ಲೋಕಸಭೆ ಚುನಾವಣೆ | ಅಧಿಸೂಚನೆ ಪ್ರಕಟ: ರಾಜ್ಯದ 14 ಕ್ಷೇತ್ರಗಳಿಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ

Update: 2024-03-28 04:42 GMT

Image source: Election commission of India

ಬೆಂಗಳೂರು, ಮಾ.28: ಲೋಕಸಭಾ ಚುನಾವಣೆಯ ಅಧಿಕೃತ ಪ್ರಕ್ರಿಯೆಗಳು ರಾಜ್ಯದಲ್ಲಿ ಇಂದಿನಿಂದ(ಮಾ.28) ಆರಂಭವಾಗುತ್ತಿದೆ. ಚುನಾವಣಾ ಆಯೋಗವು ಅಧಿಸೂಚನೆ ಹೊರಡಿಸಿದ್ದು, ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರಗಳ ಪೈಕಿ ಮೊದಲ ಹಂತದಲ್ಲಿ 14 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಇಂದಿನಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ.

ಎಪ್ರಿಲ್ 4ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಎ.5ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಎ.8ರಂದು ಉಮೇದುವಾರಿಕೆಗಳನ್ನು ಹಿಂಪಡೆಯಲು ಕೊನೆಯ ದಿನವಾಗಿದೆ. ಎ.26ರಂದು ಮತದಾನ ನಡೆಯಲಿದ್ದು, ಜೂನ್ 4ರಂದು ಫಲಿತಾಂಶ ಹೊರಬೀಳಲಿದೆ.

ಮೊದಲ ಹಂತದಲ್ಲಿ ಚುನಾವಣೆ ನಡೆಯುವ ರಾಜ್ಯದ 14 ಲೋಕಸಭಾ ಕ್ಷೇತ್ರಗಳು ಇಂತಿವೆ...

• ಉಡುಪಿ - ಚಿಕ್ಕಮಗಳೂರು

• ಹಾಸನ

• ದಕ್ಷಿಣ ಕನ್ನಡ

• ಚಿತ್ರದುರ್ಗ (ಎಸ್.ಸಿ.)

• ತುಮಕೂರು

• ಮಂಡ್ಯ

• ಮೈಸೂರು

• ಚಾಮರಾಜನಗರ (ಎಸ್.ಸಿ.)

• ಬೆಂಗಳೂರು ಗ್ರಾಮಾಂತರ

• ಬೆಂಗಳೂರು ಉತ್ತರ

• ಬೆಂಗಳೂರು ಕೇಂದ್ರ

• ಬೆಂಗಳೂರು ದಕ್ಷಿಣ

• ಚಿಕ್ಕಬಳ್ಳಾಪುರ

• ಕೋಲಾರ (ಎಸ್.ಸಿ.)

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News