ವಸತಿ ಯೋಜನೆಗಳ ಕಾಮಗಾರಿ ನಿಲ್ಲಿಸುವಂತಿಲ್ಲ: ಸಚಿವ ಝಮೀರ್ ಅಹ್ಮದ್ ಖಾನ್

Update: 2023-12-08 15:13 GMT

ಬೆಳಗಾವಿ(ಸುವರ್ಣ ವಿಧಾನಸೌಧ), ಡಿ.8 : ಬಿಲ್ ಪಾವತಿ ಬಾಕಿ ನೆಪವೊಡ್ಡಿ ಗುತ್ತಿಗೆ ಸಂಸ್ಥೆಗಳು ವಸತಿ ಯೋಜನೆ ಗಳ ಕಾಮಗಾರಿ ನಿಲ್ಲಿಸುವಂತಿಲ್ಲ ಎಂದು ವಸತಿ ಸಚಿವ ಝಮೀರ್ ಅಹ್ಮದ್ ಸೂಚನೆ ನೀಡಿದ್ದಾರೆ.

ಶುಕ್ರವಾರ ಸುವರ್ಣ ವಿಧಾನಸೌಧದಲ್ಲಿ ಶಿವಮೊಗ್ಗ ಶಾಸಕ ಚೆನ್ನಬಸಪ್ಪ ಹಾಗೂ ಅಧಿಕಾರಿಗಳ ಜತೆ ಸಭೆ ನಡೆಸಿದ ಅವರು, ʼವಸತಿ ಯೋಜನೆ ಗಳು ಕಾಲಮಿತಿಯಲ್ಲಿ ಪೂರ್ಣಗೊಂಡು ಫಲಾನುಭವಿಗಳಿಗೆ ಹಂಚಿಕೆ ಆಗಬೇಕು. ಬಿಲ್ ಪಾವತಿ ಅಥವಾ ಇತರೆ ಕಾರಣಗಳಿಗೆ ಗುತ್ತಿಗೆದಾರರು ಕಾಮಗಾರಿ ನಿಲ್ಲಿಸಿದರೆ ಕಪ್ಪು ಪಟ್ಟಿಗೆ ಸೇರಿಸಲಾಗುವುದುʼ ಎಂದು ಎಚ್ಚರಿಕೆ ನೀಡಿದರು.

ಶಿವಮೊಗ್ಗ ವಿಧಾನ ಸಭೆ ಕ್ಷೇತ್ರದ ಹದಿನಾರು ಕೊಳೆಗೇರಿ ಗಳಲ್ಲಿ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ನಿರ್ಮಿಸಿಕೊಡಲಾಗುತ್ತಿರುವ 1590 ಒಂಟಿ ಮನೆ ಯೋಜನೆ ಮೂರು ತಿಂಗಳಲ್ಲಿ ಪೂರ್ಣ ಗೊಳಿಸಲು ಅವರು ಸೂಚನೆ ನೀಡಿದರು.

ಹದಿನಾರು ಕೊಳೆಗೇರಿಗಳಲ್ಲಿ 1590 ಮನೆ ನಿರ್ಮಾಣ ಕ್ಕೆ 88.59 ಕೋಟಿ ರೂ. ಯೋಜನೆ ರೂಪಿಸಿದ್ದು, ಎನ್.ಪಿ.ಎಸ್ ಸಂಸ್ಥೆ ಗೆ ಗುತ್ತಿಗೆ ನೀಡಿದ್ದು 884 ಮನೆಗಳಿಗೆ ಸಂಬಂಧಿಸಿದಂತೆ 36 ಕೋಟಿ ರೂ. ಪಾವತಿ ಆಗಿದ್ದು,1.5 ಕೋಟಿ ರೂ. ಬಾಕಿ ಇದ್ದು ಕಾಮಗಾರಿ ಸ್ಥಗಿತ ಮಾಡಿರುವ ಬಗ್ಗೆ ಸಿಡಿಮಿಡಿ ಗೊಂಡ ಅವರು, ಮೊದಲು ಕಾಮಗಾರಿ ಪ್ರಾರಂಭಿಸಿ ಮೂರು ತಿಂಗಳಲ್ಲಿ ಪೂರ್ಣ ಗೊಳಿಸಿ ನಂತರ ಬಾಕಿ ಬಿಲ್ ಪಾವತಿಸಲಾಗುವುದು ಎಂದು ಗುತ್ತಿಗೆ ಸಂಸ್ಥೆಯವರಿಗೆ ನಿರ್ದೇಶನ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News