ಚೈತ್ರಾ ಕುಂದಾಪುರ ವಂಚನೆ ಪ್ರಕರಣ: ತನಿಖೆಗೆ ಆಗ್ರಹಿಸಿ ಈಡಿಗೆ ದೂರು

Update: 2023-09-20 18:02 GMT

ಬೆಂಗಳೂರು, ಸೆ.20: ಕಳೆದ ವಿಧಾನಸಭಾ ಚುನಾವಣೆಯ ವೇಳೆ ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಕೋಟ್ಯಂತರ ರೂ. ವಂಚಿಸಿರುವ ಪ್ರಕರಣದ ಆರೋಪಿತೆ ಚೈತ್ರಾ ಕುಂದಾಪುರ ಮತ್ತು ಆಕೆಯ ಸಂಗಡಿಗರು ಹಾಗೂ ಹಣ ನೀಡಿರುವ ಗೋವಿಂದ್ ಬಾಬು ಪೂಜಾರಿ ಅವರುಗಳ ವಿರುದ್ಧ ಜಾರಿ ನಿರ್ದೇಶನಾಲಯ(ಈಡಿ)ಕ್ಕೆ ʼಕೆಆರ್‌ಎಸ್ʼ ಪಕ್ಷ ದೂರು ನೀಡಿದೆ.

ಬುಧವಾರ ದೂರು ನೀಡಿರುವ ಪಕ್ಷವು, ಅಕ್ರಮ ಹಣ ವರ್ಗಾವಣೆ ಬಗ್ಗೆ ಮತ್ತು ಅಕ್ರಮ ಆಸ್ತಿ ಮಾಡಿಕೊಂಡಿರುವ ಬಗ್ಗೆ ತನಿಖೆ ಮಾಡಬೇಕು ಎಂದು ಜಾರಿ ನಿರ್ದೇಶನಾಲಯಕ್ಕೆ ಆಗ್ರಹಿಸಿದೆ.

ಬಿಜೆಪಿ ಸೇರಿದಂತೆ, ಬಹುತೇಕ ಪ್ರಮುಖ ಪಕ್ಷಗಳು ಆಂತರಿಕ ಪ್ರಜಾಪ್ರಭುತ್ವ ಪಾಲಿಸದೆ ಹಾಗೂ ಸ್ಪರ್ಧಾಕಾಂಕ್ಷಿಗಳ ಆಯ್ಕೆ ಪ್ರಕ್ರಿಯೆ ಪಾರದರ್ಶಕ ರೀತಿಯಲ್ಲಿ ನಡೆಸದೆ ಇರುವುದೇ ಇಂದು ಈ ಪಕ್ಷಗಳಲ್ಲಿ ಇಂತಹ ಸೂಟ್‌ ಕೇಸ್ ವ್ಯವಹಾರಗಳು ನಿರಂತರವಾಗಿ ನಡೆಯಲು ಸಾಧ್ಯವಾಗಿದೆ. ಇದು ಕೇವಲ ಚೈತ್ರಾ ಕುಂದಾಪುರ ಮಾತ್ರವಲ್ಲದೆ, ಬಿಜೆಪಿ ಸೇರಿದಂತೆ ಇತರ ಪಕ್ಷಗಳಲ್ಲೂ ಇದೇ ರೀತಿಯ ಅವ್ಯವಹಾರಗಳು ನಡೆಯುತ್ತಿವೆ. ಈ ಬಗ್ಗೆ ಪ್ರಮುಖ ಪಕ್ಷಗಳು ಗಂಭೀರವಾಗಿ ಚಿಂತಿಸಬೇಕು ಎಂದು ದೂರಿನಲ್ಲಿ ತಿಳಿಸಿದೆ.

ಜೆಸಿಬಿ ಪಕ್ಷಗಳ ಭ್ರಷ್ಟಾಚಾರದ ಕಪ್ಪು ಹಣದ ರಾಜಕೀಯದ ಒಂದು ಸಣ್ಣ ಭಾಗ ಚೈತ್ರಾ ಕುಂದಾಪುರ ಅನ್ನುವ ಭ್ರಷ್ಟಾಚಾರಿಯ ಮೂಲಕ ತಂತಾನೇ ಬಯಲಾದರೂ, ಅದನ್ನು ಸೂಕ್ತ ತನಿಖಾ ಸಂಸ್ಥೆ ತನಿಖೆ ಮಾಡದಿದ್ದಲ್ಲಿ ಅದರಲ್ಲಿ ಭಾಗಿಯಾಗಿರುವ ಇತರ ದೊಡ್ಡ ಕುಳಗಳು ತಪ್ಪಿಸಿಕೊಳ್ಳುತ್ತವೆ ಎಂದು ಕೆಆರ್‌ಎಸ್ ಪಕ್ಷ ದೂರಿನಲ್ಲಿ ವಿವರಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News