ಜೋಡಿ ಕೊಲೆ ಪ್ರಕರಣ: ಹೆಚ್ಚಾಗಿ ಸ್ಮಶಾನದಲ್ಲೇ ವಾಸ ಮಾಡುತ್ತಿದ್ದ ಆರೋಪಿ ಫೆಲಿಕ್ಸ್ ಅಲಿಯಾಸ್ ಶಬರೀಶ್‍ ಬಗ್ಗೆ ಪೊಲೀಸರು ಹೇಳುವುದೇನು?

Update: 2023-07-13 14:34 GMT

ಆರೋಪಿ ಫೆಲಿಕ್ಸ್

ಬೆಂಗಳೂರು, ಜು. 13: ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿ ತನಿಖೆ ಚುರುಕುಗೊಳಿಸಿದ್ದ ಅಮೃತಹಳ್ಳಿ ಪೊಲೀಸರು ಇದೀಗ ಕೊಲೆಗೀಡಾದ ಎಂ.ಡಿ ಹಾಗೂ ಸಿಇಓ ಈ ಹಿಂದೆ ಕೆಲಸ ಮಾಡುತ್ತಿದ್ದ ಕಂಪೆನಿ ಮಾಲಕನನ್ನು ಬಂಧಿಸಿದ್ದು, ಈ ಮೂಲಕ ಬಂಧಿತರ ಸಂಖ್ಯೆ 4ಕ್ಕೆ ಏರಿಕೆಯಾಗಿರುವುದಾಗಿ ವರದಿಯಾಗಿದೆ.

ಅರುಣ್ ಕುಮಾರ್ ಬಂಧಿತ ಆರೋಪಿಯಾಗಿದ್ದು, ಈತ ಜಿ-ನೆಟ್ ಕಂಪೆನಿ ಮಾಲಕನಾಗಿದ್ದರು. ಜಿ-ನೆಟ್ ಕಂಪೆನಿಯಲ್ಲಿ ಫಣೀಂದ್ರ ಎಚ್‍ಆರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ವಿನು ಕುಮಾರ್ ಸಿಇಓ ಆಗಿ ಕೆಲಸ ಮಾಡುತ್ತಿದ್ದರು. 8 ತಿಂಗಳ ಹಿಂದೆ ಫಣೀಂದ್ರ ಹಾಗೂ ವಿನು ಕುಮಾರ್ ಕೆಲಸ ತೊರೆದು ಅಮೃತಹಳ್ಳಿಯಲ್ಲಿ ತಮ್ಮದೇ ಆದ ಹೊಸ ಕಂಪೆನಿ ಸ್ಥಾಪಿಸಿದ್ದರು. ಹೊಸ ಕಂಪೆನಿ ಸ್ಥಾಪನೆಯಿಂದ ಅರುಣ್ ಕುಮಾರ್‍ಗೆ ವ್ಯವಹಾರದಲ್ಲಿ ನಷ್ಟವಾಗಿತ್ತು. ಇದೇ ಕಾರಣಕ್ಕೆ ಅರುಣ್ ಕುಮಾರ್ ಫೆಲಿಕ್ಸ್ ಅಲಿಯಾಸ್ ಶಬರೀಶ್‍ಗೆ ಸುಪಾರಿ ಕೊಟ್ಟು ಹತ್ಯೆ ಮಾಡಿಸಿದ್ದಾರೆ ಎಂಬ ಅನುಮಾನದ ಮೇರೆಗೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ ಕೃತ್ಯದಲ್ಲಿ ಶಾಮೀಲಾಗಿರುವುದರಿಂದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

''ಸ್ಮಶಾನದಲ್ಲಿ ವಾಸ ಮಾಡುತ್ತಿದ್ದ ಆರೋಪಿ ಫೆಲಿಕ್ಸ್ ''

ಜೋಡಿ ಕೊಲೆ ಪ್ರಕರಣದಲ್ಲಿ ಆರೋಪಿ ಫೆಲಿಕ್ಸ್  ಶಿವಮೊಗ್ಗ ನಿವಾಸಿಯಾಗಿದ್ದ. ಮೂಲ ಹೆಸರಾದ ಶಬರೀಶ್ ಎನ್ನುವುದನ್ನು ತೊರೆದು ಬೆಂಗಳೂರಿಗೆ ಬಂದು ಫೆಲಿಕ್ಸ್ ಎಂದು ಹೆಸರು ಬದಲಾಯಿಸಿಕೊಂಡಿದ್ದ. ರ್ಯಾಪ್ ಹಾಗೂ ರೀಲ್ಸ್ ಮಾಡಿ ಹುಚ್ಚುತನದ ವರ್ತನೆಯಿಂದಲೇ ಫೇಮಸ್ ಆಗಿದ್ದ. ಜಿ-ನೆಟ್‍ನಲ್ಲಿ ಕೆಲಸ ಬಿಟ್ಟ ಬಳಿಕ ಮುಂಬೈ ಮತ್ತು ಕಾಶಿಯಲ್ಲಿ ಕೆಲಸ ಮಾಡುತ್ತಿದ್ದ. ವಿಚಿತ್ರವಾಗಿ ವೇಷ ತೊಟ್ಟು ರೀಲ್ಸ್ ಮಾಡುತ್ತಿದ್ದ. ಹೆಚ್ಚಾಗಿ ಫೆಲಿಕ್ಸ್ ಸ್ಮಶಾನದಲ್ಲಿ ವಾಸ ಮಾಡುತ್ತಿದ್ದ. ಗಾಂಜಾ ಸೇವನೆಯ ದುರಭ್ಯಾಸ ಬೆಳೆಸಿಕೊಂಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಏರೋನಿಕ್ಸ್ ಕಂಪೆನಿ ಎಂಡಿ ಫಣೀಂದ್ರ ಹಾಗೂ ಸಿಇಓ ವಿನುಕುಮಾರ್ ಅವರನ್ನು ಅಮೃತಹಳ್ಳಿಯ ಅವರ ಕಚೇರಿಯಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿತ್ತು. ಇಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿದ ಹಂತಕರು ಸ್ಥಳದಿಂದ ಬರಿಗಾಲಲ್ಲೇ ಪರಾರಿಯಾಗಿದ್ದರು. ಒಂದು ತಿಂಗಳ ಹಿಂದೆಯೇ ಸ್ಥಳಕ್ಕೆ ಬಂದು ದಾರಿಗಳ ಬಗ್ಗೆ ಸಂಚು ರೂಪಿಸಿಕೊಂಡಿದ್ದರು. ಹಿಂಬದಿ ಡೋರ್ ತೆಗೆದು ಕಾಂಪೌಂಡ್ ಹಾರಿ ಅಲ್ಲಿಂದ ಮುಖ್ಯರಸ್ತೆಗೆ ಬಂದು ಓಲಾ ಬುಕ್ ಮಾಡಿದ್ದ ಅವರು ಏರಿಯಾ ಬಿಟ್ಟಿದ್ದರು. ಕೊಲೆ ನಂತರ ಫೆಲಿಕ್ಸ್ ಅಂಡ್ ಟೀಂ ಪರಾರಿ ಆಗುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿನಯ್ ಕುಮಾರ್ ರೆಡ್ಡಿ ತನ್ನ ಪ್ಯಾಂಟ್‍ನಲ್ಲಿ ಡ್ರಾಗರ್ ಇಟ್ಟುಕೊಂಡು ತಪ್ಪಿಸಿಕೊಳ್ಳುತ್ತಿದ್ದಾಗ ಸಂತೋμï ಸಹಾಯ ಮಾಡಿದ್ದಾನೆ. ಏನೂ ಗೊತ್ತಿಲ್ಲದಂತೆ ಫೆಲಿಕ್ಸ್ ಹೋಗಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News