ಲೋಕಸಭಾ ಚುನಾವಣಾ ಫಲಿತಾಂಶ | ಮತ ಎಣಿಕೆಗೆ ಕ್ಷಣಗಣನೆ

Update: 2024-06-04 02:50 GMT

ಬೆಂಗಳೂರು: ಲೋಕಸಭಾ ಚುನಾವಣಾ ಫಲಿತಾಂಶ ಘೋಷಣೆಗೆ ಕ್ಷಣಗಣನೆ ಆರಂಭವಾಗಿದ್ದು, ಕರ್ನಾಟಕದಲ್ಲಿ ಮತ ಎಣಿಕೆ ಕಾರ್ಯಕ್ಕೆ ಚುನಾವಣಾ ಆಯೋಗ ಸಕಲ ಸಿದ್ಧತೆ ಪೂರ್ಣಗೊಳಿಸಿದೆ.

ರಾಜ್ಯದಲ್ಲಿ ಎರಡು ಹಂತಗಳಲ್ಲಿ(ಎ.26 ಹಾಗೂ ಮೇ 7)28 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ಬೆಳಗ್ಗೆ 8 ಗಂಟೆಗೆ ಏಕಕಾಲಕ್ಕೆ ಮತಗಳ ಎಣಿಕೆ ಕಾರ್ಯ ಆರಂಭಗೊಳ್ಳಲಿದ್ದು, ಮಧ್ಯಾಹ್ನದ ವೇಳೆಗೆ ಫಲಿತಾಂಶದ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ. ಈ ಸಂದರ್ಭದಲ್ಲಿ ಯಾವುದೆ ರೀತಿಯ ಅಹಿತಕರ ಘಟನೆಗಳು ನಡೆದಂತೆ ಕಟ್ಟೆಚ್ಚರ ವಹಿಸಲಾಗಿದೆ.

ಪೊಲೀಸ್ ಬಂದೋಬಸ್ತ್

ಲೋಕಸಭಾ ಚುನಾವಣೆ ಫಲಿತಾಂಶ ಹಿನ್ನಲೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಆಯಾ ಜಿಲ್ಲಾ ಕೇಂದ್ರ ವ್ಯಾಪ್ತಿಯ ಮತ ಎಣಿಕೆ ಕೇಂದ್ರ ಸೇರಿದಂತೆ ಸಾರ್ವಜನಿಕ ಪ್ರದೇಶ, ಧಾರ್ಮಿಕ ಸ್ಥಳಗಳ ವ್ಯಾಪ್ತಿಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಜತೆಗೆ, ಕಾನೂನು ಬಾಹಿರ ಚಟುವಟಿಕೆ, ಮಾರಕಾಸ್ತ್ರಗಳನ್ನು ಇಟ್ಟುಕೊಳ್ಳದಂತೆ ನಿಷೇಧಾಜ್ಞೆ ಜಾರಿ ಮಾಡಿ, ಕಟ್ಟುನಿಟ್ಟಿನ ಕ್ರಮಕ್ಕೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಜಿಲ್ಲಾ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಅದರಲ್ಲೂ ಮತ ಎಣಿಕೆಗಾಗಿ ಬೆಂಗಳೂರು ನಗರ ಪೊಲೀಸ್ ಘಟಕದಿಂದ ಒಟ್ಟು 1,524 ಅಧಿಕಾರಿಗಳು, ಸಿಬ್ಬಂದಿ, 13 ಸಶಸ್ತ್ರ ಮೀಸಲು ಘಟಕಗಳು ಮತ್ತು ನಾಲ್ಕು ತ್ವರಿತ ಪ್ರತಿಕ್ರಿಯೆ ತಂಡಗಳನ್ನು ನಿಯೋಜಿಸಲಾಗಿದ್ದು, ಈಗಾಗಲೇ ಸಿವಿಲ್ ಮತ್ತು ನಗರ ಸಶಸ್ತ್ರ ಮೀಸಲು ಘಟಕಗಳು ಸೇರಿದಂತೆ 516 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಮೂರು ಪಾಳಿಗಳಲ್ಲಿ ಸ್ಟ್ರಾಂಗ್ ರೂಮ್ ಭದ್ರತಾ ಕರ್ತವ್ಯವನ್ನು ನಿರ್ವಹಿಸಲು ನಿಯೋಜಿಸಲಾಗಿದೆ.

ಮತ ಎಣಿಕೆ ಕೇಂದ್ರಗಳ ಸುತ್ತ ಸಂಚಾರ ದಟ್ಟಣೆಗೆ ಅಡ್ಡಿಯಾಗದಂತೆ 400 ಕ್ಕೂ ಹೆಚ್ಚು ಸಂಚಾರ ವಿಭಾಗದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ, ಮೂರು ಮತ ಎಣಿಕೆ ಕೇಂದ್ರಗಳಲ್ಲಿನ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ನಗರದ ಒಟ್ಟು 2,400 ಕ್ಕೂ ಹೆಚ್ಚು ಪೆÇಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಮತ ಎಣಿಕೆ ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು

► ಧಾರವಾಡ : ಪ್ರಹ್ಲಾದ್‌ ಜೋಶಿ(ಬಿಜೆಪಿ), ವಿನೋದ್‌ ಅಸೂಟಿ(ಕಾಂಗ್ರೆಸ್)‌

► ಹಾವೇರಿ : ಬಸವರಾಜ ಬೊಮ್ಮಾಯಿ(ಬಿಜೆಪಿ), ಆನಂದಸ್ವಾಮಿ ಗಡ್ಡದೇವರಮಠ (ಕಾಂಗ್ರೆಸ್)‌

► ಬಾಗಲಕೋಟೆ : ಪಿಸಿ ಗದ್ದಿಗೌಡರ್(ಬಿಜೆಪಿ), ಸಂಯಕ್ತಾ ಪಾಟೀಲ್​ (ಕಾಂಗ್ರೆಸ್)‌

► ಚಾಮರಾಜನಗರ : ಸುನೀಲ್ ಬೋಸ್(ಕಾಂಗ್ರೆಸ್), ಎಸ್ ಬಾಲರಾಜು (ಬಿಜೆಪಿ)‌

► ತುಮಕೂರು : ವಿ. ಸೋಮಣ್ಣ(ಬಿಜೆಪಿ) ಎಸ್‌.ಪಿ ಮುದ್ದಹನುಮೇಗೌಡ (ಕಾಂಗ್ರೆಸ್)‌

► ಕೋಲಾರ : ಎಂ. ಮಲ್ಲೇಶ್​ ಬಾಬು(ಜೆಡಿಎಸ್‌) , ಕೆ.ವಿ. ಗೌತಮ್ (ಕಾಂಗ್ರೆಸ್)‌

► ಚಿತ್ರದುರ್ಗ : ಬಿ ಎನ್ ಚಂದ್ರಪ್ಪ(ಕಾಂಗ್ರೆಸ್)‌, ಗೋವಿಂದ ಕಾರಜೋಳ (ಬಿಜೆಪಿ)

►  ಚಿಕ್ಕಬಳ್ಳಾಪುರ : ಡಾ.ಕೆ. ಸುಧಾಕರ್ (ಬಿಜೆಪಿ), ರಕ್ಷಾ ರಾಮಯ್ಯ (ಕಾಂಗ್ರೆಸ್)‌

► ಮೈಸೂರು : ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್(ಬಿಜೆಪಿ), ಎಂ. ಲಕ್ಷಣ್ (ಕಾಂಗ್ರೆಸ್)‌

► ಬೆಂಗಳೂರು  ಕೇಂದ್ರ :  ಮನ್ಸೂರ್ ಅಲಿ ಖಾನ್ (ಕಾಂಗ್ರೆಸ್)‌, ಪಿಸಿ ಮೋಹನ್(ಬಿಜೆಪಿ)

► ಬೆಂಗಳೂರು ದಕ್ಷಿಣ : ತೇಜಸ್ವಿ ಸೂರ್ಯ (ಬಿಜೆಪಿ), ಸೌಮ್ಯ ರೆಡ್ಡಿ (ಕಾಂಗ್ರೆಸ್)‌

► ಬೆಂಗಳೂರು ಉತ್ತರ :  ಶೋಭಾ ಕರಂದ್ಲಾಜೆ (ಬಿಜೆಪಿ), ಎಂ ವಿ ರಾಜೀವ್​ ಗೌಡ ಸ್ಪರ್ಧೆ (ಕಾಂಗ್ರೆಸ್)‌

► ವಿಜಯಪುರ : ರಮೇಶ್‌ ಜಿಗಜಿಣಗಿ (ಬಿಜೆಪಿ), ರಾಜು ಆಲಗೂರ (ಕಾಂಗ್ರೆಸ್)‌

► ಹಾಸನ : ಪ್ರಜ್ವಲ್ ರೇವಣ್ಣ (ಜೆಡಿಎಸ್)‌,  ಶ್ರೇಯಸ್ ಪಟೇಲ್ (ಕಾಂಗ್ರೆಸ್)‌

► ಬಳ್ಳಾರಿ : ಇ.ತುಕಾರಾಂ(ಕಾಂಗ್ರೆಸ್)‌ , ‍ಶ್ರೀರಾಮುಲು (ಬಿಜೆಪಿ)

► ರಾಯಚೂರು : ರಾಜಾ ಅಮರೇಶ್ವರ ನಾಯಕ್ (ಬಿಜೆಪಿ) ಜಿ ಕುಮಾರ್ ನಾಯ್ಕ್ (ಕಾಂಗ್ರೆಸ್‌ )

► ಕೊಪ್ಪಳ : ಬಸವರಾಜ ಕ್ಯಾವಟರ್‌ (ಬಿಜೆಪಿ), ಕೆ.ರಾಜಶೇಖರ್ ಹಿಟ್ನಾಳ್ (ಕಾಂಗ್ರೆಸ್‌ )

► ಬೆಳಗಾವಿ : ಮೃಣಾಲ್  ಹೆಬ್ಬಾಳ್ಕರ್(ಕಾಂಗ್ರೆಸ್‌ ), ಜಗದೀಶ್ ಶೆಟ್ಟರ್ (ಬಿಜೆಪಿ)

► ಚಿಕ್ಕೋಡಿ : ಅಣ್ಣಾ ಸಾಹೇಬ ಜೊಲ್ಲೆ(ಬಿಜೆಪಿ), ಪ್ರಿಯಾಂಕಾ ಜಾರಕಿಹೊಳಿ (ಕಾಂಗ್ರೆಸ್‌ )

► ಬೀದರ್‌ : ಭಗವಂತ ಖೂಬಾ (ಬಿಜೆಪಿ), ಸಾಗರ್ ಖಂಡ್ರೆ (ಕಾಂಗ್ರೆಸ್‌ )

► ಉತ್ತರ ಕನ್ನಡ : ವಿಶ್ವೇಶ್ವರ ಹೆಗಡೆ ಕಾಗೇರಿ(ಬಿಜೆಪಿ), ಅಂಜಲಿ ನಿಂಬಾಳ್ಕರ್ (ಕಾಂಗ್ರೆಸ್‌ )

► ಶಿವಮೊಗ್ಗ :  ಗೀತಾ ಶಿವರಾಜ್​ಕುಮಾರ್ (ಕಾಂಗ್ರೆಸ್‌ ), ಬಿವೈ ರಾಘವೇಂದ್ರ (ಬಿಜೆಪಿ), ಕೆಎಸ್​ ಈಶ್ವರಪ್ಪ (ಪಕ್ಷೇತರ)

► ಉಡುಪಿ-ಚಿಕ್ಕಮಗಳೂರು : ಕೋಟ ಶ್ರೀನಿವಾಸ್ ಪೂಜಾರಿ(ಬಿಜೆಪಿ), ಜಯಪ್ರಕಾಶ್ ಹೆಗ್ಡೆ (ಕಾಂಗ್ರೆಸ್‌ )

► ದಕ್ಷಿಣ ಕನ್ನಡ : ಬ್ರಿಜೇಶ್ ಚೌಟ (ಬಿಜೆಪಿ), ಪದ್ಮರಾಜ್ (ಕಾಂಗ್ರೆಸ್‌ )

► ಮಂಡ್ಯ : ಎಚ್‌.ಡಿ.ಕುಮಾರಸ್ವಾಮಿ (ಜೆಡಿಎಸ್‌), ಸ್ಟಾರ್‌ ಚಂದ್ರು (ಕಾಂಗ್ರೆಸ್‌ )

► ಡಾ. ಪ್ರಭಾ (ಕಾಂಗ್ರೆಸ್‌ ) , ಗಾಯತ್ರಿ ಸಿದ್ದೇಶ್ವರ್​​ (ಜೆಡಿಎಸ್‌)




Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News