ಎರಡನೇ ಹಾಕಿ ಟೆಸ್ಟ್ | ಜರ್ಮನಿ ವಿರುದ್ಧ ಭಾರತ ಜಯಭೇರಿ

Update: 2024-10-24 15:32 GMT

PC : PTI 

ಹೊಸದಿಲ್ಲಿ : ಭಾರತದ ಪುರುಷರ ಹಾಕಿ ತಂಡವು ಗುರುವಾರ ದಿಲ್ಲಿಯ ಮೇಜರ್ ಧ್ಯಾನ್‌ಚಂದ್ ನ್ಯಾಶನಲ್ ಕ್ರೀಡಾಂಗಣದಲ್ಲಿ ನಡೆದ ಎರಡನೇ ಹಾಗೂ ಅಂತಿಮ ಹಾಕಿ ಟೆಸ್ಟ್ ಪಂದ್ಯದಲ್ಲಿ ಹಾಲಿ ವಿಶ್ವ ಚಾಂಪಿಯನ್ ಜರ್ಮನಿ ವಿರುದ್ಧ 5-3 ಗೋಲುಗಳ ಅಂತರದಿಂದ ಜಯ ದಾಖಲಿಸಿದೆ. ಈ ಮೂಲಕ 2 ಪಂದ್ಯಗಳ ಸರಣಿಯನ್ನು 1-1ರಿಂದ ಸಮಬಲಗೊಳಿಸಿದೆ.

ಬುಧವಾರ ನಡೆದಿದ್ದ ಮೊದಲ ಟೆಸ್ಟ್ ಪಂದ್ಯದಲ್ಲಿ ಜರ್ಮನಿ ತಂಡವು 2-1 ಅಂತರದಿಂದ ಜಯ ಸಾಧಿಸಿತ್ತು. ಸರಣಿ ವಿಜೇತರನ್ನು ನಿರ್ಣಯಿಸಲು ಶೂಟೌಟ್‌ಗೆ ಮೊರೆ ಹೋಗಲಾಯಿತು. ಶೂಟೌಟ್‌ನಲ್ಲಿ ಜರ್ಮನಿ ತಂಡವು 3-1 ಅಂತರದಿಂದ ಜಯ ಸಾಧಿಸಿತು.

7ನೇ ಹಾಗೂ 57ನೇ ನಿಮಿಷದಲ್ಲಿ ಅವಳಿ ಗೋಲುಗಳನ್ನು ಗಳಿಸಿದ ಇಯಾನ್ ಮಝ್‌ಕೌರ್ ಜರ್ಮನಿ ತಂಡ ಆರಂಭಿಕ ಮುನ್ನಡೆ ಪಡೆಯುವಲ್ಲಿ ನೆರವಾದರು. ಜರ್ಮನಿ ತಂಡ 60ನೇ ನಿಮಿಷದಲ್ಲಿ ಮತ್ತೊಂದು ಗೋಲು ದಾಖಲಿಸಿತ್ತು.

ಆದರೆ ಹರ್ಮನ್‌ಪ್ರೀತ್ ಸಿಂಗ್ ಬಳಗವು ದ್ವಿತೀಯಾರ್ಧದಲ್ಲಿ ತಿರುಗೇಟು ನೀಡಿತು. ಸುಖಜೀತ್ ಸಿಂಗ್(34ನೇ, 48ನೇ ನಿಮಿಷ), ನಾಯಕ ಹರ್ಮನ್‌ಪ್ರೀತ್ (42ನೇ, 43ನೇ ನಿಮಿಷ)ಅವಳಿ ಗೋಲು ಗಳಿಸಿದರೆ, ಅಭಿಷೇಕ್ 45ನೇ ನಿಮಿಷದಲ್ಲಿ ಗೋಲು ಗಳಿಸಿದರು. ಭಾರತದ ಗೆಲುವಿನೊಂದಿಗೆ ಸರಣಿಯು 1-1ರಿಂದ ಸಮಬಲಗೊಂಡಿತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News