ಏಕದಿನ ಕ್ರಿಕೆಟ್‌ನಲ್ಲಿ 10,000 ರನ್ ಪೂರೈಸಿದ ರೋಹಿತ್ ಶರ್ಮಾ
ಕೊಲಂಬೊ, ಸೆ.12: ಭಾರತದ ನಾಯಕ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ 10,000 ರನ್ ಪೂರೈಸುವ ಮೂಲಕ ವಿಶೇಷ ಕ್ಲಬ್‌ಗೆ ಪ್ರವೇಶಿಸಿದ್ದಾರೆ. ಈ ಸಾಧನೆ ಮಾಡಿದ ಭಾರತದ ಆರನೇ ಬ್ಯಾಟರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಮಂಗಳವಾರ ಪ್ರೇಮದಾಸ ಸ್ಟೇಡಿಯಮ್‌ನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಏಶ್ಯಕಪ್ ನ ಸೂಪರ್-4 ಪಂದ್ಯದಲ್ಲಿ ರೋಹಿತ್ ಈ ಸಾಧನೆ ಮಾಡಿದರು. ಕುಶಾಲ್ ರಜಿಥಾ ಬೌಲಿಂಗ್‌ನಲ್ಲಿ ಸಿಕ್ಸರ್ ಸಿಡಿಸುವ ಮೂಲಕ ರೋಹಿತ್ 10 ಸಾವಿರ ರನ್ ಪೂರೈಸಿದರು. ರೋಹಿತ್ ಕೇವಲ 44 ಎಸೆತಗಳಲ್ಲಿ 51ನೇ ಅರ್ಧಶತಕ ಗಳಿಸಿದರು. ಅವರು ಸತತ ಮೂರನೇ ಅರ್ಧಶತಕ ಸಿಡಿಸಿದರು. 53 ರನ್(48 ಎಸೆತ, 7 ಬೌಂಡರಿ, 2 ಸಿಕ್ಸರ್) ಗಳಿಸಿ ವಲ್ಲಲಗೆ ಕ್ಲೀನ್ ಬೌಲ್ಡಾದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿರುವ ಭಾರತವು 27 ಓವರ್‌ಗಳ ಅಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 134 ರನ್ ಗಳಿಸಿದೆ.
ಬಲಗೈ ಬ್ಯಾಟರ್ ರೋಹಿತ್ 10,000 ಮೈಲಿಗಲ್ಲನ್ನು ವೇಗವಾಗಿ ತಲುಪಿದ ಎರಡನೇ ಬ್ಯಾಟರ್ ಎನಿಸಿಕೊಂಡರು. ತನ್ನ 241ನೇ ಇನಿಂಗ್ಸ್‌ನಲ್ಲಿ ರೋಹಿತ್ ಈ ಸಾಧನೆ ಮಾಡಿದರೆ, ವೇಗವಾಗಿ 10,000 ರನ್ ಪೂರೈಸಿದವರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ 205ನೇ ಇನಿಂಗ್ಸ್‌ನಲ್ಲಿ ಈ ದಾಖಲೆ ನಿರ್ಮಿಸಿದ್ದರು.
ರೋಹಿತ್ 50 ಓವರ್ ಮಾದರಿಯ ಕ್ರಿಕೆಟ್‌ನಲ್ಲಿ 10,000 ರನ್ ಗಳಿಸಿದ ವಿಶ್ವದ 15ನೇ ಆಟಗಾರನಾಗಿ ಹೊರಹೊಮ್ಮಿದ್ದಾರೆ.
ಲೆಜೆಂಡರಿ ಸಚಿನ್ ತೆಂಡುಲ್ಕರ್(18,426 ರನ್) ನೇತೃತ್ವದ ಪಟ್ಟಿಯಲ್ಲಿ ಭಾರತದ ಬ್ಯಾಟರ್‌ಗಳಾದ ವಿರಾಟ್ ಕೊಹ್ಲಿ(13,024 ರನ್), ಸೌರವ್ ಗಂಗುಲಿ(11,363 ರನ್), ರಾಹುಲ್ ದ್ರಾವಿಡ್(10,889 ರನ್) ಹಾಗೂ ಎಂ.ಎಸ್. ಧೋನಿ(10,773) ಅವರಿದ್ದಾರೆ.
ಶ್ರೀಲಂಕಾದ ಕುಮಾರ ಸಂಗಕ್ಕರ(14,234 ರನ್), ಆಸ್ಟ್ರೇಲಿಯದ ರಿಕಿ ಪಾಂಟಿಂಗ್(13,704 ರನ್), ಶ್ರೀಲಂಕಾದ ಸನತ್ ಜಯಸೂರ್ಯ(13,430 ರನ್) ಹಾಗೂ ಮಹೇಲ ಜಯವರ್ಧನೆ(12.650 ರನ್), ಪಾಕಿಸ್ತಾನದ ಇಂಝಮಾಮ್‌ವುಲ್‌ಹಕ್ (11,739 ರನ್), ದಕ್ಷಿಣ ಆಫ್ರಿಕಾದ ಜಾಕ್ ಕಾಲಿಸ್(11,579 ರನ್), ವೆಸ್ಟ್‌ಇಂಡೀಸ್ ನ ಕ್ರಿಸ್ ಗೇಲ್(10,480 ರನ್) ಹಾಗೂ ಬ್ರಿಯಾನ್ ಲಾರಾ(10,405 ರನ್)ಏಕದಿನ ಕ್ರಿಕೆಟ್‌ನಲ್ಲಿ 10,000 ರನ್ ಕ್ಲಬ್‌ನಲ್ಲಿರುವ ಇತರ ಅಂತರ್‌ರಾಷ್ಟ್ರೀಯ ಲೆಜೆಂಡ್‌ಗಳಾಗಿದ್ದಾರೆ.