ಕರ್ನಾಟಕ ಬಜೆಟ್ 2023 LIVE |ಇಂದಿರಾ ಕ್ಯಾಂಟೀನ್ ಪುನರಾರಂಭಕ್ಕೆ ನಿರ್ಧಾರ
ವಿಧಾನಸಭೆಯಲ್ಲಿ ಮಧ್ಯಾಹ್ನ 12 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡನೆ ಆರಂಭಿಸಿದ್ದಾರೆ.
ಅವರು ಮುಖ್ಯಮಂತ್ರಿಯಾಗಿ 14ನೇ ಹಾಗೂ ಒಟ್ಟು 17ನೇ ಬಾರಿ ಬಜೆಟ್ ಮಂಡನೆ ಮಾಡುತ್ತಿದ್ದಾರೆ.
ಮೀನುಗಾರ ಮಹಿಳೆಯರ ಆರ್ಥಿಕ ಸ್ವಾವಲಂಬನೆ ಹಾಗೂ ವಹಿವಾಟು ವಿಸ್ತರಣೆಗೆ ನೆರವಾಗಲು ಬ್ಯಾಂಕುಗಳಲ್ಲಿ ಬಡ್ಡಿರಹಿತವಾಗಿ ನೀಡುವ ಸಾಲದ ಮಿತಿಯನ್ನು 50,000 ರೂ. ಗಳಿಂದ ಮೂರು ಲಕ್ಷ ರೂ. ಗಳಿಗೆ ಹೆಚ್ಚಿಸಲಾಗುವುದು.ಮೀನುಗಾರ ಮಹಿಳೆಯರಿಗೆ ಬಡ್ಡಿರಹಿತ ಸಾಲದ ಮಿತಿ 50 ಸಾವಿರ ರೂ.ನಿಂದ 3 ಲಕ್ಷ ರೂ.ಗೆ ಹೆಚ್ಚಳ
ಮೀನುಗಾರರ ದೋಣಿಗಳಿಗೆ ರಿಯಾಯಿತಿ ದರದಲ್ಲಿ ನೀಡುತ್ತಿರುವ ಡೀಸೆಲ್ ಮಿತಿಯನ್ನು ಒಂದೂವರೆ ಲಕ್ಷ ಕಿಲೋ ಲೀಟರ್ನಿಂದ ಎರಡು ಲಕ್ಷ ಕಿಲೋ ಲೀಟರ್ಗಳವರೆಗೆ ಹೆಚ್ಚಿಸಲಾಗುವುದು.
-1ರಿಂದ 8ನೇ ತರಗತಿ ವರೆಗೆ ಮೆಟ್ರಿಕ್ ಪೂರ್ವ ವಿಧ್ಯಾರ್ಥಿ ವೇತನ; 60 ಕೋಟಿ ರೂ. ಮೀಸಲು.
-ಬೆಂಗಳೂರಿನ ಹಜ್ ಭವನದಲ್ಲಿ IAS/KAS ತರಬೇತಿ ಪ್ರಾರಂಭ.
-ನಾಲ್ಕು ಚಕ್ರಗಳ ವಾಹನ ಖರೀದಿಗೆ 3 ಲಕ್ಷ ರೂ. ಸಹಾಯಧನ.
-ಅರ್ಧಕ್ಕೆ ನಿಂತ ಶಾದಿಮಹಲ್ ಮರು ನಿರ್ಮಾಣಕ್ಕೆ ಚಾಲನೆ; 54 ಕೋಟಿ ರೂಪಾಯಿ ಇದಕ್ಕಾಗಿ ನೀಸಲು.
-10 ಹೊಸ ಅಲ್ಪಸಂಖ್ಯಾತ ಮೊರಾರ್ಜಿ ದೇಸಾಯಿ ಶಾಲೆಗಳ ಆರಂಭ
- ಈಗಿನ 62 ಅಲ್ಪಸಂಖ್ಯಾತ ಮೊರಾರ್ಜಿ ದೇಸಾಯಿ ಶಾಲೆಗ ಉನ್ನತಿಕರಣ, 6-12 ತರಗತಿಯವರೆಗೆ ಉನ್ನತಿಕರಣ
- ಮೌಲಾನಾ ಆಝಾದ್ ಶಾಲೆಗಳ ಸ್ವತಃ ಕಟ್ಟಡ ನಿರ್ಮಾಣಕ್ಕೆ ಕ್ರಮ
-ಅಲ್ಪಸಂಖ್ಯಾತ ವಿಧ್ಯಾರ್ಥಿಗಳ ಇಂಜಿನಿಯರಿಂಗ್, ವೈದ್ಯಕೀಯ ಕೊರ್ಸ್ ಗೆ ಸಾಲ; ವ್ಯಾಸಂಗ ಮಾಡಲು 2% ಬಡ್ಡಿ ದರದಲ್ಲಿ ಸಾಲ.
ಕರ್ನಾಟಕ ರತ್ನ ಡಾ. ಪುನೀತ್ ರಾಜ್‌ಕುಮಾರ್ ರವರ ಸ್ಮರಣಾರ್ಥವಾಗಿ ಹಠಾತ್ ಹೃದಯ ಸಂಬಂಧಿ ಸಾವುಗಳನ್ನು ತಡೆಗಟ್ಟಲು Automated External Defibrillators (AED) ಗಳನ್ನು ಜಿಲ್ಲಾ ಆಸ್ಪತ್ರೆ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಅಳವಡಿಸಲಾಗುವುದು.
ಇದಕ್ಕಾಗಿ ಆರು ಕೋಟಿ ರೂ. ಅನುದಾನ ಒದಗಿಸಲಾಗುವುದು.ಕರ್ನಾಟಕ ರತ್ನ ಡಾ. ಪುನೀತ್ ರಾಜ್‌ಕುಮಾರ್
ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಇದೀಗ ಯೋಜನೆ ಮುಂದುವರಿಸಲು 60 ಕೋಟಿ ಅನುದಾನ ಘೋಷಿಸಲಾಗಿದೆ.
-ಅಲ್ಪಸಂಖ್ಯಾತ ಸಂಖ್ಯಾತ ವಿದ್ಯಾರ್ಥಿಗಳ ವ್ಯಾಸಂಗಕ್ಕಾಗಿ ಶೈಕ್ಷಣಿಕ ಸಾಲ ಯೋಜನೆ ಅಡಿಯಲ್ಲಿ 28 ವೃತ್ತಿಪರ ಕೋರ್ಸ್ ವ್ಯಾಸಂಗ ಮಾಡಲು ಶೇ 2 ಬಡ್ಡಿ ದರದಲ್ಲಿ ಸಾಲ.
-ರಾಜ್ಯದ ಎಲ್ಲಾ ಅಲ್ಪಸಂಖ್ಯಾತ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಭಾಷಾ ಪ್ರಯೋಗಾಲಯ ಐದು ಕೋಟಿ ವೆಚ್ಚದಲ್ಲಿ ಸ್ಥಾಪನೆ.
-ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಹತ್ತು ತಿಂಗಳು ವಸತಿ ಸಹಿತ ಐಎಎಸ್ ಹಾಗೂ ಕೆ ಎ ಎಸ್ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ.
-ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಿಶ್ವಮಟ್ಟದ ವಿವಿ ಗಳಲ್ಲಿ ಪದವಿ ಸ್ನಾತಕೋತ್ತರ ವ್ಯಾಸಾಂಗ ಅನುಕೂಲಕ್ಕೆ ಶೂನ್ಯ ಬಡ್ಡಿದರದಲ್ಲಿ 20 ಲಕ್ಷದ ವರಗೆ ಸಾಲ.
► ಇಂದಿರಾ ಕ್ಯಾಂಟೀನ್ ಪುನರಾರಂಭಕ್ಕೆ ನಿರ್ಧಾರ
-ಮೊದಲನೇ ಹಂತದಲ್ಲಿ ಬಿಬಿಎಂಪಿ ಹಾಗೂ ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಪುನರಾರಂಭ ಮಾಡಲು ನಿರ್ಧಾರ ಮಾಡಲಾಗಿದೆ.
-ಎರಡನೇ ಹಂತದಲ್ಲಿ ಎಲ್ಲಾ ಹೊಸ ಪಟ್ಟಣ ಹಾಗೂ ಬಿಬಿಎಂಪಿ ಹೊಸ ವಾರ್ಡ್ ಗಳಲ್ಲಿ ಕ್ಯಾಂಟೀನ್ ಆರಂಭ.
-ಪ್ರಸಕ್ತ ಸಾಲಿನಲ್ಲಿ ಇಂದಿರಾ ಕ್ಯಾಂಟೀನ್ ದುರಸ್ತಿ ನವೀಕರಣ ಹಾಗೂ ನಿರ್ವಹಣೆಗೆ 100 ಕೋಟಿ ಮೀಸಲು.
-ಫೆರಿಪರಲ್ ರಿಂಗ್ ರಸ್ತೆಗೆ ಅನುಮತಿ
-ಹೈಡೆನ್ಸಿಟಿ ರಸ್ತೆಗಳ ಅಭಿವೃದ್ಧಿಗೆ ಕ್ರಮ
-273 ಕೋಟಿ ಅನುದಾನ ನೀಡಲು ನಿರ್ಧಾರ
-ವೈಟ್ ಟಾಪಿಂಗ್ ಯೋಜನೆಗೆ 800 ಕೋಟಿ ಅನುದಾನ
-ಮೇಲ್ಸೇತುವೆ ನಿರ್ಮಾಣಕ್ಕೆ 263 ಕೋಟಿ
-ತ್ಯಾಜ್ಯ ನೀರು ಸಂಸ್ಕರಣ ಘಟಕಕ್ಕೆ 1411 ಕೋಟಿ
-ಬೆಂಗಳೂರುಮೂಲಸೌಕರ್ಯಕ್ಕೆ 12 ಸಾವಿರ ಕೋಟಿ
-ಫೆರಿಪರಲ್ ರಿಂಗ್ ರಸ್ತೆಗೆ ಅನುಮತಿ
-ಹೈಡೆನ್ಸಿಟಿ ರಸ್ತೆಗಳ ಅಭಿವೃದ್ಧಿಗೆ ಕ್ರಮ
-273 ಕೋಟಿ ಅನುದಾನ ನೀಡಲು ನಿರ್ಧಾರ
-ವೈಟ್ ಟಾಪಿಂಗ್ ಯೋಜನೆಗೆ 800 ಕೋಟಿ ಅನುದಾನ
-ಮೇಲ್ಸೇತುವೆ ನಿರ್ಮಾಣಕ್ಕೆ 263 ಕೋಟಿ
-ತ್ಯಾಜ್ಯ ನೀರು ಸಂಸ್ಕರಣ ಘಟಕಕ್ಕೆ 1411 ಕೋಟಿ
-ಬೆಂಗಳೂರುಮೂಲಸೌಕರ್ಯಕ್ಕೆ 12 ಸಾವಿರ ಕೋಟಿ
-ಶಿಡ್ಲಘಟ್ಟದಲ್ಲಿ 75 ಕೋಟಿ ವೆಚ್ಚದಲ್ಲಿ ರೇಷ್ಮೆ ಮಾರುಕಟ್ಟೆ
ನಮ್ಮ ಮೆಟ್ರೊಗೆ 30ಸಾವಿರ ಕೋಟಿ ಅನುದಾನ
ಆಹಾರ ಇಲಾಖೆಗೆ 10ಸಾವಿರ ಕೋಟಿ ಅನುದಾನ
ಸಮಾಜ ಕಲ್ಯಾಣ ಇಲಾಖೆಗೆ 11 ಸಾವಿರ ಕೋಟಿ ಅನುದಾನ
ಲೋಕೋಪಯೋಗಿ ಇಲಾಖೆಗೆ 10ಸಾವಿರ ಕೋಟಿ ಅನುದಾನ
ನಂದಿನಿ ಮಾದರಿಯಲ್ಲಿ ಏಕೀಕೃತ ಬ್ರಾಂಡ್‌ಗೆ 10 ಕೋಟಿ ಅನುದಾನ
-ಐದು ಗ್ಯಾರಂಟಿ ಯೋಜನೆಗಳಿಗೆ 52,000 ಕೋಟಿ. ರೂ.
-ಅಬಕಾರಿ ತೆರಿಗೆ ಶೇ. 20 ಹೆಚ್ಚಳ
-ನಮ್ಮ ಮೆಟ್ರೋಗೆ 30,000 ಕೋ. ರೂ.
-ಅನುಗ್ರಹ ಯೋಜನೆ ಮರುಜಾರಿ
-ಹಸು, ಎತ್ತು, ಎಮ್ಮೆ, ಮೃತಪಟ್ಟರೆ 10,000 ರೂ . ಪರಿಹಾರ
ವಿಧಾನಸಭೆಯಲ್ಲಿ ಮಧ್ಯಾಹ್ನ 12 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡನೆ ಆರಂಭಿಸಿದ್ದಾರೆ.
ಅವರು ಮುಖ್ಯಮಂತ್ರಿಯಾಗಿ 14ನೇ ಹಾಗೂ ಒಟ್ಟು 17ನೇ ಬಾರಿ ಬಜೆಟ್ ಮಂಡನೆ ಮಾಡುತ್ತಿದ್ದಾರೆ.