NTT Global ಜೊತೆ Bearys Group ಸಹಭಾಗಿತ್ವ

ಚೆನ್ನೈಯಲ್ಲಿ ಪ್ರಪ್ರಥಮ ಹೈಪರ್ ಸ್ಕೇಲ್ (ಭಾರೀ ಗಾತ್ರದ) NTT Data Centre ಅನ್ನು ಬ್ಯಾರೀಸ್ ಗ್ರೂಪ್ ಯಶಸ್ವಿಯಾಗಿ ನಿರ್ಮಿಸಿ ಇತ್ತೀಚೆಗೆ ಹಸ್ತಾಂತರಿಸಿತು. ಈ ಯೋಜನೆ ಈಗ ಅದರ ಅತ್ಯಂತ ಸೂಕ್ತ ಸ್ಥಳ, ವಿಶ್ವದರ್ಜೆಯ ವಿದ್ಯುತ್ ವ್ಯವಸ್ಥೆ , ಅತ್ಯುತ್ತಮ ಮೂಲ ಸೌಲಭ್ಯಗಳು, ಅತ್ಯಾಧುನಿಕ ಹಾಗು ವೈಜ್ಞಾನಿಕ ವಿನ್ಯಾಸ ಹಾಗು ಉತ್ಕೃಷ್ಟ ವಾಸ್ತುಶಿಲ್ಪಗಳಿಂದಾಗಿ ದೇಶದ ಡೇಟಾ ಸೆಂಟರ್ ಕ್ಷೇತ್ರದಲ್ಲೇ ಅತ್ಯಂತ ಶ್ರೇಷ್ಠ ಯೋಜನೆ ಎಂಬ ಮನ್ನಣೆ ಪಡೆದಿದೆ.

Update: 2023-07-20 15:02 GMT

ಇತ್ತೀಚೆಗೆ ಚೆನ್ನೈನ ತಾಜ್ ಕೋರಮಂಡಲ್ ನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಬ್ಯಾರೀಸ್ ಗ್ರೂಪ್ ನ ಸ್ಥಾಪಕರು ಮತ್ತು ಸಿ.ಎಂ.ಡಿ ಆಗಿರುವ ಸಯ್ಯದ್ ಮುಹಮ್ಮದ್ ಬ್ಯಾರಿಯವರು NTT Global ನ ಅಧ್ಯಕ್ಷರಾದ ಶರದ್ ಸಾಂಗಿ ಹಾಗು ಆಡಳಿತ ನಿರ್ದೇಶಕ ಶೇಖರ್ ಶರ್ಮಾ ಅವರಿಗೆ ಸ್ಮರಣಿಕೆಯನ್ನು ನೀಡಿದರು.

“‘Design-Build-Deliver (ವಿನ್ಯಾಸ-ನಿರ್ಮಾಣ-ಹಸ್ತಾಂತರ) ಮಾದರಿಯಲ್ಲಿ ದೇಶಾದ್ಯಂತ ಡೇಟಾ ಸೆಂಟರ್ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಲ್ಲಿ ಬ್ಯಾರೀಸ್ ಗ್ರೂಪ್ ಪಡೆದಿರುವ ನೈಪುಣ್ಯತೆಗೆ ಈ ಚೆನ್ನೈ ಯೋಜನೆ ಸಾಕ್ಷಿಯಾಗಿದೆ. NTT Global, Microsoft, Nxtra ಗಳಂತಹ ಪ್ರತಿಷ್ಠಿತ ಕಂಪೆನಿಗಳಿಗಾಗಿ 40 ಲಕ್ಷ ಚದರ ಅಡಿಗಳಿಗಿಂತಲೂ ಹೆಚ್ಚು ವಿಸ್ತೀರ್ಣ ಹಾಗು 350 ಮೆಗಾ ವ್ಯಾಟ್ ಗಳಿಗಿಂತಲೂ ಹೆಚ್ಚು ವಿದ್ಯುತ್ ಸಾಮರ್ಥ್ಯದ ಈಗಾಗಲೇ ನಿರ್ಮಾಣ ಪೂರ್ಣಗೊಂಡಿರುವ ಐದು ಯೋಜನೆಗಳು ಹಾಗು ನಿರ್ಮಾಣ ಪ್ರಗತಿಯಲ್ಲಿರುವ ಇನ್ನೂ ಐದು ಯೋಜನೆಗಳ ಮೂಲಕ ಬ್ಯಾರೀಸ್ ಗ್ರೂಪ್ ದೇಶದಲ್ಲೇ ಅತಿದೊಡ್ಡ ಡೇಟಾ ಸೆಂಟರ್ ಡೆವಲಪರ್ ಆಗಿ ಹೊರಹೊಮ್ಮಿರುವುದು ನಮಗೆ ತುಂಬಾ ಸಂತಸ ತಂದಿದೆ" ಎಂದು ಸಯ್ಯದ್ ಮುಹಮ್ಮದ್ ಬ್ಯಾರಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News