ವಿಧಾನಸಭೆ ಅಧಿವೇಶನ: ಅನ್ನಭಾಗ್ಯ ಯೋಜನೆ ಬಗ್ಗೆ ಹಾಡಿ ಹೊಗಳಿದ ಬಿಜೆಪಿ ಶಾಸಕ ಗುರುರಾಜ್ ಗಂಟಿಹೊಳೆ

Update: 2023-07-17 12:48 GMT

ಬೆಂಗಳೂರು, ಜು. 17: ‘ಬಡವರು, ದೀನ-ದಲಿತರಿಗೆ ಅಕ್ಕಿಯನ್ನು ವಿತರಿಸುವ ‘ಅನ್ನಭಾಗ್ಯ ಯೋಜನೆ’ ರೂಪಿಸಿ, ಅನುಷ್ಟಾನಕ್ಕೆ ತಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಬಡಜನರ ನೋವನ್ನು ಖುದ್ದು ಕಂಡವನಾಗಿ ನಾನು ಅಭಿನಂದಿಸುತ್ತೇನೆ’ ಎಂದು ಬಿಜೆಪಿ ಸದಸ್ಯ ಗುರುರಾಜ್ ಗಂಟಿಹೊಳೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸೋಮವಾರ ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಸರಕಾರದ ಯೋಜನೆಗಳು ಬಡವರನ್ನು ಅಣಕಿಸುವ ಅಥವಾ ಆ ಮೂಲಕ ಆಡಳಿತದ ಲಾಭದ ಉದ್ದೇಶಕ್ಕಾಗಿ ರೂಪಿಸುವ ಕಾರ್ಯಕ್ರಮಗಳು ಆಗಬಾರದು. ಬಜೆಟ್‍ನ ಅನುದಾನ ಭವಿಷ್ಯದಲ್ಲಿ ಆಸ್ತಿ, ಸಂಪನ್ಮೂಲ ಸೃಷ್ಟಿಗೆ ಆದ್ಯತೆ ನೀಡುವಂತೆ ಆಗಬೇಕು’ ಎಂದು ಸಲಹೆ ನೀಡಿದರು.

‘ಬಡವರಿಗೆ ಅನ್ನ ನೀಡುವುದು ಒಳ್ಳೆಯದೆ. ಆದರೆ, ಅವರು ನಾವು ನೀಡುವ ಅಕ್ಕಿ ಕಾಳಿಗಾಗಿ ಪರಿತಪಿಸುವಂತೆ ಸ್ಥಿತಿ ಆಗಬಾರದು. ಬಡವರಿಗೆ ಅಕ್ಕಿ ಕೊಡುವ ಬದಲಿಗೆ ಅವರಿಗೆ ಉದ್ಯೋಗ ಕಲ್ಪಿಸಿ, ದುಡಿಯುವ ಕೈಗಳಿಗೆ ಶಕ್ತಿ ನೀಡಬೇಕು’ ಎಂದ ಅವರು, ‘ನಮ್ಮ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಗೆ ಸರಕಾರ ಆದ್ಯತೆ ನೀಡಬೇಕು’ ಎಂದು ಸಲಹೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News