ಕೌದೇನಹಳ್ಳಿ | ಮಕ್ಕಾ ಮಸ್ಜಿದ್ ವತಿಯಿಂದ ಗ್ರಂಥಾಲಯ, ಸ್ಮಾರ್ಟ್ ಕ್ಲಾಸ್ ಕೊಠಡಿ ಉದ್ಘಾಟನೆ

Update: 2023-08-15 12:37 GMT

ಬೆಂಗಳೂರು, ಆ.15: ಆರ್ಥಿಕವಾಗಿ ಸಂಕಷ್ಟದಲ್ಲಿರುವ ಬಡವರು ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ನೆರವು ನೀಡುವ ಉದ್ದೇಶದಿಂದ ರಾಮಮೂರ್ತಿ ನಗರ ವಾರ್ಡ್‍ನ ಕೌದೇನಹಳ್ಳಿ ಗ್ರಾಮದಲ್ಲಿ ಮಕ್ಕಾ ಮಸ್ಜಿದ್ ಟ್ರಸ್ಟ್ ವತಿಯಿಂದ ಗ್ರಂಥಾಲಯ ಹಾಗೂ ಸ್ಮಾರ್ಟ್ ಕ್ಲಾಸ್ ಕೊಠಡಿಯನ್ನು ಉದ್ಘಾಟಿಸಲಾಯಿತು.

ಮಂಗಳವಾರ 77ನೆ ಸ್ವಾತಂತ್ರ್ಯೋತ್ಸವದ ಅಂಗವಾಗಿ ಈದ್ಗಾ ಆವರಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಧ್ವಜಾರೋಹರಣ ನೆರವೇರಿಸಿದ ಬಳಿಕ ಸಮಾಜ ಸೇವಕರಾದ ಗೋಪಾಲ ಗ್ರಂಥಾಲಯವನ್ನು ಹಾಗೂ ಎ.ಮಾದಪ್ಪ ಅವರು ಸ್ಮಾರ್ಟ್ ಕ್ಲಾಸ್ ಕೊಠಡಿಗಳನ್ನು ಉದ್ಘಾಟಿಸಿದರು.

ಇಖ್ರಾ ದೀನಿಯಾತ್ ಮಖ್ತಬ್‍ನ ವಿದ್ಯಾರ್ಥಿಗಳು ದೇಶಪ್ರೇಮದ ಸಂದೇಶ ಸಾರುವ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಮಕ್ಕಾ ಮಸ್ಜಿದ್ ಟ್ರಸ್ಟ್ ಅಧ್ಯಕ್ಷ ಎಸ್.ಎ.ಅಝೀಝ್, ಉಪಾಧ್ಯಕ್ಷ ಅಬ್ದುಲ್ ಜಾವೀದ್, ಪ್ರಧಾನ ಕಾರ್ಯದರ್ಶಿ ಅನ್ವರ್ ಬಾಷ, ಕಾರ್ಯದರ್ಶಿ(ಸಂಘಟನೆ) ಹಸ್ನತ್ ಶರೀಫ್, ನಿಮ್ರಾ ಮಸ್ಜಿದ್ ಕಾರ್ಯದರ್ಶಿ ಮಹಬೂಬ್ ಪಾಷ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News