ಉತ್ತಮ ಡೈವಿಂಗ್ ಕ್ಯಾಚ್ ಪಡೆದ ಶ್ರೇಯಸ್ ಅಯ್ಯರ್

Update: 2023-10-22 20:57 IST
ಉತ್ತಮ ಡೈವಿಂಗ್ ಕ್ಯಾಚ್ ಪಡೆದ ಶ್ರೇಯಸ್ ಅಯ್ಯರ್

Photo: twitter/CricCrazyJohns

  • whatsapp icon

ಧರ್ಮಶಾಲಾ, ಅ.22: ಇತ್ತೀಚೆಗಿನ ದಿನಗಳಲ್ಲಿ ಭಾರತೀಯ ಕ್ರಿಕೆಟ್ ತಂಡದ ಫೀಲ್ಡಿಂಗ್ ಗುಣಮಟ್ಟ ಗಣನೀಯವಾಗಿ ಸುಧಾರಿಸಿದೆ ಎಂದರೆ ಅತಿಶಯೋಕ್ತಿಯಾಗದು. ಪ್ರತಿ ಪಂದ್ಯದ ನಂತರ ಬೆಸ್ಟ್ ಫೀಲ್ಡರ್ ಮೆಡಲ್ ನೀಡಲಾಗುತ್ತದೆ.

ಈ ಹಿಂದಿನ ಪಂದ್ಯಗಳಲ್ಲಿ ಸೂಪರ್ಬ್ ಕ್ಯಾಚ್‌ಗಳಿಗಾಗಿ ವಿರಾಟ್ ಕೊಹ್ಲಿ, ರವೀಂದ್ರ ಜಡೇಜ ಹಾಗೂ ಕೆ.ಎಲ್.ರಾಹುಲ್ ಪದಕ ಸ್ವೀಕರಿಸಿದ್ದರು.

ರವಿವಾರ ನ್ಯೂಝಿಲ್ಯಾಂಡ್ ವಿರುದ್ಧ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ತಾನು ಕೂಡ ಪದಕದ ರೇಸ್‌ನಲ್ಲಿದ್ದೇನೆಂಬ ಸಂದೇಶ ನೀಡಿದ್ದಾರೆ.

ಡೆವೊನ್ ಕಾನ್ವೇ ವಿಕೆಟನ್ನು ತನ್ನ 2ನೇ ಓವರ್‌ನಲ್ಲಿ ಉರುಳಿಸಿದ ವೇಗದ ಬೌಲರ್ ಮುಹಮ್ಮದ್ ಸಿರಾಜ್ ನ್ಯೂಝಿಲ್ಯಾಂಡ್ ವಿರುದ್ಧ ಮೊದಲು ಫೀಲ್ಡಿಂಗ್ ಮಾಡುವ ತನ್ನ ನಾಯಕ ರೋಹಿತ್ ಶರ್ಮಾರ ನಿರ್ಧಾರವನ್ನು ಸಮರ್ಥಿಸಿಕೊಂಡರು. 3.3ನೇ ಓವರ್‌ನಲ್ಲಿ ಸಿರಾಜ್ ಎಸೆದ ಚೆಂಡು ಕಾನ್ವೇ ಅವರ ಪ್ಯಾಡ್‌ಗೆ ತಗಲಿ ಮಿಡ್ ವಿಕೆಟ್‌ನತ್ತ ಚಿಮ್ಮಿತು. ಆಗ ಶ್ರೇಯಸ್ ಅಯ್ಯರ್ ಬಲಕ್ಕೆ ಡೈವ್ ಮಾಡಿ ಶಾರ್ಪ್ ಕ್ಯಾಚ್ ಪಡೆದರು. ಶ್ರೇಯಸ್ ಅಯ್ಯರ್ ಅವರು ಫೀಲ್ಡಿಂಗ್ ಕೋಚ್‌ರತ್ತ ಸನ್ನೆ ಮಾಡಿ ಈ ಪಂದ್ಯದಲ್ಲಿ ಅತ್ಯುತ್ತಮ ಕ್ಯಾಚ್‌ಗಾಗಿ ನೀಡಲಿರುವ ಪದಕ ತನಗೆ ನೀಡಬೇಕೆಂಬ ಸಂದೇಶ ರವಾನಿಸಿದರು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News