ನಾನು ಜನರ ಪ್ರೀತಿಯಿಂದ ಬೆಳೆದಿದ್ದೇನೆ; ಜನರಿಗಾಗಿ ಧ್ವನಿ ಎತ್ತಲೇ ಬೇಕಲ್ವಾ: ನಟ ಪ್ರಕಾಶ್ ರಾಜ್

Update: 2023-09-11 04:34 GMT

ಕಲಬುರಗಿ: ʼನಾನು ಜನಪರ, ವ್ಯಕ್ತಿಯಾಗಿದ್ದು ರಾಜಕೀಯ ವ್ಯಕ್ತಿ ಅಲ್ಲ. ನಾನು ಪ್ರತಿಭೆಯಿಂದ ಬೆಳೆದಿಲ್ಲ, ಜನರ ಪ್ರೀತಿಯಿಂದ ಬೆಳೆದಿದ್ದೇನೆ. ಜನರಿಗಾಗಿ ನಾನು ಧ್ವನಿ ಎತ್ತಲೇಬೇಕಲ್ವಾʼ ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ಹೇಳಿದ್ದಾರೆ. 

ಕಲಬುರಗಿ ನಗರದ ಎಸ್.ಎಂ ಪಂಡಿತ ರಂಗಮಂದಿರದಲ್ಲಿ ಸಂವಾದ ಕಾರ್ಯಕ್ರಮ ಮತ್ತು ʼಗಾಯಗಳುʼ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಪ್ರತಿಕ್ರಿಯೆ ನೀಡಿದರು.

ʼನಾನು ಯಾವುದೇ ಧರ್ಮದ ವಿರುದ್ಧ ಅಲ್ಲ. ನಾವು ಧರ್ಮದ ಬಗ್ಗೆ ಮಾತನಾಡುತ್ತಿಲ್ಲ, ನಾನು ಜನರನ್ನು ಪ್ರೀತಿಸುವ ಮನುಷ್ಯ. ಹಿಂದೂ ವಿರೋಧಿ ಅನ್ನೋ ವಿಚಾರ ಸರಿಯಲ್ಲ, ಸನಾತನ ಧರ್ಮದ ಬಗ್ಗೆ ಉದಯನಿಧಿ ಸ್ಟಾಲಿನ್ ಹೇಳಿಕೆ ತಿರುಚಲಾಗಿದೆʼ ಎಂದರು.

ʼಸ್ಟಾಲಿನ್ ಮಾತನಾಡಿದ್ದರಲ್ಲಿ ತಪ್ಪೇನಿದೆ?, ಅಸ್ಪೃಶ್ಯತೆ ಹೋಗಬೇಕು ಎಂದ ಅವರು ಜಾತಿ ವಿವಾದ ಹುಟ್ಟು ಹಾಕ್ತಿರೋರಿಗೆ ಕೆಲಸ ಇಲ್ವಲ್ಲಾ ಅದಕ್ಕೆ ಈ ರೀತಿ ಮಾಡ್ತಿದ್ದಾರೆʼʼ ಎಂದು ಕೀಡಿಕಾರಿದರು.

ʼʼಅವರವರ ಧರ್ಮ, ಅವರವರ ನಂಬಿಕೆ ಅವರಿಗೆ ಬಿಟ್ಟಿದೆ, ಆದ್ರೆ ಎಲ್ಲರೂ ಚೆನ್ನಾಗಿರಬೇಕು, ಬಸವಣ್ಣ, ಅಂಬೇಡ್ಕರ್ ಅವರು ಹೇಳಿದ್ದು ಬರೀ ಭಾಷಣಕ್ಕಾಗಿ ಅಲ್ಲ, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಕುʼʼ ಎಂದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News