ಕೆಎಸ್ಸಾರ್ಟಿಸಿಗೆ 9 ರಾಷ್ಟ್ರಮಟ್ಟದ ಪ್ರಶಸ್ತಿ ಪ್ರಕಟ
Update: 2025-01-01 15:35 GMT
ಬೆಂಗಳೂರು: ಕೆಎಸ್ಸಾರ್ಟಿಸಿಗೆ ಆರು ಆಡ್ ವಲ್ಡ್ ಶೋಡೌನ್, ಎರಡು ಗ್ರೋವ್ ಕೇರ್ ಪ್ರಶಸ್ತಿ, ಒಂದು ಪಿಆರ್ ಎಸ್‍ಐ ರಾಷ್ಟ್ರೀಯ ಪ್ರಶಸ್ತಿ ಸೇರಿ 9 ರಾಷ್ಟ್ರಮಟ್ಟದ ಪ್ರಶಸ್ತಿಗಳು ಲಭಿಸಿವೆ.
ಅಶ್ವಮೇಧ ಕ್ಲಾಸಿಕ್ ಬಸ್ಸು, ಅಂಬಾರಿ ಉತ್ಸವ ಬಸ್, ಪಲ್ಲಕ್ಕಿ ಬಸ್ಸುಗಳ ಪರಿಚಯ ಹಾಗೂ ಕಾರ್ಯಚರಣೆಗಾಗಿ ಆರು ಆಡ್ ವಲ್ಡ್ ಶೋಡೌನ್ ಪ್ರಶಸ್ತಿಗಳು ಲಭಿಸಿವೆ. ನಿಗಮವು ಅತ್ಯುತ್ತಮ ಪರಿಸರ ನಿರ್ವಹಣೆ ಹಾಗೂ ವಿನೂತನ ಮಾನವ ಸಂಪನ್ಮೂಲ ಯೋಜನೆಗಳ ಅನುಷ್ಠಾನಕ್ಕಾಗಿ ಗ್ರೋ ಕೇರ್ ಇಂಡಿಯಾ ಪ್ರಶಸ್ತಿ ಎರಡು ವಿಭಾಗದಲ್ಲಿ ಪಡೆದಿರುತ್ತದೆ.
ಪಿಆರ್ ಎಸ್‍ಐ ರಾಷ್ಟ್ರೀಯ ಪ್ರಶಸ್ತಿಯನ್ನು ನಿಗಮಕ್ಕೆ ಕಾರ್ಪೋರೇಟ್ ಚಿತ್ರ ವಿಭಾಗದಲ್ಲಿ ಲಭಿಸಿದೆ. ನಿಗಮಕ್ಕೆ ಆಡ್ ವಲ್ಡ್ ಶೋಡೌನ್ ಪ್ರಶಸ್ತಿಗಳನ್ನು ಹೊಸದಿಲ್ಲಿಯಲ್ಲಿ, ಗ್ರೋ ಕೇರ್ ಇಂಡಿಯಾ ಪ್ರಶಸ್ತಿಗಳನ್ನು ಗೋವಾದಲ್ಲಿ ಹಾಗೂ ಪಿಆರ್‍ಎಸ್‍ಐ ಪ್ರಶಸ್ತಿಯನ್ನು ರಾಯಪುರದಲ್ಲಿ ಪ್ರದಾನ ಮಾಡಲಾಯಿತು ಎಂದು ಪ್ರಕಟನೆ ತಿಳಿಸಿದೆ.