ಆಸ್ಟ್ರೇಲಿಯ ಪ್ರವಾಸ ಬೃಹತ್ ಪರ್ವತವನ್ನು ಏರಿದಂತೆಯೇ ಸರಿ : ಸುನೀಲ್ ಗವಾಸ್ಕರ್

Update: 2024-11-04 17:02 GMT

ಸುನೀಲ್ ಗವಾಸ್ಕರ್ | PC : X \ @virender_swag

ಹೊಸದಿಲ್ಲಿ : ಆಸ್ಟ್ರೇಲಿಯ ಪ್ರವಾಸಕ್ಕೆ ಮುನ್ನ ಸ್ವದೇಶದಲ್ಲಿ ನ್ಯೂಝಿಲ್ಯಾಂಡ್ ವಿರುದ್ಧದ ಸರಣಿಯನ್ನು 3-0 ಅಂತರದಿಂದ ಸೋತಿರುವುದು ಭಾರತಕ್ಕೆ ಭಾರೀ ಹಿನ್ನಡೆಯಾಗಿ ಪರಿಣಮಿಸಿದೆ.

ನ್ಯೂಝಿಲ್ಯಾಂಡ್ ವಿರುದ್ಧ ನಿರಂತರವಾಗಿ ಮೂರು ಪಂದ್ಯಗಳನ್ನು ಸೋತ ಬಳಿಕ, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ನಲ್ಲಿ ಸ್ವಸಾಮರ್ಥ್ಯದ ಆಧಾರದಲ್ಲಿ ಸ್ಥಾನ ಪಡೆಯಲು ಭಾರತವು ಆಸ್ಟ್ರೇಲಿಯದಲ್ಲಿ ನಡೆಯುವ 5 ಟೆಸ್ಟ್ಗಳ ಪೈಕಿ 4ರಲ್ಲಿ ಜಯ ಗಳಿಸಬೇಕಾಗಿದೆ.

ಮರು ಸಂಘಟಿಸಲು ಈಗ ತುಂಬಾ ಕಡಿಮೆ ಸಮಯ ಉಳಿದಿದ್ದು, ಆಸ್ಟ್ರೇಲಿಯ ವಿರುದ್ಧದ ಮಹತ್ವದ ಸರಣಿಗೆ ಭಾರತದ ಸಿದ್ಧತೆಯ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ.

ಕಿವೀಸ್ ವಿರುದ್ಧದ ಸರಣಿಯಲ್ಲಿ ಭಾರತದ ಸ್ಪಿನ್ ತಂತ್ರಗಳನ್ನು ಸುನೀಲ್ ಗವಾಸ್ಕರ್ ಟೀಕಿಸಿದ್ದರು.

‘‘ನ್ಯೂಝಿಲ್ಯಾಂಡ್ ಎಂಬ ವೇಗ ನಿಯಂತ್ರಕದಲ್ಲಿ ಭಾರತವು ಅತ್ಯಂತ ಕೆಟ್ಟದಾಗಿ ಮುಗ್ಗರಿಸಿದ ಬಳಿಕ, ಆಸ್ಟ್ರೇಲಿಯ ಪ್ರವಾಸವು ಬೃಹತ್ ಬೆಟ್ಟವನ್ನು ಏರಲು ಹೊರಟಂತೆ ಭಾಸವಾಗುತ್ತಿದೆ. ಭಾರತದ ವಿರುದ್ಧ ಭಾರತದಲ್ಲೇ ಕ್ಲೀನ್ ಸ್ವೀಪ್ ಸಾಧಿಸುವುದನ್ನು ಸ್ವತಃ ನ್ಯೂಝಿಲ್ಯಾಂಡ್ ನಿರೀಕ್ಷಿಸಿರಲಿಕ್ಕಿಲ್ಲ. ಕ್ರಿಕೆಟ್ ನ ಎಲ್ಲಾ ಮಾದರಿಗಳಲ್ಲಿ ವಿಶ್ವದಲ್ಲೇ ಶ್ರೇಷ್ಠ ನೂತನ ಚೆಂಡಿನ ಬೌಲರನ್ನು ಭಾರತ ಹೊಂದಿದೆ ಎನ್ನುವುದನ್ನು ಕ್ರಿಕೆಟ್ ಜಗತ್ತಿನ ಎಲ್ಲರೂ ಹೇಳುವಾಗ, ಪಿಚ್ಗಳನ್ನು ನಮ್ಮ ಸ್ಪಿನ್ನರ್ಗಳಿಗೆ ಬೇಕಾದಂತೆ ಸಿದ್ಧಪಡಿಸುವ ಕ್ಷಣಿಕ ಲಾಭದ ನೀತಿಯಿಂದಾಗಿ ಹೀಗೆ ಆಗಿದೆ’’ ಎಂದು ಗವಾಸ್ಕರ್ ‘ಸ್ಪೋರ್ಟ್ಸ್ಸ್ಟಾರ್’ನಲ್ಲಿನ ತನ್ನ ಅಂಕಣದಲ್ಲಿ ಬರೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News