ಡಿ.15ರಂದು ಬೆಂಗಳೂರಿನಲ್ಲಿ ಡಬ್ಲ್ಯುಪಿಎಲ್ ಹರಾಜು

Update: 2024-12-07 16:31 GMT

PC : The Hindu

ಹೊಸದಿಲ್ಲಿ : ಬಹು ನಿರೀಕ್ಷಿತ ಮಹಿಳೆಯರ ಪ್ರೀಮಿಯರ್ ಲೀಗ್(ಡಬ್ಲ್ಯುಪಿಎಲ್)-2025ರ ಹರಾಜು ಪ್ರಕ್ರಿಯೆಗೆ ವೇದಿಕೆ ಸಜ್ಜಾಗಿದ್ದು, ಈ ಬಾರಿಯ ಹರಾಜು ಕಾರ್ಯಕ್ರಮವು ಡಿಸೆಂಬರ್ 15ರಂದು ಬೆಂಗಳೂರಿನಲ್ಲಿ ನಡೆಯಲಿದೆ.

ಅಗ್ರಮಾನ್ಯ ಅಂತರರಾಷ್ಟ್ರೀಯ ಸ್ಟಾರ್‌ಗಳು ಹಾಗೂ ದೇಶೀಯ ಪ್ರತಿಭೆಗಳ ಸಹಿತ ಒಟ್ಟು 120 ಆಟಗಾರ್ತಿಯರು ಹರಾಜಿನ ಕಣದಲ್ಲಿದ್ದು, ಫ್ರಾಂಚೈಸಿಗಳು ಮುಂಬರುವ ಋತುವಿಗೆ ತಮ್ಮ ತಂಡಗಳನ್ನು ಆಯ್ಕೆ ಮಾಡಲಿವೆ.

19 ಸ್ಥಾನಗಳು ತೆರವಾಗಿದ್ದು, 5 ಸ್ಥಾನಗಳು ವಿದೇಶೀ ಆಟಗಾರರಿಗೆ ಮೀಸಲಾಗಿದೆ. ತಂಡಗಳು ಪಂದ್ಯದ ದಿಕ್ಕು ಬದಲಿಸುವ ಪ್ರತಿಭೆಗಳನ್ನು ತೆಕ್ಕೆಗೆ ಸೇರಿಸಿಕೊಳ್ಳಲು ರಣನೀತಿ ರಚಿಸಲಿದ್ದು, ತುರುಸಿನ ಬಿಡ್ ನಡೆಯಬಹುದು.

ಹರಾಜಿನ ಕಣದಲ್ಲಿರುವ 120 ಆಟಗಾರ್ತಿಯರ ಪಟ್ಟಿಯಲ್ಲಿ ಭಾರತದ 91 ಹಾಗೂ ವಿದೇಶದ 29 ಕ್ರಿಕೆಟಿಗರಿದ್ದಾರೆ. ಅಸೋಸಿಯೇಟ್ ದೇಶಗಳ ಮೂವರಿದ್ದಾರೆ ಎಂದು ಡಬ್ಲ್ಯುಪಿಎಲ್ ಮಾಧ್ಯಮ ಪ್ರಕಟನೆ ತಿಳಿಸಿದೆ.

ಈ ಪೈಕಿ 82 ಆಟಗಾರರು ಹೊಸಬರಾಗಿದ್ದಾರೆ. ಹರಾಜು ಕಾರ್ಯಕ್ರಮವು ಮಧ್ಯಾಹ್ನ 3 ಗಂಟೆಗೆ ಆರಂಭವಾಗಲಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News