ದಲಿತರು, ಹಿಂದುಳಿದ ವರ್ಗಗಳಿಗೆ ಶಿಕ್ಷಣವೇ ಆಸ್ತಿ: ಸಚಿವ ಡಾ.ಎಚ್.ಸಿ.ಮಹದೇವಪ್ಪ

Update: 2023-11-25 17:14 GMT

ಮೈಸೂರು: ದಲಿತರು,ಹಿಂದುಳಿದ ವರ್ಗಗಳಿಗೆ ಶಿಕ್ಷಣವೇ ಆಸ್ತಿ. ಶಿಕ್ಷಣದಿಂದ ಬದುಕನ್ನು ರೂಪಿಸಿಕೊಳ್ಳುವ ಜತೆಗೆ ಸ್ವಾಭಿಮಾನದ ಬದುಕು ಸಾಧಿಸಲು ಸಾಧ್ಯವಿದೆ. ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ಸರ್ಕಾರಿ ಅಥವಾ ಅರೆಸರ್ಕಾರಿ ಹುದ್ದೆಗಳನ್ನು ಅಲಂಕರಿಸಬೇಕು ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.

ನಗರದ ವಾನಸಗಂಗೋತ್ರಿಯ ಬಿ.ಎಂ.ಶ್ರೀ ಸಭಾಂಗಣದಲ್ಲಿ ಶನಿವಾರ “ಅಕ್ಕ ಐಎಎಸ್ ಅಕಾಡೆಮಿ” ವತಿಯಿಂದ ಹಮ್ಮಿಕೊಂಡಿರುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಡಾ.ಬಿ.ಆರ್.ಅಂಬೇಡ್ಕರ್ ಹೇಳಿರುವ ಮಾತಿನಂತೆ ಶಿಕ್ಷಣ ಮಾತ್ರವೇ ನಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸುತ್ತದೆ. ಈ ನಿಟ್ಟಿನಲ್ಲಿ ಲಭ್ಯವಿರುವ ಹಲವಾರು ಸೌಲಭ್ಯಗಳನ್ನು ಬಳಸಿಕೊಳ್ಳಬೇಕು ಎಂದರು.ಪರಿಶಿಷ್ಟರು, ಹಿಂದುಳಿದ ವರ್ಗದವರಿಗೆ ಜಮೀನುಗಳಿಲ್ಲ, ಆಸ್ತಿ ಇಲ್ಲ, ಕೃಷಿ ಜಮೀನುಗಳಿಲ್ಲ, ಉದ್ಯಮ ಇರುವುದಿಲ್ಲ. ಶಿಕ್ಷಣವೊಂದೇ ನಮ್ಮ ಆಸ್ತಿ. ಹಾಗಾಗಿ ನಮ್ಮ ಬೌದ್ಧಿಕ ಸಾಮಥ್ರ್ಯವನ್ನು ಗುರುತಿಸಿಕೊಂಡು ತರಬೇತಿ ಪಡೆಯುವ ಮೂಲಕ ನೀತಿ ರೂಪಿಸುವ ಅಧಿಕಾರದ ಸ್ಥಾನಕ್ಕೆ ಬಂದು ಕುಳಿತುಕೊಳ್ಳಬೇಕು ಎಂದು ಹೇಳಿದರು.

ಇಂದು ಐಎಎಸ್,ಐಪಿಎಸ್,ಐಎಫ್‍ಎಸ್ ನಂತಹ ಹುದ್ದೆಗಳನ್ನು ಅಲಂಕರಿಸಿದವರು ಇದ್ದರೂ ಮತ್ತಷ್ಟು ಹೆಚ್ಚಾಗಬೇಕು ಎಂದು ಸಲಹೆ ನೀಡಿದ ಅವರು, ಕಾರ್ಯಾಂಗ,ಶಾಸಕಾಂಗದ ಜತೆಗೆ ನ್ಯಾಯಾಂಗದಲ್ಲೂ ದಲಿತರು ಉನ್ನತ ಹುದ್ದೆಗಳನ್ನು ಪಡೆಯಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಾವು ಸಮರ್ಥವಾಗಿ ಎದುರಿಸಿದರೆ ಸುಲಭವಾಗಿ ಕೆಲಸ ಪಡೆಯಬಹುದು ಎಂದರು.

ಜಾಗತೀಕರಣ, ಉದಾರೀಕರಣ ಹಾಗೂ ಖಾಸಗೀಕರಣದಿಂದಾಗಿ ನಮ್ಮನ್ನೆಲ್ಲ ಸ್ಪರ್ಧೆಗೆ ಎಸೆಯಲಾಗಿದೆ. ಇದರಲ್ಲಿ ಯಶಸ್ವಿಯಾಗಲು ಸಾಕಷ್ಟು ತಯಾರಿ ವಾಡಿಕೊಳ್ಳಬೇಕಾಗುತ್ತದೆ; ಜ್ಞಾನ ಸಂಪಾದಿಸಬೇಕಾಗುತ್ತದೆ. ಸಮರ್ಪಕ ವಾರ್ಗದರ್ಶನ ಹಾಗೂ ತರಬೇತಿ ಸಿಕ್ಕರೆ ಎಲ್ಲರೂ ದೊಡ್ಡ ಮಟ್ಟಕ್ಕೆ ಹೋಗಬಹುದಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News