ಚಾಂಪಿಯನ್ಸ್ ಟ್ರೋಫಿಗೆ ತಂಡವನ್ನು ಪ್ರಕಟಿಸಿದ ಆಸ್ಟ್ರೇಲಿಯ: ಕಮಿನ್ಸ್ ನಾಯಕತ್ವ

Update: 2025-01-13 14:57 GMT

ಪ್ಯಾಟ್ ಕಮಿನ್ಸ್ | PC : PTI 

ಮೆಲ್ಬರ್ನ್: ಆಸ್ಟ್ರೇಲಿಯ ಕ್ರಿಕೆಟ್ ತಂಡವು ಮುಂಬರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಗಾಗಿ 15 ಸದಸ್ಯರನ್ನು ಒಳಗೊಂಡ ಪ್ರಾಥಮಿಕ ತಂಡವನ್ನು ಸೋಮವಾರ ಪ್ರಕಟಿಸಿದೆ. ಪ್ಯಾಟ್ ಕಮಿನ್ಸ್ ತಂಡದ ನಾಯಕತ್ವ ವಹಿಸಿದ್ದಾರೆ.

ಹಿಮ್ಮಡಿ ಗಾಯದ ಸಮಸ್ಯೆಯಿಂದಾಗಿ ಈ ತಿಂಗಳಾಂತ್ಯದಲ್ಲಿ ಶ್ರೀಲಂಕಾದಲ್ಲಿ ನಡೆಯಲಿರುವ ಟೆಸ್ಟ್ ಸರಣಿಗೆ ಆಸ್ಟ್ರೇಲಿಯ ತಂಡದೊಂದಿಗೆ ತೆರಳುವುದಿಲ್ಲ ಎಂದು ಕಮಿನ್ಸ್ ಇತ್ತೀಚೆಗೆ ಖಚಿತಪಡಿಸಿದ್ದರು.

ಐಸಿಸಿ ಟೂರ್ನಿಗೆ ಆಲ್‌ ರೌಂಡರ್‌ಗಳಾದ ಮ್ಯಾಟ್ ಶಾರ್ಟ್ ಹಾಗೂ ಆ್ಯರೊನ್ ಹಾರ್ಡಿ ಮೊದಲ ಬಾರಿ ಕರೆ ಪಡೆದಿದ್ದಾರೆ. ನಾಥನ್ ಎಲ್ಲಿಸ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಭಾರತದಲ್ಲಿ ನಡೆದಿರುವ 2023ರ ಐಸಿಸಿ ಪುರುಷರ ಏಕದಿನ ಕ್ರಿಕೆಟ್ ವಿಶ್ವಕಪ್ ಗೆದ್ದಿರುವ ತಂಡದಲ್ಲಿ ಮೂರು ಬದಲಾವಣೆಗಳನ್ನ ಮಾಡಲಾಗಿದೆ. ಡೇವಿಡ್ ವಾರ್ನರ್(ನಿವೃತ್ತಿ), ಕ್ಯಾಮರೂನ್ ಗ್ರೀನ್(ಬೆನ್ನುನೋವು)ಹಾಗೂ ಸೀನ್ ಅಬಾಟ್ ಬದಲಿಗೆ ಆಟಗಾರರನ್ನು ಆಯ್ಕೆ ಮಾಡಲಾಗಿದೆ.

ಬಿಗ್ ಬ್ಯಾಶ್ ಲೀಗ್‌ನಲ್ಲಿ ಹೊಬರ್ಟ್ ತಂಡದ ಪರ ಶ್ರೇಷ್ಠ ಪ್ರದರ್ಶನ ನೀಡಿದ್ದ ಎಲ್ಲಿಸ್‌ಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ.

ವಾರ್ನರ್ ನಿವೃತ್ತಿಯ ನಂತರ ಶಾರ್ಟ್ ಆಸೀಸ್‌ನ ಪ್ರಮುಖ ಆಟಗಾರನಾಗಿದ್ದು, ಹಾರ್ಡಿ ಅವರು 11 ಬಾರಿ ಏಕದಿನ ಪಂದ್ಯವನ್ನು ಆಡಿದ್ದಾರೆ.

*ಆಸ್ಟ್ರೇಲಿಯ ತಂಡ: ಪ್ಯಾಟ್ ಕಮಿನ್ಸ್(ನಾಯಕ), ಅಲೆಕ್ಸ್ ಕ್ಯಾರಿ, ನಾಥನ್ ಎಲ್ಲಿಸ್, ಆ್ಯರೊನ್ ಹಾರ್ಡಿ, ಜೋಶ್ ಹೇಝಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮಾರ್ನಸ್ ಲ್ಯಾಬುಶೇನ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಮ್ಯಾಟ್ ಶಾರ್ಟ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೋಯಿನಿಸ್, ಆಡಮ್ ಝಂಪಾ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News