ಸರ್ಕಾರ ರಚನೆಯಾಗಿ 6 ತಿಂಗಳ ಬಳಿಕ ಬಿಜೆಪಿಗೆ ಜ್ಞಾನೋದಯ: ಕಾಂಗ್ರೆಸ್‌

Update: 2023-11-17 10:22 GMT

ಚುನಾವಣೆ ಮುಗಿದು, ಸರ್ಕಾರ ರಚನೆಯಾಗಿ 6 ತಿಂಗಳು ಕಳೆದ ಮೇಲೆ ಬಿಜೆಪಿಯಲ್ಲಿ ವಿರೋಧ ಪಕ್ಷದ ನಾಯಕನ ಆಯ್ಕೆಗೆ ಜ್ಞಾನೋದಯವಾದಂತಿದೆ ಎಂದು ಕಾಂಗ್ರೆಸ್‌ ವ್ಯಂಗ್ಯವಾಡಿದೆ.

ಈ ವಿಳಂಬಕ್ಕೆ ವ್ಯವಹಾರ ಕುದುರದಿರುವುದೇ ಕಾರಣವೇ? ವಿಪಕ್ಷ ನಾಯಕನ ಸ್ಥಾನಕ್ಕೆ ಇರುವ ಹರಾಜಿನ ಬೆಲೆ ಇದುವರೆಗೂ ಬಿಜೆಪಿಯ ಬಂಡಾಯ ನಾಯಕರು ಬಹಿರಂಗ ಪಡಿಸಿಲ್ಲ. ಮೊದಲು ಬಹಿರಂಗ ಪಡಿಸುವ ಬಿಜೆಪಿಯ ಬಂಡಾಯ ನಾಯಕರಿಗೆ ಕಾಂಗ್ರೆಸ್ ಪಕ್ಷದಿಂದ ಬಹುಮಾನ ನೀಡಲಾಗುವುದು. BSY ಮತ್ತು ಸಂತೋಷ್ ಗುಂಪುಗಳಿಗೆ ಮಾಹಿತಿ ನೀಡದೆ ಗೌಪ್ಯತೆ ಕಾಪಾಡಲಾಗುವುದು ಎಂದು ಅಣಕಿಸಿದೆ.

ಹಿಂದೆ ಸಿಎಂ ಹುದ್ದೆಯನ್ನು 2,500 ಕೋಟಿಗೆ, ಮಂತ್ರಿಗಿರಿಯನ್ನು 100 ಕೋಟಿಗೆ ಮಾರಿಕೊಂಡಿದ್ದ ಬಿಜೆಪಿ ಈಗ ರಾಜ್ಯಾಧ್ಯಕ್ಷ ಹುದ್ದೆಯನ್ನು ಅದೆಷ್ಟು ಕೋಟಿಗೆ ಮಾರಿಕೊಂಡಿದೆ ಎನ್ನುವುದನ್ನು ಬಸನಗೌಡ ಪಾಟೀಲ್‌ ಯತ್ನಾಳ್‌ ಅವರೇ ಬಹಿರಂಗಪಡಿಸಬೇಕು. ಹಾಗೆಯೇ ಇಂದು ವಿಪಕ್ಷ ನಾಯಕನ ಹುದ್ದೆಯ ಹರಾಜಿನಲ್ಲಿ ಎಷ್ಟು ಸಂಪಾದನೆಯಾಗುವ ನಿರೀಕ್ಷೆ ಇದೆ ಎಂದು ಪ್ರಶ್ನಿಸಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News