ಸಹಾಯಕ ಗ್ರಂಥಪಾಲಕರ ವೇತನದಲ್ಲಿ ತಾರತಮ್ಯ: ಸರಕಾರಕ್ಕೆ 5 ಲಕ್ಷ ರೂ.ದಂಡ ವಿಧಿಸಿದ ಹೈಕೋರ್ಟ್

Update: 2024-01-16 13:29 GMT

ಬೆಂಗಳೂರು: ಸಹಾಯಕ ಗ್ರಂಥಪಾಲಕರ ವೇತನದಲ್ಲಿ ತಾರತಮ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶ ಪಾಲಿಸದ ಸರಕಾರಕ್ಕೆ ಹೈಕೋರ್ಟ್ 5 ಲಕ್ಷ ರೂ. ದಂಡ ವಿಧಿಸಿದೆ.

ತಪ್ಪೆಸಗಿದ ಅಧಿಕಾರಿಗಳಿಂದ ದಂಡ ವಸೂಲಿ ಮಾಡುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಸರಕಾರಿ ಗ್ರಂಥಪಾಲಕರ ವೇತನಕ್ಕಿಂತ ಕಡಿಮೆ ಪಾವತಿ ಮಾಡಿರುವ ಹಿನ್ನೆಲೆಯಲ್ಲಿ ತಾರತಮ್ಯ ಸರಿಪಡಿಸಲು ಹೈಕೋರ್ಟ್ ಆದೇಶಿಸಿದ್ದರೂ ಪಾಲಿಸಿರಲಿಲ್ಲ. ಈ ಸಂಬಂಧ ವಿ.ಎ.ನಾಗಮಣಿ ಎಂಬುವರು ನ್ಯಾಯಾಂಗ ನಿಂದನೆ ದಾಖಲಿಸಿದ್ದರು. ಇದೀಗ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ನೇತೃತ್ವದ ವಿಭಾಗೀಯ ನ್ಯಾಯಪೀಠವು 5 ಲಕ್ಷ ರೂ. ದಂಡ ವಿಧಿಸಿದೆ.

ಕೋರ್ಟ್ ನೀಡುವ ಆದೇಶಗಳನ್ನು ಪಾಲಿಸದೇ ತಮಾಷೆ ನೋಡುತ್ತಿದ್ದೀರಾ? ಕೋರ್ಟ್‍ಗೆ ಬರುವುದು ಜನರಿಗೆ ಸಂತಸದ ವಿಚಾರವಲ್ಲ. ಪಾರ್ಕ್‍ಗಳಿಗೆ ಹೋಗಿ ಜನರನ್ನು ಕೇಳಿನೋಡಿ ಕೋರ್ಟ್ ಹಾಗೂ ಸರಕಾರದ ಬಗ್ಗೆ ಜನರು ಏನು ಹೇಳುತ್ತಾರೆ ಕೇಳಿ. ವಿಳಂಬ ವ್ಯವಸ್ಥೆಯ ಬಗ್ಗೆ ಜನರಿಗೆ ಅಸಮಾಧಾನವಿದೆ ಎಂದು ಸರಕಾರದ ನಡೆಗೆ ಹೈಕೋರ್ಟ್ ವಿಭಾಗೀಯ ನ್ಯಾಯಪೀಠವು ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೇ, 3 ವಾರಗಳಲ್ಲಿ ಹೈಕೋರ್ಟ್ ಆದೇಶವನ್ನು ಪಾಲಿಸುವಂತೆ ತಾಕೀತು ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News