ಜಾವೆಲಿನ್ ಕುರಿತ ಹೇಳಿಕೆಗೆ ಟ್ರೋಲ್ ಆದ ಸೈನಾ ನೆಹ್ವಾಲ್

Update: 2024-08-14 15:34 GMT

ನೀರಜ್ ಚೋಪ್ರಾ , ಸೈನಾ ನೆಹ್ವಾಲ್ | PC : PTI

ಹೊಸದಿಲ್ಲಿ : ಟೋಕಿಯೊ ಒಲಿಂಪಿಕ್ಸ್ ನಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕ ಗೆಲ್ಲುವ ತನಕವೂ ನನಗೆ ಜಾವೆಲಿನ್ ಎಸೆತದ ಬಗ್ಗೆ ಗೊತ್ತಿರಲಿಲ್ಲ ಎಂದು ಒಪ್ಪಿಕೊಂಡಿದ್ದ ಭಾರತದ ಹಿರಿಯ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಇದೀಗ ಅಂತರ್ಜಾಲದಲ್ಲಿ ಟ್ರೋಲ್ಗೆ ಒಳಗಾಗಿದ್ದಾರೆ. ಕೆಲವರು ಸೈನಾರ ಸಾಮಾನ್ಯ ಜ್ಞಾನದ ಕೊರತೆಯನ್ನು ವ್ಯಂಗ್ಯ ಮಾಡಿದ್ದು, ನಟಿ ಕಂಗನಾ ರಣಾವತ್ ಗೆ ಸೈನಾರನ್ನು ಹೋಲಿಸಿದ್ದರು. 

ಮೂರು ಬಾರಿಯ ಒಲಿಂಪಿಯನ್ ಸೈನಾ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಈ ಹೇಳಿಕೆ ನೀಡಿ ಟ್ರೋಲ್ಗೆ ಒಳಗಾಗಿದ್ದಾರೆ.

2021ರಲ್ಲಿ ಟೋಕಿಯೊದಲ್ಲಿ ನೀರಜ್ ಅವರು ಚಿನ್ನದ ಪದಕ ಗೆದ್ದ ನಂತರ ಅತ್ಲೆಟಿಕ್ಸ್ನಲ್ಲಿ ಇಂತಹದ್ದೊಂದು ಸ್ಪರ್ಧೆ ಇದೆ ಎಂದು ನನಗೆ ಗೊತ್ತಾಯಿತು ಎಂದು ಸೈನಾ ಹೇಳಿದ್ದರು. ಸೈನಾ ಅವರ ಹೇಳಿಕೆಯು ಅವರ ಹೆಚ್ಚಿನ ಅಭಿಮಾನಿಗಳು ಹಾಗೂ ಫಾಲೋವರ್ಸ್ ಗಳಿಗೆ ಕೂಡ ಅಚ್ಚರಿ ತಂದಿತ್ತು.

ಸೈನಾರ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆ ವ್ಯಕ್ತವಾಗಿತ್ತು. ಸೈನಾರಂತಹ ಕ್ರೀಡಾಪಟುಗಳಿಗೆ ಒಲಿಂಪಿಕ್ಸ್ ನ ಪ್ರಮುಖ ಸ್ಪರ್ಧೆ ಇದೆ ಎಂದು ಗೊತ್ತಿಲ್ಲ ಏಕೆ ಎಂದು ಕೆಲವರು ಪ್ರಶ್ನಿಸಿದರು. ಇನ್ನೂ ಕೆಲವರು ವಿವಾದಿತ ಹೇಳಿಕೆಯಿಂದ ಸುದ್ದಿಯಲ್ಲಿರುವ ನಟಿ ಕಂಗನಾ ರಣಾವತ್ರನ್ನು ಉಲ್ಲೇಖಿಸಿ ಸೈನಾ ಅವರು ಕ್ರೀಡೆಯ ಕಂಗನಾ ರಣಾವತ್ ಎಂಬ ಹಣೆಪಟ್ಟಿಯನ್ನು ಕಟ್ಟಿದ್ದರು.

ತನ್ನ ವಿರುದ್ಧ ಕೇಳಿಬಂದಿರುವ ಟೀಕೆಗೆ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿರುವ ಸೈನಾ, ಕಂಗನಾರೊಂದಿಗೆ ನನ್ನನ್ನು ಹೋಲಿಸಿದ್ದಕ್ಕೆ ಧನ್ಯವಾದಗಳು.. ಕಂಗನಾ ಸುಂದರವಾಗಿದ್ದಾಳೆ.ಆದರೆ ನಾನು ನನ್ನ ಕ್ರೀಡೆಯಲ್ಲಿ ಪರಿಪೂರ್ಣವಾಗಿರಬೇಕು. ನನಗೆ ವಿಶ್ವದ ನಂ.1 ಸ್ಥಾನ ಪಡೆದಿರುವ ಕುರಿತು ಹೆಮ್ಮೆ ಇದೆ. ನನ್ನ ದೇಶಕ್ಕಾಗಿ ಬ್ಯಾಡ್ಮಿಂಟನ್ ನಲ್ಲಿ ಒಲಿಂಪಿಕ್ಸ್ ಪದಕವನ್ನು ಗೆದ್ದಿರುವೆ. ಮನೆಯಲ್ಲಿ ಕೂತು ಕಮೆಂಟ್ ಮಾಡುವುದು ಸುಲಭ, ಕ್ರೀಡೆಗಳಲ್ಲಿ ಆಡುವುದು ಕಠಿಣ. ನೀರಜ್ ನಮ್ಮ ಸೂಪರ್ಸ್ಟಾರ್. ಅವರು ಭಾರತದಲ್ಲಿ ಕ್ರೀಡೆಯನ್ನು ಜನಪ್ರಿಯಗೊಳಿಸಿದ್ದರು ಎಂದು ಎಂದು ಬರೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News