ಡಿ.ಕೆ ಶಿವಕುಮಾರ್ ಮತ್ತೆ ಜೈಲಿಗೆ ಹೋಗಲಿದ್ದಾರೆ ಎಂದ ಕೆ.ಎಸ್‌ ಈಶ್ವರಪ್ಪ

Update: 2023-10-19 09:57 GMT

ಶಿವಮೊಗ್ಗ, ಅ.19: ಡಿ.ಕೆ ಶಿವಕುಮಾರ್ ಅವರು ಜೈಲಿನಿಂದ ಬಿಡುಗಡೆಯಾಗಿ ಬೆಂಗಳೂರಿನಿಂದ ಮೆರವಣಿಗೆಯಲ್ಲಿ ಬಂದಿದ್ದು ನೋಡಿ ಕೇಸ್ ಖುಲಾಸೆಯಾಗಿದೆ ಅಂದುಕೊಂಡಿದ್ದೆ. ಇಷ್ಟು ಭಂಡತನ ನಾನು ನೋಡಿರಲಿಲ್ಲ, ಇಂದಲ್ಲ ನಾಳೆ ಮತ್ತೆ ಅವರು ಜೈಲಿಗೆ ಹೋಗಲಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ʼಡಿ.ಕೆ ಶಿವಕುಮಾರ್ ಎಷ್ಟರ ಮಟ್ಟಿಗೆ ಅಕ್ರಮವಾಗಿ ಹಣ ಮಾಡಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ. ಇದೇ ಕೇಸ್ ವಿಚಾರಕ್ಕೆ ಅವರು ಜೈಲಲ್ಲಿ ಇದ್ದರು. ಈಗ ಬೇಲ್ ಮೇಲೆ ಹೊರಗಿದ್ದಾರೆ. ಮತ್ತೆ ಜೈಲು ಸೇರಲಿದ್ದಾರೆʼ ಎಂದು ಅವರು ಹೇಳಿದ್ದಾರೆ.

ಜೈಲಿನಿಂದ ಹೊರಬಂದಾಗ ವಿರೋಚಿತವಾಗಿ ಮೆರವಣಿಗೆ ನಡೆಸಿದ್ದರು. ಈಗ ಸಿಬಿಐ ಮತ್ತೆ ತನಿಖೆ ನಡೆಸಲಿದೆ. ಡಿ.ಕೆ. ಶಿವಕುಮಾರ್ ಭಂಡತನದಿಂದ ವರ್ತಿಸುತ್ತಿದ್ದಾರೆ. ಅಕ್ರಮ ಹಣ ಸಿಕ್ಕಾಗ ತನಿಖೆ ಮಾಡುತ್ತೆವೆಂದು ಹೇಳಬೇಕು. ಆದರೆ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಏನು ಬೇಕಾದರೂ ಉತ್ತರ ಕೊಡುತ್ತಾರೆ ಎಂದು ಹೇಳಿದರು.

ಸರ್ಕಾರ ಬೀಳಿಸುವ ಬಿಜೆಪಿ ಪ್ರಯತ್ನ ಮಾಡುತ್ತಿದೆ ಎಂದು ಡಿಕೆಶಿ ಹೇಳಿಕೆಗೆ ತಿರುಗೇಟು ನೀಡಿದ್ದು, ಯಾಕೆ ಕಾಂಗ್ರೆಸ್ ಸರ್ಕಾರ ಬೀಳಿಸಬಾರದು.‌ ಬಿಜೆಪಿ ಸರ್ಕಾರ ಯಾಕೆ ಬರಬಾರದು. ಡಿಕೆ ಶಿವಕುಮಾರ್ ಬೆಳಗಾವಿಗೆ ಹೋದರೆ ಒಬ್ಬ ಶಾಸಕ ಇಲ್ಲ ಎಂದಾದರೆ ಏನು ಮೆಸೇಜ್ ಹೋಗುತ್ತದೆ. ಕಾಂಗ್ರೆಸ್ ಸರ್ಕಾರ ಬೇಡ ಎಂದು ಅವರ ಶಾಸಕರೆ ತೀರ್ಮಾನ ಮಾಡಿದ್ದಾರೆ. ರಾಜ್ಯದ ಜನರು ಕಾಂಗ್ರೆಸ್ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಸತೀಶ್ ಜಾರಕಿಹೊಳಿ ಶಾಸಕರನ್ನು ಫಾರೀನ್ ಗಾದರೂ ಕರೆದುಕೊಂಡು ಹೋಗಲಿ, ಎಲ್ಲಿಗಾದರೂ ಕರೆದುಕೊಂಡು ಹೋಗಲಿ. ಒಟ್ಟಾರೆ ಅವರೆಲ್ಲರೂ ಈ ಸರ್ಕಾರದ ವಿರುದ್ಧ ತಿರುಗಿ ಬಿದ್ದಿರುವುದು ನಿಜ.ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಎದುರಾಗಿದೆ. ಯಾವ ಇಲಾಖೆಯ ಕೆಲಸಗಳು ಆಗುತ್ತಿಲ್ಲ ಎಂದು ಅವರು ಕಿಡಿಕಾರಿದ್ದಾರೆ ಎಂದರು.


Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News