ಜೂಜು ಅಡ್ಡೆ ಮೇಲೆ ದಾಳಿ; ಬಿಜೆಪಿ ಕಾರ್ಪೊರೇಟರ್ ಸೇರಿ 7 ಜನರ ಬಂಧನ

Update: 2023-06-29 17:20 GMT

ಬಂಧಿತ ಕಾರ್ಪೊರೇಟರ್

ಕಲಬುರಗಿ: ನಗರದಲ್ಲಿ ಬುಧವಾರ ರಾತ್ರಿ ಜೂಜು ಅಡ್ಡೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಬಿಜೆಪಿ ಕಾರ್ಪೊರೇಟರ್ ಸೇರಿದಂತೆ ಏಳು ಮಂದಿಯನ್ನು ಬಂಧಿಸಿ, ನಗದು ಸೇರಿದಂತೆ ಮೊಬೈಲ್ ಗಳು ಜಪ್ತಿ ಮಾಡಿಕೊಂಡಿದ್ದಾರೆ.

ಆಳಂದ ಕಾಲೋನಿಯ ವಾರ್ಡ್ ನಂಬರ್ 8 ಬಿಜೆಪಿ ಕಾರ್ಪೊರೇಟೆರ್ ಆಗಿರುವ ಸಚೀನ್ ಕಡಗಂಚಿ, ವಿಶಾಲ್, ಆನಂದ್, ಮಹಾಂತೇಶ್, ಶಿವರಾಜ್, ಸಿದ್ದರಾಮ್, ಶರಣುಸೇರಿದಂತೆ ಏಳು ಜನರ ವಿರುದ್ಧ ದೂರು ದಾಖಲಿಸಿ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ಕಳೆದ ರಾತ್ರಿ ನಗರದ ಶೆಟ್ಟಿ ಕಾಂಪ್ಲೆಕ್ಸ್ ಬಳಿಯ ಶೆಡ್‌ವೊಂದರಲ್ಲಿ ಇಸ್ಪಿಟ್ ಆಡುತ್ತಿದ್ದರು. ಈ ವೇಳೆ ಪೊಲೀಸರು ದಾಳಿ ನಡೆಸಿದ್ದು, ಆರೋಪಿಗಳು ಶರಣಾಗಿದ್ದಾರೆ. ಬಂಧಿತರಿಂದ 1 ಲಕ್ಷ ರೂ ನಗದು ಹಣ, ಮೊಬೈಲ್ ಸೇರಿದಂತೆ ಅನೇಕ ವಸ್ತುಗಳ ಜಪ್ತಿ ಮಾಡಲಾಗಿದ್ದು, ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News