‘ಪ್ರತಿಭಟನೆ’ ಫ್ರೀಡಂ ಪಾರ್ಕ್‍ಗೆ ಸೀಮಿತಗೊಳಿಸಿದ ಆದೇಶ ಹಿಂಪಡೆಯಲು ಒತ್ತಾಯ

Update: 2023-07-25 10:16 IST
‘ಪ್ರತಿಭಟನೆ’ ಫ್ರೀಡಂ ಪಾರ್ಕ್‍ಗೆ ಸೀಮಿತಗೊಳಿಸಿದ ಆದೇಶ ಹಿಂಪಡೆಯಲು ಒತ್ತಾಯ
  • whatsapp icon

ಬೆಂಗಳೂರು, ಜು.24: ನಗರದ ಫ್ರೀಡಂ ಪಾರ್ಕ್‍ನಲ್ಲಿಯೇ ಪ್ರತಿಭಟನೆಯನ್ನು ನಡೆಸಬೇಕು ಎಂದು ಸರಕಾರವು ಆದೇಶವನ್ನು ಹೊರಡಿಸಿದ್ದು, ಇದನ್ನು ಕೂಡಲೇ ಹಿಂಪಡೆಯಬೇಕು ಎಂದು ‘ಹೋರಾಟದ ಹಕ್ಕಿಗಾಗಿ ಜನಾಂದೋಲನ’ ಸಂಘಟನೆಯು ಒತ್ತಾಯಿಸಿದೆ. 

 ಈ ಕುರಿತು ಸಂಘಟನೆಯು ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದು, ‘ದಮನಿತರ ಧ್ವನಿಯನ್ನು ಅಡಗಿಸುವ ನಿರ್ದಿಷ್ಟ ಉದ್ದೇಶದಿಂದ ಪ್ರತಿಭಟನೆಯನ್ನು ಹತ್ತಿಕ್ಕುವ ಈ ಆದೇಶವನ್ನು ಬಿಜೆಪಿ ಸರಕಾರವು ಹೊಡಿಸಿತ್ತು. ಇದರಿಂದ ಪೊಲೀಸರು ಫ್ರೀಡಂ ಪಾರ್ಕ್ ಹೊರತುಪಡಿಸಿ, ಬೇರೆ ಸ್ಥಳದಲ್ಲಿ ಪ್ರತಿಭಟನೆಗಳನ್ನು ನಿರ್ಬಂಧಿಸಿದ್ದಾರೆ. ಹಾಗೆಯೇ ಮೆರವಣಿಗೆಗಳಿಗೆ ಅನುಮತಿ ನೀಡುವುದನ್ನು ನಿರಾಕರಿಸುತ್ತಿದ್ದಾರೆ’ ಎಂದು ದೂರಿದ್ದಾರೆ.

ಹಾಗಾಗಿ ಈ ಆದೇಶವನ್ನು ಹಿಂಪಡೆಯಬೇಕು. ಕಾರ್ಮಿಕರು, ರೈತರು ಸೇರಿದಂತೆ ಪ್ರತಿಭಟನಿಸುವ ಈ ಮೂಲಭೂತ ಹಕ್ಕನ್ನು ಚಲಾಯಿಸಿದ ವ್ಯಕ್ತಿಗಳ ವಿರುದ್ಧ ದಾಖಲಿಸಿದ ಎಲ್ಲ ಪ್ರಕರಣಗಳನ್ನು ತಕ್ಷಣವೇ ಹಿಂಪಡೆಯಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆಯನ್ನು ನಡೆಸಬೇಕಾಗುತ್ತದೆ ಎಂಧು ಎಂದು ಸಂಘಟನೆಯು ಎಚ್ಚರಿಕೆ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News