ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತನ್ನೊಂದಿಗೆ ತರಬೇತಿ ನಿಲ್ಲಿಸಿದ್ದಕ್ಕೆ ಕಾರಣ ತಿಳಿಸಿದ ಯೋಗ್ರಾಜ್ ಸಿಂಗ್

Update: 2025-01-13 15:06 GMT

ಅರ್ಜುನ್, ಯೋಗ್ರಾಜ್ ಸಿಂಗ್ | PC : X

ಹೊಸದಿಲ್ಲಿ : ಕ್ರಿಕೆಟ್ ದಂತಕತೆ ಸಚಿನ್ ತೆಂಡುಲ್ಕರ್‌ರ ಪುತ್ರ ಅರ್ಜುನ್ 2022ರಲ್ಲಿ ಸ್ವಲ್ಪ ಸಮಯ ಭಾರತದ ಮಾಜಿ ಕ್ರಿಕೆಟಿಗ ಹಾಗೂ ಹಿರಿಯ ಕೋಚ್ ಯೋಗ್ರಾಜ್ ಸಿಂಗ್ ಬಳಿ ತರಬೇತಿ ಪಡೆದಿದ್ದರು. 

ಯೋಗ್ರಾಜ್ ಅವರು ಚಂಡಿಗಡದಲ್ಲಿ ತನ್ನ ಕ್ರಿಕೆಟ್ ಅಕಾಡೆಮಿ ನಡೆಸುತ್ತಿದ್ದಾರೆ. ಯುವ ಆಲ್‌ರೌಂಡರ್ ಅರ್ಜುನ್ ಈ ಅಕಾಡೆಮಿಗೆ ಸೇರಿದ್ದರು. ಆದರೆ, ಕೇವಲ 12 ದಿನಗಳ ಮಾತ್ರ ಅಲ್ಲಿ ತರಬೇತಿ ಪಡೆದಿದ್ದರು.

ತನ್ನೊಂದಿಗೆ ತರಬೇತಿ ಪಡೆದ ಅವಧಿಯಲ್ಲಿ ಅರ್ಜುನ್ ರಣಜಿ ಟ್ರೋಫಿಯಲ್ಲಿ ಶತಕ ಗಳಿಸಿದ್ದರು. ಐಪಿಎಲ್ ಗುತ್ತಿಗೆ ಪಡೆದ ನಂತರ ನನ್ನೊಂದಿಗೆ ತರಬೇತಿ ಪಡೆಯುವುದನ್ನು ನಿಲ್ಲಿಸಿದ್ದರು ಎಂದು ಯೋಗ್ರಾಜ್ ಹೇಳಿಕೊಂಡಿದ್ದಾರೆ.

ಸಚಿನ್ ಪುತ್ರ ನನ್ನ ಅಕಾಡೆಮಿಯಲ್ಲಿ 12 ದಿನಗಳ ಕಾಲ ತರಬೇತಿ ಪಡೆದಿದ್ದರು.ಶತಕವನ್ನು ಗಳಿಸಿದ್ದರು. ತನ್ನ ಮೊದಲ ಶತಕವನ್ನು ಗಳಿಸಿದ ನಂತರ ಐಪಿಎಲ್‌ಗೆ ಸೇರಿದ್ದರು. ಆತನ(ಅರ್ಜುನ)ಹೆಸರು ನನ್ನ ಹೆಸರೊಂದಿಗೆ ಸೇರುವುದನ್ನು ಕೆಲವರು ಇಷ್ಟಪಡಲಿಲ್ಲ. ಸಚಿನ್‌ಗೆ ಫೋನ್ ಮಾಡಿ, ಅರ್ಜುನ್‌ಗೆ ಒಂದು ವರ್ಷ ತರಬೇತಿ ನೀಡಲು ನನ್ನ ಬಳಿ ಕಳುಹಿಸುವಂತೆ ಹೇಳು ಎಂದು ಯುವಿಗೆ(ಯುವರಾಜ್)ನಾನು ಹೇಳಿದ್ದೆ ಎಂದು 66ರ ಹರೆಯದ ಯೋಗ್ರಾಜ್ ಹೇಳಿದರು.

ಯುವರಾಜ್ ಸಿಂಗ್ ತಂದೆ ಯೋಗ್ರಾಜ್ ಭಾರತದ ಪರ 1 ಟೆಸ್ಟ್ ಹಾಗೂ 6 ಏಕದಿನ ಪಂದ್ಯಗಳನ್ನು ಆಡಿದ್ದರು.

25 ವರ್ಷ ವಯಸ್ಸಿನ ಅರ್ಜುನ ಈ ತನಕ 17 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, 532 ರನ್ ಹಾಗೂ 37 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಮುಂಬೈ ಇಂಡಿಯನ್ಸ್ ಪರ ಎರಡು ಋತುವಿನಲ್ಲಿ ಐಪಿಎಲ್ ಟೂರ್ನಿಯಲ್ಲಿ ಆಡಿದ್ದ ಅರ್ಜುನ್ 5 ಪಂದ್ಯಗಳನ್ನು ಆಡಿದ್ದರು. 2024ರ ಮೆಗಾ ಹರಾಜಿನಲ್ಲಿ ಅರ್ಜುನ್ ಅವರು ಮುಂಬೈ ತಂಡಕ್ಕೆ 30 ಲಕ್ಷ ರೂ. ಗೆ ಹರಾಜಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News