ಬಿಜೆಪಿಯವರಿಗೆ ಅಂಬೇಡ್ಕರ್ ಅವರ ಸಂವಿಧಾನದ ಅಡಿಯಲ್ಲಿ ಬದುಕುವುದಕ್ಕೆ ಸಾಧ್ಯವಾಗುತ್ತಿಲ್ಲವೇ?: ಕಾಂಗ್ರೆಸ್ ಪ್ರಶ್ನೆ
ಬೆಂಗಳೂರು : ಹಿಂದೆ "ಸಂವಿಧಾನ ಬದಲಿಸುವುದಕ್ಕೇ ನಾವು ಬಂದಿರುವುದು" ಎಂದಿದ್ದ ಬಿಜೆಪಿ ಸಂಸದ ಈಗ "ಸಂವಿಧಾನ ತಿದ್ದುಪಡಿ ಮಾಡುತ್ತೇವೆ" ಎಂದಿದ್ದಾರೆ. ಬದಲಾವಣೆಯಿಂದ ತಿದ್ದುಪಡಿಗೆ ಬದಲಾದ ಸಂಸದ ಅನಂತಕುಮಾರ್ ಹೆಗಡೆ ಅವರ ಹೇಳಿಕೆಯ ಹಿಂದಿನ ಅಸಲಿ ಉದ್ದೇಶವೇನು? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ʼಸಂವಿಧಾನ ತಿದ್ದುಪಡಿ ಎನ್ನುವುದು ಬಿಜೆಪಿಗೆ ಚುನಾವಣಾ ವಿಷಯವೇ? ಹಾದಿ ಬೀದಿಯಲ್ಲಿ ಚರ್ಚಿಸುವ ವಿಷಯವೇ?. ಈ "ತಿದ್ದುಪಡಿ" ಹೇಳಿಕೆಯ ಹಿಂದಿರುವುದು "ಬದಲಾವಣೆ"ಯ ಇರಾದೆಯೇ?ʼ ಎಂದು ಹರಿಹಾಯ್ದಿದೆ.
"ಮಾತೆತ್ತಿದರೆ ಬಿಜೆಪಿ ಸಂವಿಧಾನದ ಬುಡಕ್ಕೆ ಹೋಗುವುದೇಕೆ? ಬಿಜೆಪಿಗರಿಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಅಡಿಯಲ್ಲಿ ಬದುಕುವುದಕ್ಕೆ ಸಾಧ್ಯವಾಗುತ್ತಿಲ್ಲವೇ?" ಎಂದು ಎಂದು ಪ್ರಶ್ನಿಸಿದೆ.
ಹಿಂದೆ "ಸಂವಿಧಾನ ಬದಲಿಸುವುದಕ್ಕೇ ನಾವು ಬಂದಿರುವುದು" ಎಂದಿದ್ದ ಬಿಜೆಪಿ ಸಂಸದ ಈಗ "ಸಂವಿಧಾನ ತಿದ್ದುಪಡಿ ಮಾಡುತ್ತೇವೆ" ಎಂದಿದ್ದಾರೆ.ಬದಲಾವಣೆಯಿಂದ ತಿದ್ದುಪಡಿಗೆ ಬದಲಾದ ಸಂಸದ @AnantkumarH ಅವರ ಹೇಳಿಕೆಯ ಹಿಂದಿನ ಅಸಲಿ ಉದ್ದೇಶವೇನು?ಸಂವಿಧಾನ ತಿದ್ದುಪಡಿ ಎನ್ನುವುದು @BJP4Karnataka ಗೆ ಚುನಾವಣಾ ವಿಷಯವೇ? ಹಾದಿ ಬೀದಿಯಲ್ಲಿ…
— Karnataka Congress (@INCKarnataka) March 10, 2024