ಕ್ರಿಸ್ ಗೇಲ್ ನನಗೆ ಸ್ಫೂರ್ತಿ ಎಂದ ರೋಹಿತ್ ಶರ್ಮಾ

Update: 2023-10-12 18:13 GMT

Photo : X 

ಹೊಸದಿಲ್ಲಿ: ಅಂತರ್ರಾಷ್ಟ್ರೀಯ ಕ್ರಿಕೆಟ್ ನಲ್ಲಿ ಗರಿಷ್ಠ ಸಿಕ್ಸರ್ ಗಳನ್ನು ಸಿಡಿಸಿದ ಕ್ರಿಸ್ ಗೇಲ್ ಅವರ ದಾಖಲೆಯನ್ನು ಬುಧವಾರ ಹಿಂದಿಕ್ಕಿರುವ ಭಾರತದ ನಾಯಕ ರೋಹಿತ್ ಶರ್ಮಾ ಅವರು ತನ್ನ ಪಯಣದುದ್ದಕ್ಕೂ ಯುನಿವರ್ಸ್ ಬಾಸ್ ಅವರಿಂದಲೇ ಸ್ಫೂರ್ತಿ ಪಡೆದಿದ್ದೇನೆಂಬ ಸತ್ಯ ಒಪ್ಪಿಕೊಂಡಿದ್ದಾರೆ.

ರೋಹಿತ್ ಬುಧವಾರ ಅಫ್ಘಾನಿಸ್ತಾನದ ವಿರುದ್ಧ 81 ಎಸೆತಗಳಲ್ಲಿ 131 ರನ್ ಗಳಿಸಿ ಸಚಿನ್ ತೆಂಡುಲ್ಕರ್, ಕ್ರಿಸ್ ಗೇಲ್ ಹಾಗೂ ಕಪಿಲ್ದೇವ್ ಅವರ ದಾಖಲೆಯನ್ನು ಮುರಿದಿದ್ದರು. ಅಫ್ಘಾನ್ ವಿರುದ್ಧ 5 ಸಿಕ್ಸರ್ಗಳನ್ನು ಸಿಡಿಸಿರುವ ರೋಹಿತ್ ಎಲ್ಲ 3 ಮಾದರಿಯ ಕ್ರಿಕೆಟ್ ನಲ್ಲಿ ಒಟ್ಟು 556 ಸಿಕ್ಸರ್ ಗಳನ್ನು ಸಿಡಿಸಿದ್ದಾರೆ. ವಿಂಡೀಸ್ ನ ಎಡಗೈ ಬ್ಯಾಟರ್ ಗೇಲ್(553)ದಾಖಲೆಯನ್ನು ಮುರಿದಿದ್ದಾರೆ.

ರೋಹಿತ್ ಅವರು 453 ಪಂದ್ಯಗಳಲ್ಲಿ ಈ ಮೈಲಿಗಲ್ಲನ್ನು ತಲುಪಿದರು.

ಗೇಲ್ ಓರ್ವ ಯೂನಿವರ್ಸ್ ಬಾಸ್. ನಾನು ಅವರ ಪುಸ್ತಕದಿಂದ ಒಂದು ಪುಟ ತೆಗೆದುಕೊಂಡಿದ್ದೇನೆ. ಹಲವು ವರ್ಷಗಳಿಂದ ನಾವು ಅವರನ್ನು ನೋಡಿದ್ಧೇವೆ. ಅವರು ಎಲ್ಲಿಯೇ ಆಡಿದರೂ ಅವರೊಬ್ಬ ಸಿಕ್ಸರ್ ಸಿಡಿಸುವ ಯಂತ್ರವಾಗಿ ಕಂಡು ಬರುತ್ತಾರೆ. ನಾವಿಬ್ಬರು ಒಂದೇ ಸಂಖ್ಯೆಯ(45) ಜರ್ಸಿಯನ್ನು ಧರಿಸುತ್ತೇವೆ. ಈ ವಿಚಾರದಲ್ಲಿ ಅವರು ಖುಷಿಯಾಗಿದ್ದಾರೆಂಬ ಖಾತ್ರಿ ನನಗಿದೆ.ಜೆರ್ಸಿ ನಂ.45 ಗೇಲ್ ಅವರ ದಾಖಲೆಯನ್ನು ಮುರಿದಿದೆ ಎಂದು ರೋಹಿತ್ ಅವರು ಬಿಸಿಸಿಐ ಪೋಸ್ಟ್ ಮಾಡಿರುವ ವೀಡಿಯೊದಲ್ಲಿ ಹೇಳಿದ್ದಾರೆ.

ಸಿಕ್ಸರ್ ಸಿಡಿಸುವ ಕೌಶಲ್ಯವನ್ನು ಅಭಿವೃದ್ದಿಪಡಿಸಲು ಹಲವು ವರ್ಷಗಳಿಂದ ಸಾಕಷ್ಟು ಕೆಲಸ ಮಾಡಿದ್ದೇನೆ ಎಂದು ರೋಹಿತ್ ಹೇಳಿದ್ದಾರೆ.

ನಾನು ಈ ಆಟವನ್ನು ಆಡಲು ಆರಂಭಿಸಿದಾಗ ಇಷ್ಟೊಂದು ಸಿಕ್ಸರ್ ಗಳನ್ನು ಬಾರಿಸುತ್ತೇನೆ ಎಂದು ಯೋಚಿಸಿರಲಿಲ್ಲ. ಹಲವು ವರ್ಷಗಳಿಂದ ಈ ನಿಟ್ಟಿನಲ್ಲಿ ಸಾಕಷ್ಟು ಶ್ರಮಪಟ್ಟಿದ್ದೇನೆ. ಹೀಗಾಗಿ ನಾನು ಮಾಡಿರುವ ಕೆಲಸದಿಂದ ಬಹಳಷ್ಟು ಸಂತೋಷವಾಗಿದ್ದೇನೆ. ನನ್ನ ಕೆಲಸದಿಂದ ನಾನು ತೃಪ್ತಿಯಾಗುವುದಿಲ್ಲ. ನಾನು ಕೆಲಸವನ್ನು ಮುಂದುವರಿಸುವುದನ್ನು ಬಯಸುತ್ತೇನೆ. ನನ್ನ ಗಮನ ಅದರ ಮೇಲಿದೆ. ಹೌದು, ಇದು ನನಗೆ ಒಂದು ಸಣ್ಣ ಸಂತೋಷದ ಕ್ಷಣವಾಗಿದೆ ಎಂದು ಬಲಗೈ ಆರಂಭಿಕ ಬ್ಯಾಟರ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News