15 ವರ್ಷದ ಹಳೆ ವಾಹನಗಳನ್ನು ಗುಜರಿಗೆ ಹಾಕುವ ಬಗ್ಗೆ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ

Update: 2023-09-23 09:10 GMT

ಬೆಂಗಳೂರು: ಕೇಂದ್ರ ಸರಕಾರವು 15 ವರ್ಷ ಮೇಲ್ಪಟ್ಟ ಸರಕಾರಿ ಕಚೇರಿಗಳಲ್ಲಿನ ವಾಹನಗಳನ್ನು ಸ್ಕ್ರಾಪ್ ಮಾಡಲು ನೀತಿ ತಂದಿದೆ. ಈ  ಬಗ್ಗೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. 

ಈ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್, ʼಕೇಂದ್ರ ಸರಕಾರವು 15 ವರ್ಷ ಮೇಲ್ಪಟ್ಟ ವಾಹನಗಳನ್ನು ಸ್ಕ್ರಾಪ್ ಮಾಡಲು ನೀತಿ ತಂದಿದೆ. ಅದರಂತೆ, ರಾಜ್ಯ ಸರಕಾರದ 15,295 ವಾಹನಗಳನ್ನು ಹಂತ ಹಂತವಾಗಿ ಸ್ಕ್ರಾಪ್ ಮಾಡಲಾಗುವುದುʼ ಎಂದು ತಿಳಿಸಿದರು. 

ʼʼ2023-24ನೆ ಸಾಲಿನಲ್ಲಿ 5 ಸಾವಿರ ವಾಹನಗಳನ್ನು ಸ್ಕ್ರಾಪ್ ಮಾಡಲು ನಿರ್ಧರಿಸಲಾಗಿದೆʼʼ ಎಂದು ಅವರು ಮಾಹಿತಿ ನೀಡಿದರು. 

ʼʼಪ್ರತಿ ವಾಹನಕ್ಕೆ 10 ಲಕ್ಷ ರೂ.ವೆಚ್ಚʼʼ

ʼʼಪ್ರತಿಯೊಂದು ವಾಹನಕ್ಕೂ 10 ಲಕ್ಷ ರೂ.ವೆಚ್ಚವಾಗುತ್ತದೆ. ಅದರಂತೆ 5 ಸಾವಿರ ವಾಹನಗಳಿಗೆ 500 ಕೋಟಿ ರೂ.ಬೇಕಾಗುತ್ತದೆ. ಕೇಂದ್ರ ಸರಕಾರದಿಂದ ಇದಕ್ಕೆ 100 ಕೋಟಿ ರೂ.ಪ್ರೋತ್ಸಾಹ ಧನ ಸಿಗುತ್ತದೆ. ಪೊಲೀಸ್ ಇಲಾಖೆಗೆ ಹೊಸ ವಾಹನಗಳನ್ನು ಖರೀದಿಸಲು 100 ಕೋಟಿ ರೂ.ಮಂಜೂರು ಮಾಡಲು ನಿರ್ಧರಿಸಲಾಗಿದೆʼʼ ಎಂದು ಅವರು ತಿಳಿಸಿದರು.


Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News