ಚಿತ್ರರಂಗದಿಂದ ನಟ ಉಪೇಂದ್ರರನ್ನು 5 ವರ್ಷ ಬ್ಯಾನ್ ಮಾಡಲು ಒತ್ತಾಯ

Update: 2023-08-14 10:58 GMT

ಬೆಂಗಳೂರು: ದಲಿತ ಸಮುದಾಯವನ್ನು ನಿಂದಿಸುವ ಮತ್ತು ಸಮುದಾಯಗಳನ್ನು ಜಾತಿಗಳನ್ನು ಎತ್ತಿಕಟ್ಟಿ ಅಶಾಂತಿ, ಗಲಭೆ ಹುಟ್ಟಿಸುವ ಉದ್ದೇಶದಿಂದ ದಲಿತ ನಿಂದನೆ ಮಾಡಿರುವ ನಟ ಉಪೇಂದ್ರ  ಅವರನ್ನು ಚಲನಚಿತ್ರ ವಾಣಿಜ್ಯ ಮಂಡಳಿ ಕನಿಷ್ಕ 5ವರ್ಷ ನಿಷೇದ ಹೆರಬೇಕು ಎಂದು ಸಾಮಾಜಿಕ ಕಾರ್ಯಕರ್ತ ನವೀನ್‌ ಗೌಡ ಎಂಬವರು ಒತ್ತಾಯಿಸಿದ್ದಾರೆ. 

ಈ ಸಂಬಂಧ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದಿರುವ ನವೀನ್‌ ಗೌಡ, ಕನ್ನಡದ ನಟ ಎಂದು ಹೇಳಿಕೊಳ್ಳುತ್ತಿರುವ ಉಪೇಂದ್ರ ಅಲಿಯಾಸ್ ಉಪೇಂದ್ರರಾವ್ ಅಲಿಯಾಸ್ ಉಪ್ಪಿ ಮೊನ್ನೆ (12.08.2023) ತನ್ನದೇ upendra face book account ನಲ್ಲಿ ತನ್ನದೇ ಮಾತುಗಳ ವಿಡಿಯೋವನ್ನು ಪ್ರಸಾರ ಮಾಡಿರುತ್ತಾರೆ. ಅವರು ತನ್ನ ವಿಡಿಯೋದಲ್ಲಿ ಕೆಟ್ಟ ಜನಗಳು ಎಂಬುದಕ್ಕೆ ಉದಾಹರಣೆಯಾಗಿ "ಊರು ಅಂದೇಲೆ ಹೊಲಗೇರಿ ಇರುತ್ತದೆ” ಎಂದು ಹೇಳಿದ್ದಾರೆ.

ʼʼಉಪೇಂದ್ರ ಅಲಿಯಾಸ್ ಉಪೇಂದ್ರ ರಾವ್ ಅಲಿಯಾಸ್ ಉಪ್ಪಿ ಎಂಬಾತ ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದು ಸಾಮಾನ್ಯವಾಗಿ ದಲಿತರು ವಾಸ ಮಾಡುವ ಪ್ರದೇಶವನ್ನು ಹೊಲಗೇರಿ ಎಂದು ಹೇಳಿದ್ದಾರೆ. ಅಂದರೆ ಈ ರೀತಿ ದಲಿತರು ವಾಸ ಮಾಡುವ ಪ್ರದೇಶಗಳು ಕೆಟ್ಟ, ಪುದೇಶಗಳಾಗಿದ್ದು, ಊರು ಅಂದರೆ ಕೆಟ್ಟ ಪ್ರದೇಶಗಳೂ, ಕೆಟ್ಟ ಜನರೂ ಇರುತ್ತಾರೆ ಎಂಬ ಅರ್ಥದಲ್ಲಿ ಹೇಳಿರುತ್ತಾರೆ. ಜನ ಕೆಟ್ಟದರ ವಿರುದ್ಧ ಇರಬೇಕು ಎಂದರೆ ಹೊಲಗೇರಿ ವಿರುದ್ಧ ಇರಬೇಕು ಎಂದು ಸಮುದಾಯಗಳನ್ನು ಹೊಲೆಯರ ವಿರುದ್ಧ ಎತ್ತಿಕಟ್ಟಿದ್ದಾರೆ. ಇದು ಸಾರ್ವಜನಿಕರಿಗೆ ಭಯ ಅಥವಾ ಎಚ್ಚರಿಕೆಯನ್ನು ಉಂಟುಮಾಡುವ ಉದ್ದೇಶದಿಂದ, ಅಥವಾ ಯಾವುದೇ ವ್ಯಕ್ತಿಯನ್ನು ಸಾರ್ವಜನಿಕ ನೆಮ್ಮದಿಯ ವಿರುದ್ಧ ಅಪರಾಧ ಮಾಡಲು ಪ್ರೇರೇಪಿಸಬಹುದಾಗಿದೆʼʼ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ. 

ಇದನ್ನು ವಾಣಿಜ್ಯ ಮಂಡಳಿ ಗಂಭೀರವಾಗಿ ಪರಿಗಣಿಸಿ ಇತಿಹಾಸವುಳ್ಳ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಗೌರವವನ್ನು ಎತ್ತಿ ಹಿಡಿದು ಶೋಷಿತರ ಜೊತೆಗೆ ವಾಣಿಜ್ಯ ಮಂಡಳಿ ನಿಲ್ಲುತ್ತದೆ ಎಂಬ ಸಂದೇಶ ಕೊಡಲು ನಟ ಎಂದು ಹೇಳಿಕೊಳ್ಳುವ ಈತನನ್ನು ಈ ಕೂಡಲೇ ಕನಿಷ್ಕ 5 ವರ್ಷ ನಿಷೇದ ಹೆರಬೇಕೆಂದು ನವೀನ್‌ ಗೌಡ ಪತ್ರದ ಮೂಲಕ ಒತ್ತಾಯಿಸಿದ್ದಾರೆ. 

 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News