ಬೆಂಗಳೂರು: 30ಕ್ಕೂ ಹೆಚ್ಚು ವಾಹನಗಳನ್ನು ಜಖಂಗೊಳಿಸಿದ ದುಷ್ಕರ್ಮಿಗಳು

Update: 2023-11-10 15:51 GMT

ಘಟನಾ ಸ್ಥಳದಲ್ಲಿ ಶಾಸಕ ಮುನಿರತ್ನ

ಬೆಂಗಳೂರು, ನ.10: ಮದ್ಯದ ಅಮಲಿನಲ್ಲಿ ಮೂವರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ 30ಕ್ಕೂ ಹೆಚ್ಚು ವಾಹನಗಳನ್ನು ಜಖಂ ಮಾಡಿದ ಘಟನೆ ಇಲ್ಲಿನ ಲಗ್ಗೆರೆಯ ರಾಜೀವ್‍ಗಾಂಧಿ ನಗರದಲ್ಲಿ ವರದಿಯಾಗಿದೆ.

30ಕ್ಕೂ ಹೆಚ್ಚು ವಾಹನಗಳ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳನ್ನು ಬೀಸಿದ್ದು, 12 ಕಾರು, 1 ಆಟೋ, 4 ಟೆಂಪೆÇೀಗಳ ಗ್ಲಾಸ್ ಪುಡಿಯಾಗಿ, ವಾಹನಗಳು ಹಾನಿಯಾಗಿವೆ. ನ.9ರ ಬೆಳಗಿನ ಜಾವ ಸುಮಾರು 3 ಗಂಟೆಯ ವೇಳೆಗೆ ಮುಖಕ್ಕೆ ಮಾಸ್ಕ್ ಧರಿಸಿದ ಮೂವರು ಈ ಕೃತ್ಯ ಎಸಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ಭೇಟಿ ನೀಡಿ ಪರಿಶೀಲನೆ ನಡೆಸಿ ಆರೋಪಿಗಳ ಬಂಧನಕ್ಕೆ ರಾಜಗೋಪಾಲನಗರ ಪೊಲೀಸರು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News