ಸಿಎಂ ಸಿದ್ದರಾಮಯ್ಯ ಜೂ.4ರ ಬಳಿಕ ಕಡ್ಡಾಯ ಸ್ವಯಂ ನಿವೃತ್ತಿ ತೆಗೆದುಕೊಳ್ಳುವುದು ಅನಿವಾರ್ಯ : ಆರ್‌. ಆಶೋಕ್

Update: 2024-05-06 06:37 GMT

ಬೆಂಗಳೂರು : "ಸಿಎಂ ಸಿದ್ದರಾಮಯ್ಯನವರೇ, ಜೂನ್ 4 ರ ನಂತರ ತಾವು ಕಡ್ಡಾಯ ಸ್ವಯಂ ನಿವೃತ್ತಿ ತೆಗೆದುಕೊಳ್ಳಬೇಕಾಗಿರುವುದು ಅನಿವಾರ್ಯ ಅನ್ನುವ ವಿಷಯ ಗುಟ್ಟಾಗಿ ಏನೂ ಉಳಿದಿಲ್ಲ" ಎಂದು ವಿಪಕ್ಷ ನಾಯಕ ಅಶೋಕ್‌ ಲೇವಡಿ ಮಾಡಿದ್ದಾರೆ.

ಈ ಕುರಿತು ಎಕ್ಸ್‌ ನಲ್ಲಿ ಬರೆದುಕೊಂಡಿರುವ ಅವರು, "ರಾಜ್ಯದ ಖಜಾನೆ ಖಾಲಿ ಮಾಡಿ ಜನರನ್ನು ಮರಳು ಮಾಡುವ ಗ್ಯಾರೆಂಟಿಗಳನ್ನು, ಬಿಟ್ಟಿ ಭಾಗ್ಯಗಳನ್ನು ನೀಡುವುದೇ ದೊಡ್ಡ ಸಾಧನೆ ಎಂಬ ಭ್ರಮೆಯಲ್ಲಿರುವ ತಮಗೆ ಒಂದು ಸರ್ಕಾರದ ಸಾಧನೆ ತುಲನೆ ಮಾಡುವ ಮಾನದಂಡಗಳೇನು, ಅಭಿವೃದ್ಧಿ ಎಂದರೇನು, ದೂರದೃಷ್ಟಿ ಎಂದರೇನು, ಇವ್ಯಾವುದರ ಪರಿಜ್ಞಾನವೂ ಇಲ್ಲ, ಅದರಲ್ಲಿ ತಮಗೆ ಆಸಕ್ತಿಯೂ ಇಲ್ಲ" ಎಂದು ಹೇಳಿದ್ದಾರೆ.

ʼಮೋದಿ ಅವರು ಕಳೆದ ಹತ್ತು ವರ್ಷಗಳಲ್ಲಿ ಮಾಡಿರುವ ನೂರಾರು ಸಾಧನೆಗಳ ಬಗ್ಗೆ ಇಡೀ ದೇಶಕ್ಕೆ ಗೊತ್ತಿದೆ, ಇಡೀ ವಿಶ್ವವೇ ಅವರನ್ನು ಮೆಚ್ಚಿಕೊಂಡಿದೆ.ಆದರೆ 15 ಬಜೆಟ್ ಮಂಡಿಸಿರುವ ತಾವು ತಮ್ಮ ಸಾಧನೆ ಏನು? ಕನ್ನಡಿಗರಿಗೆ, ಕರ್ನಾಟಕಕ್ಕೆ ತಮ್ಮ ಕೊಡುಗೆ ಏನು? ಎಂಬುದನ್ನು ಮೊದಲು ಹೇಳಬೇಕುʼ ಎಂದು ಒತ್ತಾಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News