. ಆ ನಿಟ್ಟಿನಲ್ಲಿ ನಾವೆಲ್ಲರೂ ವಿಫಲರಾಗಿದ್ದೇವೆ ಎಂದು ರೋಹಿತ್ ಹೇಳಿದ್ದಾರೆ.