ಚಾಮರಾಜನಗರ: ಹೆಚ್ಚಿದ ಕಳ್ಳರ ಹಾವಳಿ; ರಕ್ತ ಚಂದನ ಮರಗಳ ಅಕ್ರಮ ಸಾಗಾಟಕ್ಕೆ ಯತ್ನ

Update: 2023-11-08 10:09 GMT

ಚಾಮರಾಜನಗರ:  ಮೂರು ರಕ್ತ ಚಂದನ ಮರಗಳನ್ನು ಕಡಿದು ಹಾಕಿರುವ ಘಟನೆ ಗುಂಡ್ಲುಪೇಟೆ ಪಟ್ಟಣದ ಮೈಸೂರು ಊಟಿ ರಸ್ತೆಯ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಪಂಚಾಯತ್ ರಾಜ್ ಇಂಜಿನಿಯರಿಂಗ್ ಕಚೇರಿ ಆವರಣದಲ್ಲಿ ನಡೆದಿದೆ.

ಈ ಮುಂಚೆಯು ಸಹ ಮರಕಡಿಯಲು ವ್ಯರ್ಥ ಪ್ರಯತ್ನ ಮಾಡಿ ಅರ್ಧಕ್ಕೆ ಬಿಟ್ಟು ಹೋಗಿದ್ದ ಆರೋಪಿಗಳು ಮತ್ತೆ ಕ್ವಾಟ್ರಸ್ ಒಳಗೆ ಪ್ರವೇಶಿಸಿ ಮನೆಗಳ ಮುಂಭಾಗ ಇದ್ದ ಮರಗಳನ್ನ ಕತ್ತರಿಸಿದ್ದಾರೆ.

ಇತ್ತೀಚಿಗೆ ಗುಂಡ್ಲುಪೇಟೆ ಪಟ್ಟಣದಲ್ಲಿ ಕಳ್ಳತನ ಪ್ರಕರಣಗಳು ಜಾಸ್ತಿಯಾಗಿದ್ದವು. ಆದರೆ ಗಂಧದ ಮರ ಕಳ್ಳರು ಈಗ ಸಕ್ರಿಯರಾಗಿರುವುದರಿಂದ ಪಟ್ಟಣದ ಜನತೆ ತಮ್ಮ ಮನೆ ಮುಂಭಾಗ ತಮ್ಮ ದ್ವಿಚಕ್ರ ವಾಹನಗಳನ್ನು ನಿಲ್ಲಿಸಲು ಸಹ ಆತಂಕಪಡುವಂತಾಗಿದೆ. ಪಟ್ಟಣದಲ್ಲಿ ಕಳ್ಳರ ಹಾವಳಿ ಹೆಚ್ಚಾಗಿರುವ ಹಿನ್ನೆಲೆ ರಾತ್ರಿ ಗಸ್ತು ಹೆಚ್ಚಿಸುವಂತೆ ಪೊಲೀಸ್ ಇಲಾಖೆಗೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News