ಐಪಿಎಲ್‌ನಲ್ಲಿ 5 ಬಿಲಿಯನ್‌ ಡಾಲರ್‌ ಹೂಡಿಕೆಗೆ ಸೌದಿ ಆಸಕ್ತಿ: ವರದಿ

Update: 2023-11-03 19:26 IST
ಐಪಿಎಲ್‌ನಲ್ಲಿ 5 ಬಿಲಿಯನ್‌ ಡಾಲರ್‌ ಹೂಡಿಕೆಗೆ ಸೌದಿ ಆಸಕ್ತಿ: ವರದಿ

File Photo

  • whatsapp icon

ರಿಯಾದ್: ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್‌ ಲೀಗ್‌ ಎಂದೇ ತಿಳಿಯಲಾದ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್)‌ನಲ್ಲಿ ಬಹುಕೋಟಿ ಡಾಲರ್‌ ಪಾಲನ್ನು ಹೊಂದುವ ಕುರಿತಂತೆ ಸೌದಿ ಅರೇಬಿಯಾ ಆಸಕ್ತಿ ವಹಿಸಿದೆ ಎಂದು ವರದಿಯಾಗಿದೆ.

ಐಪಿಎಲ್‌ ಅನ್ನು ಸುಮಾರು 30 ಬಿಲಿಯನ್‌ ಡಾಲರ್‌ ಮೌಲ್ಯದ ಹೋಲ್ಡಿಂಗ್‌ ಕಂಪೆನಿಯಾಗಿಸಬೇಕೆಂಬ ಕೋರಿಕೆಯೊಂದಿಗೆ ಸೌದಿ ಅರೇಬಿಯಾದ ಯುವರಾಜ ಮುಹಮ್ಮದ್‌ ಬಿನ್‌ ಸಲ್ಮಾನ್‌ ಅವರ ಸಲಹೆಗಾರರು ಈಗಾಗಲೇ ಭಾರತದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆಂದು ಹೇಳಲಾಗಿದೆ.

ಸೌದಿ ರಾಜಕುಮಾರ ಸೆಪ್ಟೆಂಬರ್‌ನಲ್ಲಿ ಭಾರತಕ್ಕೆ ಬಂದ ಸಂದರ್ಭ ಈ ಮಾತುಕತೆ ನಡೆದಿದೆ ಹಾಗೂ ಐಪಿಎಲ್‌ನಲ್ಲಿ 5 ಬಿಲಿಯನ್‌ ಡಾಲರ್‌ ಹೂಡಿಕೆಗೆ ಸೌದಿ ಆಸಕ್ತಿ ವಹಿಸಿದೆ ಎಂದು ಹೇಳಲಾಗಿದೆ.

ಈ ವರದಿಗಳ ಕುರಿತಂತೆ ಬಿಸಿಸಿಐ ಪ್ರತಿಕ್ರಿಯೆಗೆ ನಿರಾಕರಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News