ಫೈನಲ್ ಬಗ್ಗೆ ಅಬ್ಬರದ ಪ್ರಚಾರದ ಅಗತ್ಯವಿರಲಿಲ್ಲ: ಕಪಿಲ್ ದೇವ್

Update: 2023-11-28 16:43 GMT

 ಕಪಿಲ್ ದೇವ್ \ Photo: PTI

ಹೊಸದಿಲ್ಲಿ : ಇತ್ತೀಚೆಗೆ ಮುಕ್ತಾಯಗೊಂಡ ಐಸಿಸಿ ಏಕದಿನ ವಿಶ್ವಕಪ್ನಲ್ಲಿ ಭಾರತ ಗಳಿಸಿದ ಸತತ 10 ವಿಜಯಗಳನ್ನು ಕ್ರಿಕೆಟ್ ದಂತಕತೆ ಕಪಿಲ್ ದೇವ್ ಶ್ಲಾಘಿಸಿದ್ದಾರೆ. ಆದರೆ, ಬಹುತೇಕ ಖಚಿತವಾಗಿದ್ದ ಮೂರನೇ ಪ್ರಶಸ್ತಿಯ ಸುತ್ತ ನಿರ್ಮಿಸಲಾದ ಅಬ್ಬರದ ಪ್ರಚಾರದ ಅಗತ್ಯವಿರಲಿಲ್ಲ ಎಂದು ಅವರು ಹೇಳಿದ್ದಾರೆ.

ಫೈನಲ್ನಲ್ಲಿ ಆಸ್ಟ್ರೇಲಿಯವು ಆತಿಥೇಯ ಭಾರತವನ್ನು 6 ವಿಕೆಟ್ಗಳಿಂದ ಸೋಲಿಸಿ ಪ್ರಶಸ್ತಿ ಎತ್ತಿತು.

ಪಂದ್ಯಾವಳಿಯ ಅಂತಿಮ ದಿನ ನಮ್ಮದಾಗಿರಲಿಲ್ಲ ಎಂದು ಕಪಿಲ್ ದೇವ್ ಹೇಳಿದರು.

ಅಭಿಮಾನಿಗಳು ಆಟಗಾರರ ಮೇಲೆ ಹೆಚ್ಚು ಒತ್ತಡವನ್ನು ಹೇರಬಾರದು ಹಾಗೂ ಎಲ್ಲಾ ಕ್ರೀಡೆಗಳಂತೆ ಕ್ರಿಕೆಟ್ ಕೂಡ ಒಂದು ಎಂಬುದಾಗಿ ಭಾವಿಸಬೇಕು ಎಂದು ಅವರು ನುಡಿದರು.

‘‘ಹೃದಯ ಬಿರಿಯುವ ರೀತಿಯಲ್ಲಿ ಜನರು ಅಗಾಧ ನಿರೀಕ್ಷೆಗಳನ್ನು ಇಟ್ಟುಕೊಳ್ಳಬಾರದು. ನಮ್ಮಲ್ಲಿ ಸಮತೋಲನ ಇರಬೇಕು. ವಿಶ್ವಕಪ್ನಲ್ಲಿ ಸ್ಪರ್ಧಿಸಲು ಇತರ ತಂಡಗಳೂ ಭಾರತಕ್ಕೆ ಬಂದಿವೆ. ಇಷ್ಟೊಂದು ಅತಿರಂಜಿತ ಭಾವನೆಗಳನ್ನು ಸೃಷ್ಟಿಸಬಾರದು. ನಾವು ಕ್ರೀಡೆಗಳನ್ನು ಕ್ರೀಡೆಗಳಾಗಿಯೇ ನೋಡಬೇಕು’’ ಎಂದು 1983ರ ವಿಶ್ವಕಪ್ ವಿಜೇತ ತಂಡದ ನಾಯಕ ಹೇಳಿದರು. 

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News