ಸಾಮಾಜಿಕ ಜಾಲತಾಣಗಳಲ್ಲೂ ಕಾವೇರಿಸಿದ ʼಕಾವೇರಿʼ
ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಸೆ.26ಕ್ಕೆ ಬೆಂಗಳೂರು ನಗರ ಬಂದ್ ಗೆ ಕರೆ ನೀಡಿದ್ದು, ಮತ್ತೊಂದು ಕಡೆ ಕಾವೇರಿ ಹೋರಾಟದ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಈ ನಡುವೆ ಸಾಮಾಜಿಕ ಜಾಲತಾಣ x ನಲ್ಲಿ ‘ಕಾವೇರಿ ನಮ್ಮದು‘ ಎಂಬ ಅಭಿಯಾನಕ್ಕೆ ಕರೆ ನೀಡಲಾಗಿದೆ. ಈಗಾಗಲೇ #ಕಾವೇರಿನಮ್ಮದು ಎಂಬ ಹ್ಯಾಶ್ ಟ್ಯಾಗ್ ಟ್ರೆಂಡ್ ನಲ್ಲಿದೆ.
ʼಕಾವೇರಿ ನಮ್ಮದುʼ ಎಂಬ ಅಭಿಯಾನಕ್ಕೆ ಕನ್ನಡ ಪರ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳ ನಾಯಕರು ಈ ಅಭಿಯಾನದಲ್ಲಿ ಭಾಗವಹಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸೇರಿ ರಾಜಕೀಯ ನಾಯಕರು ಕೂಡ #ಕಾವೇರಿನಮ್ಮದು ಎಂಬ ಹ್ಯಾಶ್ ಟ್ಯಾಗ್ ಬಳಸಿ ಪೋಸ್ಟ್ ಮಾಡಿದ್ದಾರೆ.
ʼʼನಾಡು ಮತ್ತು ನಾಡಿನ ರೈತರ ಹಿತ ಕಾಪಾಡುವ ನಮ್ಮ ಪ್ರಯತ್ನ ನಿರಂತರವಾಗಿದೆʼʼ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ನಾಳೆ (ಸೆ. 26) ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಬೆಂಗಳೂರು ಬಂದ್‌ಗೆ ಕರೆ ನೀಡಿದ್ದು, ಮಂಡ್ಯ ಹಾಗೂ ದಾವಣಗೆರೆ ನಗರಗಳಲ್ಲಿ ಈಗಾಗಲೇ ವಿವಿಧ ಸಂಘಟನೆಗಳು ಬಂದ್ ಮಾಡಿ ಪ್ತತಿಭಟನೆ ನಡೆಸಿವೆ.
ʼʼನಮ್ಮ ನೆಲದಲ್ಲಿ ಬಿದ್ದ ಮಳೆ ನೀರನ್ನ ನಾವೇ ಬಳಸಬೇಕು ಹಾಗು ನಮ್ಮ ನೆಲದಲ್ಲಿ ನಮ್ಮ ಹಣದಲ್ಲಿ ಡ್ಯಾಂ ಕಟ್ಟಿ ಆ ನೀರನ್ನ ಸಂಗ್ರಹಿಸಿ ಅದು ನಮ್ಮ ರೈತರ ಉಪಯೋಗಕ್ಕೆ ಆಗಬೇಕೇ ಹೊರತು ಇನ್ನೊಂದು ರಾಜ್ಯದ ಉದ್ದಾರ ಮಾಡಲು ಅಲ್ಲʼʼ ಎಂದು ಎಂದು ಕನ್ನಡಪರ ಸಂಘಟನೆಯ ರೂಪೇಶ್ ರಾಜಣ್ಣ ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ಮೋದಿ ಮಧ್ಯಪ್ರವೇಶಕ್ಕೆ ಎಚ್.ಡಿ.ದೇವೇಗೌಡ ಒತ್ತಾಯ
ʼಕಾವೇರಿ ನದಿ ನೀರಿನ ವಿಷಯದಲ್ಲಿ ಪ್ರಧಾನಿ ಮೋದಿ ತಕ್ಷಣವೇ ಮಧ್ಯಪ್ರವೇಶ ಮಾಡಬೇಕು ಹಾಗೂ ಎರಡೂ ರಾಜ್ಯಗಳ ವಾಸ್ತವ ಸ್ಥಿತಿಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಸುಪ್ರೀಂ ಕೋರ್ಟಿಗೆ ಪರಿಶೀಲನಾ ಅರ್ಜಿ ಸಲ್ಲಿಸಲು ಜಲಶಕ್ತಿ ಸಚಿವಾಲಯಕ್ಕೆ ಆದೇಶ ಮಾಡಬೇಕು’ ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಒತ್ತಾಯಿಸಿದ್ದಾರೆ.
#ಕಾವೇರಿನಮ್ಮದು#Dboss #kaatera #BossOfSandalwood@dasadarshanBOSSpic.twitter.com/Zpb69HeiDB
— Fan of dalapathy (@fanofdalapathy) September 25, 2023