ಕೊಡಗು | ಬಾಣಂತಿ ಆರೋಗ್ಯ ವಿಚಾರಿಸಲು ಹೋದ ಆರೋಗ್ಯ ಅಧಿಕಾರಿ ಮೇಲೆ ಸಾಕು ನಾಯಿ ದಾಳಿ: ಗಂಭೀರ ಗಾಯ

Update: 2023-08-17 09:21 GMT

ಸಾಂದರ್ಭಿಕ ಚಿತ್ರ

ನಾಪೋಕ್ಲು (ಕೊಡಗು): ಮನೆ ಭೇಟಿ ಮಾಡಿ ಹಿಂತಿರುಗುವ ಸಂದರ್ಭ ನಾಯಿಯೊಂದು ಕಚ್ಚಿ ಗಂಭೀರವಾಗಿ ಗಾಯಗಳಾಗಿ ಆರೋಗ್ಯ ಅಧಿಕಾರಿ ಒಬ್ಬರು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಬುಧವಾರ ವರದಿಯಾಗಿದೆ.

ಇಲ್ಲಿಗೆ ಸಮೀಪದ ಪಾರಾಣೆ-ಕೊಣಂಜಗೇರಿ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ನರ್ಸ್ ಬೈಲೆಮನೆ ಭವ್ಯ ಎಂಬಾಕೆ ಗ್ರಾಮದಲ್ಲಿ ಇತ್ತೀಚೆಗೆ ಹೆರಿಗೆಯಾದ ತಾಯಿ ಮಗುವನ್ನು ವಿಚಾರಿಸಿ ಔಷಧಿಗಳನ್ನು ನೀಡಿ ಕರ್ತವ್ಯದಲ್ಲಿ ಹಿಂತಿರುಗುವ ಸಂದರ್ಭ ಹೆರಿಗೆಯಾದ ಮಹಿಳೆಯ ಸಾಕು ನಾಯಿ ದಾಳಿ ನಡೆಸಿದ್ದು ಆರೋಗ್ಯ ಅಧಿಕಾರಿ ಭವ್ಯ ಗಂಭೀರವಾಗಿ ಗಾಯಗೊಂಡಿದ್ದಾರೆನ್ನಲಾಗಿದೆ.

ವಿಷಯ ತಿಳಿದ ಕೊಣಂಜಗೇರಿ ಗ್ರಾಮ ಪಂಚಾಯತ್ ಅಧ್ಯಕ್ಷ ಪಾಡೆಯಂಡ ಕಟ್ಟಿ ಗಾಯಗೊಂಡ ನರ್ಸ್ ಅವರನ್ನು ನಾಪೋಕ್ಲು ಪಟ್ಟಣಕ್ಕೆ ಕರೆತಂದು ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಮಡಿಕೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಾಕುನಾಯಿ ದಾಳಿ ಮಾಡಿದರೆ ಮಾಲಕರಿಗೆ 6 ತಿಂಗಳು ಜೈಲು, ದಂಡ!

ʼʼಮನೆಯ ಸಾಕುನಾಯಿಗಳು ಯಾವುದೇ ವ್ಯಕ್ತಿಗಳ ಮೇಲೆ ದಾಳಿ ಮಾಡಿರುವ ಘಟನೆ ಕಂಡುಬಂದಲ್ಲಿ ಆ ನಾಯಿಯ ಮಾಲಕರ ಮೇಲೆ Section: 289 IPC ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು ಹಾಗೂ ಆರು ತಿಂಗಳ ಜೈಲುವಾಸ ಶಿಕ್ಷೆ ಮತ್ತು ದಂಡ ವಿಧಿಸಲಾಗುವುದುʼʼ ಎಂದು ಕೊಡಗು ಪೊಲೀಸ್ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News